Asianet Suvarna News Asianet Suvarna News

ತಾಲಿಬಾನ್‌ ನಾಯಕನ ಸಂದರ್ಶಿಸಿದ್ದ ಪತ್ರಕರ್ತೆ ದೇಶ ಬಿಟ್ಟು ಪಲಾಯನ!

* ಅಪ್ಘಾನಿಸ್ತಾನ ವಶಪಡಿಸಿಕೊಂಡ ತಾಲಿಬಾನ್

* * ತಾಲಿಬಾನ್‌ ನಾಯಕನ ಸಂದರ್ಶಿಸಿದ್ದ ಪತ್ರಕರ್ತೆ ದೇಶ ಬಿಟ್ಟು ಪಲಾಯನ

* ಟೊಟೊ ನ್ಯೂಸ್‌ ಚಾನಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 24 ವರ್ಷದ ನಿರೂಪಕಿ 

Afghan Woman Journalist Who Made Headlines For Interviewing Taliban Leader Flees Afghanistan pod
Author
Bangalore, First Published Aug 31, 2021, 8:16 AM IST
  • Facebook
  • Twitter
  • Whatsapp

ಕಾಬೂಲ್‌(ಆ.31): ಅಷ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ, ತಾಲಿಬಾನ್‌ ನಾಯಕನನ್ನು ಟೀವಿ ನೇರ ಪ್ರಸಾರದಲ್ಲಿ ಸಂದರ್ಶನ ನಡೆಸಿ ಭಾರೀ ಸುದ್ದಿಯಾಗಿದ್ದ ಮಹಿಳಾ ಪತ್ರಕರ್ತೆ ತಾಲಿಬಾನ್‌ಗೆ ಹೆದರಿ ದೇಶಬಿಟ್ಟು ಪಲಾಯನ ಮಾಡಿದ್ದಾರೆ.

ಟೊಟೊ ನ್ಯೂಸ್‌ ಚಾನಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 24 ವರ್ಷದ ನಿರೂಪಕಿ ಬೆಹೆಸ್ತಾ ಅರ್ಗಂದ್‌ ಹಿರಿಯ ತಾಲಿಬಾನ್‌ ನಾಯಕನೊಬ್ಬನನ್ನು ಆ.17ರಂದು ಸಂದರ್ಶನ ಮಾಡಿದ್ದಳು. ತಾಲಿಬಾನ್‌ ಮುಖಂಡನನ್ನು ಸಂದರ್ಶನ ನಡೆಸಿದ ಮೊದಲ ಮಹಿಳಾ ಪತ್ರಕರ್ತೆ ಎನಿಸಿಕೊಂಡಿದ್ದರು.

ಆದರೆ, ಸಂದರ್ಶನ ಪ್ರಸಾರವಾದ ಕೆಲವೇ ದಿನಗಳಲ್ಲಿ ಬೆಹೆಸ್ತಾ ಅರ್ಗಂದ್‌ ದೇಶವನ್ನು ತೊರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ದೇಶವನ್ನು ತೊರೆಯುತ್ತಿರುವ ಲಕ್ಷಾಂತರ ಜನರಂತೆ, ನಾನೂ ಕೂಡ ತಾಲಿಬಾನ್‌ ಭಯದಿಂದ ದೇಶವನ್ನು ತೊರೆದಿದ್ದೇನೆ. ಒಂದು ವೇಳೆ ತಾಲಿಬಾನಿಗಳು ತಾವು ಭರವಸೆ ನೀಡಿದಂತೆ ನಡೆದುಕೊಂಡರೆ ಮತ್ತು ದೇಶದಲ್ಲಿ ಪರಿಸ್ಥಿತಿ ಸುಧಾರಿಸಿದರೆ ಪುನಃ ದೇಶಕ್ಕೆ ಮರಳಲು ಬಯಸಿದ್ದೇನೆ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios