ಜಿಮ್‌ ಮತ್ತು ಪಾರ್ಕ್‌ಗಳಿಂದ ಮಹಿಳೆಯರನ್ನು ನಿಷೇಧಿಸಲು ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ನಿರ್ಧರಿಸಿದೆ. ಕಡ್ಡಾಯವಾಗಿ ಹಿಜಾಬ್‌ ಧರಿಸಬೇಕೆಂಬ ಆದೇಶ ಪಾಲಿಸದ  ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಬೂಲ್‌: ಜಿಮ್‌ ಮತ್ತು ಪಾರ್ಕ್‌ಗಳಿಂದ ಮಹಿಳೆಯರನ್ನು ನಿಷೇಧಿಸಲು ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ನಿರ್ಧರಿಸಿದೆ. ಕಡ್ಡಾಯವಾಗಿ ಹಿಜಾಬ್‌ ಧರಿಸಬೇಕೆಂಬ ಆದೇಶ ಪಾಲಿಸದ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ‘ಈ ನಿಯಮವನ್ನು ಜಾರಿಗೊಳಿಸಂತೆ ತಡೆಯಲು ನಾವು ಯತ್ನಿಸಿದೆವು ಹಾಗೂ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ದಿನಗಳನ್ನು ನಿಗದಿ ಮಾಡಲು ಸಾಕಷ್ಟು ಪ್ರಯತ್ನಿಸಿದೆವು. ಆದರೂ ಫಲಕಾರಿಯಾಗಲಿಲ್ಲ’ ಎಂದು ತಾಲಿಬಾನ್‌ ವಕ್ತಾರ ಮೊಹಮ್ಮದ್‌ ಅಕೆಫ್‌ ಮೊಹಜರ್‌ (Mohammad Akef Mohajer) ಹೇಳಿದ್ದಾನೆ.

ಈಗಾಗಲೇ ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಂದ ಬಾಲಕಿಯರನ್ನು ನಿಷೇಧಿಸಲಾಗಿದ್ದು ಹೆಚ್ಚಿನ ಉದ್ಯೋಗ (employment) ಕ್ಷೇತ್ರಗಳಿಗೂ ನಿರ್ಬಂಧ ಹೇರಲಾಗಿದೆ. 2021ರಲ್ಲಿ ಅಫ್ಘಾನ್‌ನಲ್ಲಿ ಅಧಿಕಾರ ವಶಪಡಿಸಿಕೊಂಡ ತಾಲಿಬಾನ್‌, ಆಗಿನಿಂದಲೂ ಲಿಂಗಬೇಧ ನೀತಿಗಳನ್ನು ಅನುಸರಿಸಿಕೊಂಡೇ ಬಂದಿದ್ದು ಮಹಿಳೆಯರ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಮೂಲೆಗುಂಪು ಮಾಡುತ್ತಿದೆ.

ತಾಲಿಬಾನ್ ಉಗ್ರರು ಕಲ್ಲೆಸೆದು ಕೊಲ್ಲೋ ಮೊದಲು ಸಾವಿಗೆ ಶರಣಾದ ಮಹಿಳೆ

ತಾಲಿಬಾನ್‌ ಜೊತೆ ಡೀಲ್‌, ಭಾರತಕ್ಕೆ ತಲೆನೋವು ತಂದಿದ್ದ ಹಾಜಿ ಬಷೀರ್‌ 17 ವರ್ಷದ ಬಳಿಕ ಬಿಡುಗಡೆ!

ಭೂತದ ಬಾಯಲ್ಲಿ ಭಗವದ್ಗೀತೆ! PUBG-TikTokನಿಂದ ಯುವಸಮೂಹ ಹಾಳು, ಬ್ಯಾನ್‌ ಮಾಡಿದ ಅಫ್ಘಾನಿಸ್ತಾನ