ಸ್ಟಾಕ್‌ಹೋಮ್(ಡಿ.11): 2019ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ಭಾರತೀಯ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಫ್ರೆಂಚ್-ಅಮೆರಿಕನ್ ಪತ್ನಿ ಎಸ್ತರ್ ಡುಫ್ಲೋ ಹಾಗೂ ಇನ್ನೋರ್ವ ಅರ್ಥಶಾಸ್ತ್ರಜ್ಞ ಮೈಕೆಲ್ ಕ್ರೆಮರ್ ಅವರಿಗೆ 2019 ರ ಆರ್ಥಿಕ ವಿಜ್ಞಾನದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾನು ಮತ್ತು ನಿರ್ಮಲಾ ಸಹಪಾಠಿಗಳು: ಅಭಿಜಿತ್ ಬ್ಯಾನರ್ಜಿ!

ಜಾಗತಿಕ ಬಡತನವನ್ನು ಹೋಗಲಾಡಿಸುವ ಕಾರ್ಯಕ್ಕಾಗಿ ಲಕ್ಷಾಂತರ ಮಕ್ಕಳಿಗೆ ಪ್ರಾಯೋಗಿಕ ವಿಧಾನದಲ್ಲಿ ಸಹಾಯ ಮಾಡಿದ ಈ ತ್ರಿವಳಿ ಅರ್ಥಶಾಸ್ತ್ರಜ್ಞರ ಸಿದ್ದಾಂತಗಳನ್ನು ಮೆಚ್ಚಿ ನೊಬೆಲ್ ಪುರಸ್ಕಾರ ನೀಡಲಾಗಿದೆ.

ಪ್ರಶಸ್ತಿ ಪ್ರಧಾನ ವೇದಿಕೆಗೆ ಅಭಿಜಿತ್ ಬ್ಯಾನರ್ಜಿ ದಂಪತಿ ಧೋತಿ-ಕುರ್ತಾ, ಹಾಗೂ ಸೀರೆಯನ್ನುಟ್ಟು ಆಗಮಿಸಿದ್ದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ಬಡ ಎಕನಾಮಿಕ್ಸ್‌ಗೆ ಶ್ರೀಮಂತ ಪ್ರಶಸ್ತಿ; ಭಾರತೀಯ ಸಂಜಾತನಿಗೆ ನೊಬೆಲ್ ಗರಿ!

ಸ್ಟಾಕ್‌ಹೋಮ್ ಕನ್ಸರ್ಟ್ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ದಂಪತಿಗಳು ಭಾರತೀಯ ಶೈಲಿಯ ಉಡುಪು ಧರಿಸಿ ಬಂದಿದ್ದರು.