ರಾಯಚೂರು: ಕೋಳಿ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

 Raichur News: ಕೋಳಿ ಕಳ್ಳನನ್ನು ಗ್ರಾಮಸ್ಥರು ಸೆರೆ ಹಿಡಿದು ಮನಬಂದಂತೆ ಥಳಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ

Man stealing chicken Caught and beaten up by villagers in raichuru mnj

ರಾಯಚೂರು (ಜು. 27):  ಕೋಳಿ ಕಳ್ಳನನ್ನು ಗ್ರಾಮಸ್ಥರು ಸೆರೆ ಹಿಡಿದು ಮನಬಂದಂತೆ ಥಳಿಸಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲ್ಕೋಡ ಗ್ರಾಮದಲ್ಲಿ ನಡೆದಿದೆ.  ಕೋಳಿ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಥಳಿಸಿದ್ದಾರೆ. ಆರೋಪಿ ರಾಜಾಸಾಬ್ ಎನ್ನುವವರ ಮನೆಯಲ್ಲಿ ಕೋಳಿ ಕಳ್ಳತನ ಮಾಡಿದ್ದ,  10 ಕೋಳಿಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ವೇಳೆ ಖದೀಮ ಸೆರೆಯಾಗಿದ್ದಾನೆ. 

ಸೆರೆ ಹಿಡಿದ ಕಳ್ಳನನ್ನು ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ.  ಮೂವರು ಕಳ್ಳರಲ್ಲಿ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸಿಕ್ಕ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. 

ಚಿಕನ್‌ ಅಂಗಡಿಯ ಬೀಗ ಮುರಿದು 50 ಕೋಳಿ ಕಳ್ಳತನ: ಚಿಕನ್‌ ಅಂಗಡಿಯ ಬೀಗ ಮುರಿದು ಅದರೊಳಗಿದ್ದ 50 ಕೋಳಿಗಳನ್ನು ಕಳುವು ಮಾಡಿರುವ ಘಟನೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರ ಸರ್ವಿಸ್‌ ರಸ್ತೆ ಬದಿಯ ಬಳಿಯ ಅಂಗಡಿಯಲ್ಲಿ ಭಾನುವಾರ ನಡೆದಿದೆ. 

ಜೀವಂತ ಪ್ರಾಣಿಗಳ ಕಳ್ಳಸಾಗಣೆ: ಇಬ್ಬರು ಭಾರತೀಯ ಮಹಿಳೆಯರು ಸೆರೆ

ಗುಣಸಾಗರದ ಹಾಲೇಶನ ಕೋಳಿ ಫಾರಂನಿಂದ 50 ಕೋಳಿಗಳನ್ನು ಖರೀದಿಸಿ ತಂದು ಚಿಕನ್‌ ಅಂಗಡಿಯಲ್ಲಿ ಬಿಟ್ಟು ಬೀಗ ಹಾಕಿಕೊಂಡು ಹೋಗಿದ್ದು, ಭಾನುವಾರ ಬೆಳಗ್ಗೆ ಎಂದಿನಂತೆ ಅಂಗಡಿ ತೆರೆಯಲು ಹೋದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಅಲ್ಲದೆ ಅಕ್ಕಪಕ್ಕದ ಚಿಕನ್‌ ಅಂಗಡಿಗಳ ಬೀಗ ಮುರಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ ಎಂದು ತಿಳಿದಿದೆ. 

ಸುಮಾರು 15 ಸಾವಿರ ಬೆಲೆಬಾಳುವ ಒಟ್ಟು 150 ಕೆಜಿ ತೂಕದ 50 ಕೋಳಿಗಳು ಕಳುವಾಗಿರುವ ಕುರಿತು ಚಿಕನ್‌ ಅಂಗಡಿ ಮಾಲೀಕ ಸುಭಾನುಲ್ಲಾ ನೀಡಿದ ದೂರಿನಂತೆ ಭಾನುವಾರ ರಾತ್ರಿ ತಾಲೂಕಿನ ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios