ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ
ಅಮೆರಿಕಾ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉಗ್ರ/ ಸುಸೈಡ್ ಮಾಡಿಕೊಂಡ ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ/ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಸಿದ ಅಮೆರಿಕ
ವಾಷಿಂಗ್ಟನ್ [ಅ. 27] ಅಮೆರಿಕ ಸೇನಾ ದಾಳಿಗೆ ಹೆದರಿ ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೆರಿಕಾ ಮಾಧ್ಯಮಗಳು ಭಾನುವಾರ ವರದಿ ಬಿತ್ತರಿಸಿವೆ. ಅಧ್ವಕ್ಷ ಡೋನಾಲ್ಡ್ ಟ್ರಂಪ್ ಸುದ್ದಿ ಸ್ಪಷ್ಟಮಾಡಿದ್ದಾರೆ.
ಐಸಿಸ್ ಉಗ್ರ ಸಂಘಟನೆಯ ವಿರುದ್ಧ ಸಮರ ಸಾರಿದ್ದ ಅಮೆರಿಕಾ 2011 ಮೇ 2ರಂದು ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆ ಮಾಡಿತ್ತು. ನಂತರ ಅಲ್ ಬಾಗ್ದಾದಿಯ ಹಿಂದೆ ಬಿದ್ದಿದ್ದ ಅಮೆರಿಕಾ ಆತನ ಅಡಗು ತಾಣದ ಹತ್ತಿರಕ್ಕೆ ಹೋದಾಗ ಆತ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಮಂಡ್ಯದಲ್ಲಿ ಅನುಮಾನಾಸ್ಪದ ಪರೇಡ್: 15 ಜನ ಶಂಕಿತರ ಬಂಧನ
ಕಳೆದ ಜೂನ್ ತಿಂಗಳ ವೇಳೆಯೂ ಅಲ್ ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಸುದ್ದಿಯಾಗಿತ್ತು. ಬಾಗ್ದಾದಿ ಸಾವಿಗೆ ಸಂಬಂಧಿಸಿ ಅಮೆರಿಕಾ ಸೇನೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.
ಇದೆಲ್ಲದರ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಸುದ್ದಿಗೆ ಮತ್ತಷ್ಟು ಶಕ್ತಿ ಕೊಟ್ಟಿದೆ. ತುಂಬಾ ಮಹತ್ವದ ಕೆಲಸ ಈಗ ತಾನೇ ಮುಗಿದಿದೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
48 ವರ್ಷದ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಿವಾಸಿಯಾಗಿದ್ದು ಹಿಂಸಾತ್ಮಕ ಭಯೋತ್ಪಾದನೆಯನ್ನು ಆರಂಭ ಮಾಡಿದ್ದ. ಈತ 2014 ರಲ್ಲಿ ಸಿರಿಯಾ ಮತ್ತು ಇರಾಕ್‍ನಲ್ಲಿ ಪ್ರದೇಶವೊಂದನ್ನು ಆಕ್ರಮಣ ಮಾಡಿ ಅಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿದ್ದ. ಹಲವು ಅಮಾಯಕರನ್ನು ನಿರ್ದಾಕ್ಷಿಣ್ಯವಾಗಿ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದ.