Asianet Suvarna News Asianet Suvarna News

ತಾಲಿಬಾನ್‌ ಜೊತೆ ಡೀಲ್‌, ಭಾರತಕ್ಕೆ ತಲೆನೋವು ತಂದಿದ್ದ ಹಾಜಿ ಬಷೀರ್‌ 17 ವರ್ಷದ ಬಳಿಕ ಬಿಡುಗಡೆ!

ಏಷ್ಯಾದ ಪ್ಯಾಬ್ಲೋ ಎಸ್ಕೋಬಾರ್‌ ಎಂದೇ ಕುಖ್ಯಾತನಾಗಿದ್ದ ಡ್ರಗ್‌ ದೊರೆ, ಹಾಜಿ ಬಷೀರ್‌ ನೂರ್‌ಜೈಅನ್ನು ಅಮೆರಿಕ ತನ್ನ ಅತ್ಯಂತ ಕರಾಳ ಗ್ವಾಂಟನಾಮೊ ಬೇ ಜೈಲಿನಿಂದ ಬಿಡುಗಡೆ ಮಾಡಿದೆ. ಅಮೆರಿಕ ಹಾಗೂ ಅಫ್ಘಾನಿಸ್ತಾನ ಜೊತೆಗಿನ ಖೈದಿ ವಿನಿಮಯ ಪ್ರಕ್ರಿಯೆ ಭಾಗವಾಗಿ ಈತನನ್ನು ಬಿಡುಗಡೆ ಮಾಡಲಾಗಿದ್ದು, ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಿಗೆ ತಲೆನೋವು ಆರಂಭವಾಗಿದೆ.
 

prisoner swap deal with Taliban US releases drug Haji Bashir Noorzai from world most infamous prison san
Author
First Published Sep 23, 2022, 11:19 AM IST

ನವದೆಹಲಿ (ಸೆ. 23): ವಿಶ್ವದ ಅತ್ಯಂತ ಕುಖ್ಯಾತ ಜೈಲುಗಳಲ್ಲಿ ಒಂದಾದ ಗ್ವಾಂಟನಾಮೊ ಬೇ ಜೈಲಿನಲ್ಲಿ ಬಂಧಿಯಾಗಿದ್ದ ತಾಲಿಬಾನಿಗಳ ಪರಮಮಿತ್ರ ಹಾಜಿ ಬಶೀರ್ ನೂರ್‌ಜೈಯನ್ನು ತಾಲಿಬಾನ್‌ ಜೊತೆಗಿನ ಡೀಲ್‌ನ ಅನ್ವಯ ಅಮೆರಿಕ ಬಿಡುಗಡೆ ಮಾಡಿದೆ. ಅಮೆರಿಕ ಹಾಗೂ ಅಫ್ಘಾನಿಸ್ತಾನ ನಡುವಿನ ಖೈದಿ ವಿನಿಮಯ ಪ್ರಕ್ರಿಯೆಯಲ್ಲಿ ಹಾಜಿ ಬಶೀರ್‌ನ ಬಿಡುಗಡೆಯಾಗಿದೆ. ಅಮೆರಿಕದ ಜೈಲಿನಲ್ಲಿ ಒಂದೂವರೆ ದಶಕಗಳಿಗೂ ಅಧಿಕ ಕಾಲ ಹಾಜಿ ಬಶೀರ್‌ ಬಂಧಿಯಾಗಿದ್ದ. ಗ್ವಾಂಟನಾಮೊ ಬೇ ಜೈಲಿನಲ್ಲಿ ಬಂಧಿಯಾದ ಕೊನೆಯ ಖೈದಿಗಳ ಪೈಕಿ ತಾಲಿಬಾನ್‌ನ ಸದಸ್ಯನೂ ಆಗಿದ್ದ ಹಾಜಿ ಬಶೀರ್‌ ಕೂಡ ಒಬ್ಬ ಎಂದು ಅಫ್ಘಾನಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. 2020 ರ ಜನವರಿಯಲ್ಲಿ, ತಾಲಿಬಾನ್ ಯುಎಸ್ ಸಿವಿಲ್ ಗುತ್ತಿಗೆದಾರ ಮಾರ್ಕ್ ಫ್ರೆರಿಕ್ಸ್ ಅವರನ್ನು ಅಪಹರಣ ಮಾಡಿತ್ತು. ಇವರನ್ನು ಹಾಜಿ ಬಶೀರ್‌ಗೆ ಬದಲಿಯಾಗಿ ಅಫ್ಘಾನಿಸ್ತಾನದ ತಾಲಿಬಾನ್ ಬಿಡುಗಡೆ ಮಾಡಿದೆ. ಹಾಜಿ ಬಶೀರ್‌ ಒಂದು ಕಾಲದಲ್ಲಿ ತಾಲಿಬಾನ್‌ನ ಕಮಾಂಡರ್‌ ಆಗಿದ್ದ. ಜಿಹಾದಿ ಗುಂಪುಗಳಿಗೆ ಹಣ ಸಹಾಯ ಮಾಡಲು ಸಲುವಾಗಿ ಹೆರಾಯಿನ್‌ ಕಳ್ಳಸಾಗಣೆ ಮಾಡುತ್ತಿದ್ದ. 2009ರಲ್ಲಿ ಅಮೆರಿಕದ ಕೋರ್ಟ್‌ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಒಟ್ಟಾರೆಯಾಗಿ ಅಮೆರಿಕದ ಜೈಲಿನಲ್ಲಿ 17 ವರ್ಷ, 6 ತಿಂಗಳು ಕಳೆದಿದ್ದಾರೆ.

 ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ (Amir Khan) ಮುತ್ತಕಿ ಅವರು ಹಾಜಿ ಬಶೀರ್‌ ವಿನಿಮಯವನ್ನು ಸ್ವಾಗತಿಸಿದ್ದಾರೆ. ಇದು ಯುಎಸ್-ತಾಲಿಬಾನ್ (US and Taliban) ಸಂಬಂಧಗಳಲ್ಲಿ "ಹೊಸ ಯುಗ" ವನ್ನು ಗುರುತಿಸಿದೆ ಎಂದು ಹೇಳಿದ್ದಾರೆ. ಫ್ರೆರಿಕ್ಸ್ ಕೊನೆಯ ಬಾರಿಗೆ ಈ ವರ್ಷದ ಆರಂಭದಲ್ಲಿ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾಗಲು ಅವರ ಬಿಡುಗಡೆಗಾಗಿ ಮನವಿ ಮಾಡುವುದನ್ನು ಕಾಣಬಹುದಾಗಿತ್ತು. ಈ ವೀಡಿಯೊವನ್ನು ದಿ ನ್ಯೂಯಾರ್ಕರ್ ಮ್ಯಾಗಜೀನ್ ಪ್ರಕಟ ಮಾಡಿತ್ತು. ಆದಾಗ್ಯೂ, ಫ್ರೆರಿಕ್ಸ್‌ನ ಬಿಡುಗಡೆಯ ಬಗ್ಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ. ಅಮೆರಿಕ ಕೂಡ ಈ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತಾಗಿ ಕಾಬೂಲ್‌ನಲ್ಲಿ ಮಾತನಾಡಿರುವ ಮುಟ್ಟಾಕಿ, ‘ಇದು ಅಫ್ಘಾನಿಸ್ತಾನ ಮತ್ತು ಅಮೆರಿಕ ನಡುವಿನ ಹೊಸ ಅಧ್ಯಾಯ. ಇದು ಎರಡು ದೇಶಗಳ ನಡುವೆ ಹೊಸ ಬಾಗಿಲು ತೆರೆಯಬಹುದು. ‘ಎಲ್ಲ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಇದು ತೋರಿಸುತ್ತದೆ ಮತ್ತು ಈ ಹಂತಕ್ಕೆ ಬರಲು ಶ್ರಮಿಸಿದ ಎರಡೂ ಕಡೆಯ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು.

ಭೂತದ ಬಾಯಲ್ಲಿ ಭಗವದ್ಗೀತೆ! PUBG-TikTokನಿಂದ ಯುವಸಮೂಹ ಹಾಳು, ಬ್ಯಾನ್‌ ಮಾಡಿದ ಅಫ್ಘಾನಿಸ್ತಾನ

ಯಾರೀತ ಹಾಜಿ ಬಶೀರ್‌: ಅಫ್ಘಾನಿಸ್ತಾನದ ಕಂದಹಾರ್‌ ಹಾಜಿ ಬಶೀರ್‌ ನೂರ್‌ಜೈನ (Haji Bashir Noorzai ) ಮೂಲ. ಬುಡಕಟ್ಟು ನಾಯಕ. ತಮ್ಮ ಗದ್ದೆಯನ್ನೇ ಹೆರಾಯಿನ್‌ ಉತ್ಪಾದನೆಯ ತಾಣವನ್ನಾಗಿ ಮಾಡಿಕೊಂಡಿದ್ದಲ್ಲದೆ, ಜಗತ್ತಿನ ಮಾದಕವಸ್ತು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದ್ದರಯ. . ಅಮರಿಕದ ಅಧಿಕಾರಿಗಳು ಈತನ್ನು "ಏಷ್ಯಾದಲ್ಲಿ ಹೆರಾಯಿನ್ ಕಳ್ಳಸಾಗಣೆಯ ಪ್ಯಾಬ್ಲೋ ಎಸ್ಕೋಬಾರ್" ಎಂದು ಬಣ್ಣಿಸಿದ್ದಾರೆ, ಅವರನ್ನು ಕುಖ್ಯಾತ ಕೊಲಂಬಿಯಾದ ಡ್ರಗ್ ಲಾರ್ಡ್‌ಗೆ ಹೋಲಿಸಿದ್ದಾರೆ. ಅವರನ್ನು 2005 ರಲ್ಲಿ ಅಮೆರಿಕದಲ್ಲಿ (USA) ಬಂಧಿಸಲಾಗಿತ್ತು. ಅಲ್ಲಿ ಅವರ ವಕೀಲರು ಫೆಡರಲ್ ಅಧಿಕಾರಿಗಳೊಂದಿಗೆ ಮಾತನಾಡಲು ಯೋಜಿಸಿದ್ದಾರೆ ಎಂದು ಹೇಳಿದರು. ಆ ಸಮಯದಲ್ಲಿ ಅವರು ಯುಎಸ್ ಅಧಿಕಾರಿಗಳೊಂದಿಗೆ ಯಾವ ಸಾಮರ್ಥ್ಯದಲ್ಲಿ ಸಂವಹನ ನಡೆಸುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ.

ತಾಲಿಬಾನ್‌ ಆರ್ಡರ್‌, ಹೆಣ್ಣುಮಕ್ಕಳು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವಂತಿಲ್ಲ!

2009 ರಲ್ಲಿ ಮ್ಯಾನ್‌ಹ್ಯಾಟನ್‌ನ ಫೆಡರಲ್ ನ್ಯಾಯಾಲಯದಲ್ಲಿ ನೂರ್‌ಜೈಗೆ (Noorzai ) ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್‌ಗಳು ಅವರು ಕಂದಹಾರ್ ಪ್ರಾಂತ್ಯದಲ್ಲಿ ಅಫೀಮು ಕ್ಷೇತ್ರಗಳನ್ನು ಹೊಂದಿದ್ದಾರೆ ಮತ್ತು ಹೆರಾಯಿನ್ ಮಾರಾಟ ಮಾಡಿದ ನ್ಯೂಯಾರ್ಕ್‌ನಲ್ಲಿ ವಿತರಕರ ಜಾಲವನ್ನು ಅವಲಂಬಿಸಿದ್ದಾರೆ ಎಂದು ಆರೋಪಿಸಿದರು. ಅಮೆರಿಕದಿಂದ ಹತ್ಯೆಗೆ ಒಳಗಾದ ತಾಲಿಬಾನ್‌ನ ಸಹ-ಸಂಸ್ಥಾಪಕ ಮುಲ್ಲಾ ಒಮರ್‌ನೊಂದಿಗೆ ನೂರ್‌ಜೈ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಆರೋಪಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಪ್ರಕಾರ, ಅವರು ತಮ್ಮ ಮಾದಕವಸ್ತು ವ್ಯವಹಾರವನ್ನು ಅಭಿವೃದ್ಧಿಗೊಳಿಸಲು ಅವಕಾಶ ನೀಡುವ ಬದಲು ತಾಲಿಬಾನ್ ಅನ್ನು ಆರ್ಥಿಕವಾಗಿ ಬೆಂಬಲಿಸಿದರು.

Follow Us:
Download App:
  • android
  • ios