Asianet Suvarna News Asianet Suvarna News

ಗಗನಚುಂಬಿ ನ್ಯೂಯಾರ್ಕ್‌ ಕಟ್ಟಡದಿಂದ ಜಿಗಿದ ಯುವಕ: ನೆಲಕ್ಕೆ ಬೀಳುವ ಮೊದಲೇ ದೇಹ ಛಿದ್ರ

ಯುವಕನೋರ್ವ ಅಮೆರಿಕಾದ ಪ್ರಖ್ಯಾತ ಗಗನಚುಂಬಿ ಕಟ್ಟಡ ನ್ಯೂಯಾರ್ಕ್ ಬಿಲ್ಡಿಂಗ್‌ನ 750 ಅಡಿ ಮೇಲಿನಿಂದ  ಕೆಳಗೆ ಜಿಗಿದಿದ್ದು, ಕೆಳಗೆ ಬೀಳುವ ಮೊದಲೇ ಆತನ ದೇಹ ಛಿದ್ರಛಿದ್ರವಾಗಿದೆ.  

A man who jumped from a skyscraper New York building his body was shattered before he hit the ground akb
Author
First Published Aug 19, 2023, 1:05 PM IST

ನ್ಯೂಯಾರ್ಕ್‌: ಯುವಕನೋರ್ವ ಅಮೆರಿಕಾದ ಪ್ರಖ್ಯಾತ ಗಗನಚುಂಬಿ ಕಟ್ಟಡ ನ್ಯೂಯಾರ್ಕ್ ಬಿಲ್ಡಿಂಗ್‌ನ 750 ಅಡಿ ಮೇಲಿನಿಂದ  ಕೆಳಗೆ ಜಿಗಿದಿದ್ದು, ಕೆಳಗೆ ಬೀಳುವ ಮೊದಲೇ ಆತನ ದೇಹ ಛಿದ್ರಛಿದ್ರವಾಗಿದೆ.  ಮ್ಯಾನ್‌ಹ್ಯಾಟನ್‌ನಲ್ಲಿರುವ ಪ್ರತಿಷ್ಠಿತ ನ್ಯೂಯಾರ್ಕ್  ಬಿಲ್ಡಿಂಗ್‌ನಲ್ಲಿರುವ  ಡಾಯ್ಚ ಬ್ಯಾಂಕ್ ಸೆಂಟರ್‌ನ (Deutsche Bank Center) ಮೇಲ್ಭಾಗದಿಂದ ಯುವಕ ಜಿಗಿದಿದ್ದು,  ಈ ಕಟ್ಟಡವೂ ಕೊಲಂಬಸ್ ಸರ್ಕಲ್‌ನಲ್ಲಿರುವ ಬಿಲಿಯನೇರ್ಸ್ ರೋ ಎಂದೇ ಪ್ರಖ್ಯಾತಿ ಪಡೆದಿದೆ. ನ್ಯೂಯಾರ್ಕ್‌ ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ ಈ ಯುವಕ ಅದೇ ಕಟ್ಟಡಕ್ಕೆ ಹೊಂದಿಕೊಂಡಿರುವ  ರಿಟ್ಜಿ ಮ್ಯಾಂಡರಿನ್ ಓರಿಯೆಂಟಲ್ ಹೋಟೆಲ್‌ನ ಪ್ರವೇಶದ್ವಾರದ ಮೇಲಿರುವ ಗಾಜಿನ ಮಾರ್ಕ್ಯೂ  ಮೇಲೆ ಬಿದ್ದಿದ್ದಾನೆ. ಪರಿಣಾಮ ನೆಲಕ್ಕೆ ಬೀಳುವ ಮೊದಲೇ ಆತನ ದೇಹ ಎರಡು ತುಂಡಾಗಿದೆ. 

ಮಾರ್ಕ್ಯೂ  ಮೇಲೆ ಬಿದ್ದ ರಭಸಕ್ಕೆ ಆತನ ದೇಹ ಛಿದ್ರಗೊಂಡಿದ್ದು, ಆತನ ದೇಹದ ಭಾಗಗಳು ರಸ್ತೆಯುದ್ಧಕ್ಕೂ ಬಿದ್ದಿದ್ದವು. ಅಲ್ಲದೇ ಕಟ್ಟಡ ನಿರ್ಮಾಣಕ್ಕೆ ಹಾಕಿದ್ದ ಸ್ಕ್ಯಾಫೋಲ್ಡಿಂಗ್‌ನಿಂದ ರಕ್ತ ತೊಟ್ಟಿಕುತ್ತಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ. 55 ಅಂತಸ್ಥಿನ ಈ ನ್ಯೂಯಾರ್ಕ್ ಬಿಲ್ಡಿಂಗ್‌  ಹೊಟೇಲ್ ಸೇರಿದಂತೆ ಹಲವಾರು ಕಂಪನಿಗಳು ಮತ್ತು ಸೂಪರ್ ಹಾಗೂ ದುಬಾರಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಜೇ-ಝಡ್ ಮತ್ತು ಗಿಸೆಲ್ ಬುಂಡ್ಚೆನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಒಮ್ಮೆ ವಾಸಿಸುತ್ತಿದ್ದರು.

ಮಾರ್ಕ್ಯೂನ ಪ್ರಭಾವದಿಂದ ಅವನ ದೇಹವು ಅರ್ಧ ಭಾಗಗಳಾಗಿ ವಿಭಜಿಸಲ್ಪಟ್ಟಿದೆ ಎಂದು ವರದಿಯಾಗಿದೆ -- ಅವನ ದೇಹದ ಭಾಗಗಳು ರಸ್ತೆಯ ಉದ್ದಕ್ಕೂ ನಿರ್ಮಾಣ ಸ್ಕ್ಯಾಫೋಲ್ಡಿಂಗ್ನಲ್ಲಿ ರಕ್ತದಿಂದ ತೊಟ್ಟಿಕ್ಕುತ್ತಿದ್ದವು. 55-ಅಂತಸ್ತಿನ ಕಟ್ಟಡವು ಹೋಟೆಲ್, ಹಲವಾರು ಕಂಪನಿಗಳು ಮತ್ತು ಸೂಪರ್ ದುಬಾರಿ ಐಷಾರಾಮಿ ಅಪಾರ್ಟ್ಮೆಂಟ್‌ಗಳನ್ನು ಹೊಂದಿದೆ. ಇಲ್ಲಿ ಜೇ-ಝಡ್ ಮತ್ತು ಗಿಸೆಲ್ ಬುಂಡ್ಚೆನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಕೂಡ ಒಮ್ಮೆ ವಾಸ ಮಾಡಿದ್ದರು. 

ಆದರೆ ಕಟ್ಟಡದಿಂದ ಹಾರಿ ಮೃತಪಟ್ಟ ಯುವಕನ ಬಗ್ಗೆ ಯಾರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಆತ ಪೈಜಾಮ ಧರಿಸಿದ್ದ ಆತ ಅಲ್ಲಿ ವಾಸಿಸುತ್ತಿದ್ದವನೋ ಅಥವಾ ಆ ಕಟ್ಟಡದ ಕೆಲಸಗಾರನೋ ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಕೆಲ ವರದಿಗಳ ಪ್ರಕಾರ ಅವರು ಕಟ್ಟಡದಿಂದ ಜಿಗಿಯುವ ಮೊದಲು ಲಿಫ್ಟ್ ಮೂಲಕ ಕಟ್ಟಡದೊಳಗೆ ಏರಿರಬೇಕು ಎಂದು ವರದಿ ಮಾಡಿವೆ. 

Follow Us:
Download App:
  • android
  • ios