ಕೊರೋನಾ ಎರಡನೇ ಅಲೆ ಅಬ್ಬರ/ ಭಾರತಕ್ಕೆ ಎಲ್ಲ ಕಡೆಯಿಂದ ಬೆಂಬಲ/ ನಿಮ್ಮೊಂದಿಗೆ ನಾವಿದ್ದೇವೆ ಎಂದ ನೆರೆಯ ದೇಶಗಳು/ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಹಂಚಿಕೊಂಡರು

ನವದೆಹಲಿ (ಏ. 30) ಕೊರೋನಾ ವಿರುದ್ಧ ಇಡೀ ಪ್ರಪಂಚವೇ ಹೋರಾಟ ಮಾಡುತ್ತಿದೆ. ಭಾರತವೂ ಸಂಕಷ್ಟ ಎದುರಿಸುತ್ತಿದೆ. ಈ ನಡುವೆ ವಿದೇಶಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ.

ಅಪ್ಘಾನಿಸ್ತಾನ ಭಾರತದೊಂದಿಗೆ ನಾವಿದ್ದೇವೆ ಎಂದು ಹೇಳಿದೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.

ಭಾರತದ ಹೋರಾಟಕ್ಕೆ ಜಪಾನ್ ನೆರವು, ಆಕ್ಸಿಜನ್, ವೆಂಟಿಲೇಟರ್ ಹೆಲ್ಪ್

ಭಾರತದ ಪರವಾಗಿ ನಾವು ಪ್ರಾರ್ಥನೆ ಮಾಡುತ್ತೇವೆ. ಈ ಹೋರಾಟವನ್ನು ದೇಶ ಜಯಿಸಲಿದೆ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಬೆಂಬಲ ಸೂಚಿಸಲಾಗಿದೆ.

ನೀವು ನಮ್ಮ ಹೃದಯದಲ್ಲಿದ್ದೀರಿ, “ನೀವು ನಮ್ಮ ಪ್ರಾರ್ಥನೆಯಲ್ಲಿದ್ದೀರಿ ಎಂದು ಭಾರತದ ಪರವಾಗಿ ಹೇಳಿದ್ದಾರೆ. #WeAreWithYouIndia ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಅಪ್ಘಾನಿಸ್ತಾನ ಮಾತ್ರವಲ್ಲ ಪಾಕಿಸ್ತಾನೀಯರು ಸೋಶಿಯಲ್ ಮೀಡಿಯಾದಲ್ಲಿ #PakistanStandsWithIndia’ ಎಂದು ಹೇಳಿದ್ದಾರೆ. 

ರುಮೇನಿಯಾ ಮತ್ತು ಇಂಗ್ಲೆಂಡ್ ಸಹ ಭಾರತಕ್ಕೆ ಕೊರೋನಾ ವಿರುದ್ಧ ಹೋರಾಡುವ ಅಸ್ತ್ರಗಳನ್ನು ನೀಡಿವೆ. ರುಮೇನಿಯಾ 80 ಆಕ್ಸಿಜನ್ ಸಾಂದ್ರಕಗಳನ್ನು (concentrators) ಮತ್ತು 75 ಆಕ್ಸಿಜನ್ ಸಿಲಿಂಡರ್ ನೀಡಿದ್ದರೆ ಇಂಗ್ಲೆಂಡ್ 280 ಆಕ್ಸಿಜನ್ ಸಾಂದ್ರಕಗಳನ್ನುಗಳನ್ನು ನೀಡಿದೆ.

Scroll to load tweet…

"