ಒಂದಿಂಚು ಕೊಡಲ್ಲ, ಆಫ್ಘಾನ್ ವಾಯುನೆಲೆ ಮರಳಿಸಲು ಸೂಚಿಸಿದ ಟ್ರಂಪ್‌ಗೆ ತಾಲಿಬಾನ್ ಖಡಕ್ ತಿರುಗೇಟು, 20 ವರ್ಷ ಅಮೆರಿಕದ ವಶದಲ್ಲಿದ್ದ ಪಾಕಿಸ್ತಾನ ವಾಯುನೆಲೆ ಮತ್ತೆ ಅಮೆರಿಕಾಗೆ ಮರಳಿಸಲು ಸಾಧ್ಯವಿಲ್ಲ ಎಂದು ಆಫ್ಘಾನಿಸ್ತಾನ ನೇರ ಎಚ್ಚರಿಕೆ ನೀಡಿದೆ. 

ಕಾಬೂಲ್ (ಸೆ.21) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಹಲವು ದೇಶಗಳಿಗೆ ಒಂದರ ಮೇಲೊಂದರಂತೆ ಶಾಕ್ ನೀಡುತ್ತಿದೆ. ಭಾರತಕ್ಕೆ ತೆರಿಗೆ ಏರಿಕೆ, ಹೆಚ್1ಬಿ ವೀಸಾ ಶುಲ್ಕ ಏರಿಕೆ ಮೂಲಕ ಶಾಕ್ ನೀಡಿದೆ. ಇತ್ತ ಆಫ್ಘಾನಿಸ್ತಾನಕ್ಕೆ ವಾಯುನೆಲೆ ಮರಳಿಸುವಂತೆ ತಾಕೀತು ಮಾಡಿದ್ದಾರೆ. ಆದರೆ ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಟ್ರಂಪ್ ಬೆದರಿಕೆಗೆ ತಕ್ಕ ತಿರುಗೇಟು ನೀಡಿದೆ. ಆಫ್ಘಾನಿಸ್ತಾನದ ಬಗ್ರಾಮ್ ವಾಯುನೆಲೆ ಒಂದಿಂಚೂ ಭೂಮಿಯನ್ನು ಅಮೆರಿಕಗೆ ಮರಳಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ. ಬಹಿರಂಗವಾಗಿಯೇ ಈ ಹೇಳಿಕೆ ನೀಡಿರುವುದು ಡೋನಾಲ್ಡ್ ಟ್ರಂಪ್‌ಗೆ ತೀವ್ರ ಹಿನ್ನಡೆಯಾಗಿದೆ. ದುರ್ಬಲ ರಾಷ್ಟ್ರವೊಂದು ಅಮೆರಿಕ ಅಧ್ಯಕ್ಷರ ಮುಖಕ್ಕೆ ನೇರವಾಗಿ ಹೇಳಿದ ಈ ಘಟನೆಯಿಂದ ಟ್ರಂಪ್ ಕೆರಳಿದ್ದಾರೆ.

20 ವರ್ಷದ ಒಪ್ಪಂದ ಅಂತ್ಯ, ನವೀಕರಣ ಇಲ್ಲ ಎಂದ ಆಫ್ಘಾನಿಸ್ತಾನ

ತಾಲಿಬಾನ್ ಉಗ್ರರನ್ನು ಸದೆಬಡಿಯಲು ಅಮೆರಿಕ ಸರ್ಕಾರ 20 ವರ್ಷಗಳ ಹಿಂದೆ ಆಫ್ಘಾನಿಸ್ತಾನದ ಬಗ್ರಾಮ್ ವಾಯುನೆಲೆಯನ್ನು ಪಡೆದುಕೊಂಡಿತ್ತು. ಆಪ್ಘಾನಿಸ್ತಾನಕ್ಕೆ ನೆರವಿನ ಹಸ್ತ ಚಾಚಿ ಮಹತ್ವದ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 20 ವರ್ಷಕ್ಕೆ ಒಪ್ಪಂದ ಮಾಡಲಾಗಿತ್ತು. ಅಮೆರಿಕ ಹಲವು ರಾಷ್ಟ್ರಗಳಿಲ್ಲಿ ಈ ರೀತಿ ವಾಯನೆಲೆ ಹೊಂದಿದೆ. ಎಲ್ಲಾ ರಾಷ್ಟ್ರದಲ್ಲೂ ಒಪ್ಪಂದ ಮುಗಿದ ಬಳಿಕ ನವೀಕರಣ ಮಾಡಲಾಗಿದೆ. ಆದರೆ ಆಫ್ಘಾನಿಸ್ತಾನದ ತಾಲೀಬಾನ್ ಸರ್ಕಾರ, ಬಗ್ರಾಮ್ ವಾಯುನೆಲೆ ಮತ್ತೆ ಅಮೆರಿಕಗೆ ಮರಳಿಸಲು ಸಾಧ್ಯವಿಲ್ಲ. ವಾಯುನೆಲೆ ಅಲ್ಲ, ಒಂದಿಂಚು ಭೂಮಿಯನ್ನು ನೀಡುವುದಿಲ್ಲ ಎಂದಿದೆ.

ವಾಯುನೆಲೆ ನೀಡದಿದ್ದರೆ ಪರಿಣಾಮ ಗಂಭೀರ, ಟ್ರಂಪ್ ಎಚ್ಚರಿಕೆ

ರಾಜಧಾನಿ ಕಾಬೂಲ್‌ನಲ್ಲಿರುವ ಬಗ್ರಾಮ್ ವಾಯು ನೆಲೆಯನ್ನು ಅಮೆರಿಕ ನಿರ್ಮಾಣ ಮಾಡಿದೆ. ಬಹುತೇಕ ವೆಚ್ಚವನ್ನು ಅಮರಿಕ ಭರಿಸಿ ಈ ವಾಯುನೆಲೆ ನಿರ್ಮಾಣ ಮಾಡಿ ಬಳಕೆ ಮಾಡುತ್ತಿದೆ. ಒಪ್ಪಂದಂತೆ ವಾಯುನೆಲೆ ಮರಳಿಸಿ, ಇಲ್ಲದಿದ್ದರೆ, ಮುಂದಿನ ಪರಿಣಾಮ ಘನಘೋರವಾಗಿರುತ್ತೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಟ್ರಂಪ್ ಎಚ್ಚರಿಗೆ ಬೆನ್ನಲ್ಲೇ ಆಫ್ಘಾನಿಸ್ತಾನ ಖಡಕ್ ಉತ್ತರ

ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ ಆಫ್ಘಾನಿಸ್ತಾನ ರಕ್ಷಣಾ ಸಚಿವಾಲಯದ ಚೀಫ್ ಆಫ್ ಸ್ಟಾಫ್ ಫೈಸ್‌ಹುದ್ದೀನ ಫಿತ್ರಟ್ ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಬಗ್ರಾಮ್ ವಾಯುನೆಲೆಯನ್ನು ರಾಜಕೀಯ ಡೀಲ್ ಮೂಲಕ ವಾಪಸ್ ಪಡೆಯಲು ಮುಂದಾಗಿದ್ದಾರೆ. ಕೆಲ ಒತ್ತಡ, ಬೆದರಿಕೆ, ಮಾತಕತೆ ಮೂಲಕ ವಾಯು ನೆಲೆ ಪಡೆಯಲು ಮುಂದಾಗಿದ್ದಾರೆ. 20 ವರ್ಷದ ಒಪ್ಪಂದ ಮುಗಿದಿದೆ. ಇನ್ನು ಸಾಧ್ಯವಿಲ್ಲ. ಒಂದಿಂಚೂ ಭೂಮಿಯನ್ನು ನೀಡುವುದಿಲ್ಲ. ಆಫ್ಘಾನಿಸ್ತಾನ ಯಾರ ಕೈಗೊಂಬೆಯಲ್ಲ. ಆಫ್ಘಾನಿಸ್ತಾದಲ್ಲಿ ಯಾರ ಹಸ್ತಕ್ಷೇಪ ಸಲ್ಲದು. ಇದನ್ನು ತಾಲಿಬಾನ್ ಸರ್ಕಾರ ಸಹಿಸುವುದಿಲ್ಲ. ಆಫ್ಘಾನಿಸ್ತಾನ ಸ್ವತಂತ್ರ ರಾಷ್ಟ್ರ. ಸ್ವತಂತ್ರವಾಗಿಯೇ ಇರಲಿದೆ ಎಂದು ಫೈಸ್‌ಹುದ್ದೀನ್ ಹೇಳಿದ್ದಾರೆ.

ಅಮೆರಿಕ ಹಾಗೂ ಆಫ್ಘಾನಿಸ್ತಾನ ನಡುವೆ ಬೆದರಿಕೆ,ಏಟು ತಿರುಗೇಟುಗಳು ನಡೆಯುತ್ತಿದೆ. ತಾಲಿಬಾನ್ ಸರ್ಕಾರ ಯಾವುದೇ ಕಾರಣಕ್ಕೂ ಏರ್‌ಬೇಸ್ ನೀಡದಿರಲು ಮುಂದಾಗಿದೆ. ಇತ್ತ ಟ್ರಂಪ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆಫ್ಘಾನ್ ತಿರುಗೇಟಿಗೆ ಟ್ರಂಪ್ ಬೆಚ್ಚಿಬಿದ್ದಿದ್ದಾರೆ, ಟ್ರಂಪ್ ಮಾತಿಗೆ ಆಫ್ಘಾನಿಸ್ತಾನವೇ ಬೆಲೆ ಕೊಡುತ್ತಿಲ್ಲ , ಅಮೆರಿಕ ಎಂದರೆ ಆಪ್ಘಾನಿಸ್ತಾನವೂ ಹೆದರಲ್ಲ ಅನ್ನೋ ಟ್ರೋಲ್ ಹರಿದಾಡಲಿದೆ ಅನ್ನೋ ಆತಂಕ ಟ್ರಂಪ್‌ಗೆ ಕಾಡುತ್ತಿದೆ. ಪ್ರತಿಷ್ಠಿಗೆ ಬಿದ್ದು ವಾಯುನೆಲೆ ವಾಪಸ್ ಪಡೆಯಲು ಟ್ರಂಪ್ ಮುಂದಾಗಿದ್ದಾರೆ.