Asianet Suvarna News Asianet Suvarna News

HIV ಸೋಂಕಿದ್ದರೂ ಹೆಂಡತಿ ಜೊತೆ 5 ವರ್ಷ ಸಂಬಂಧ, ಗರ್ಭಿಣಿಯಾದಾಗಲೇ ಗೊತ್ತಾಗಿದ್ದು ಗಂಡನ ಗುಟ್ಟು!

* ಹೆಂಡತಿಗೆ ಮೋಸ ಮಾಡಿ ಐದು ವರ್ಷ ಸಂಸಾರ ನಡೆಸಿದ ಎಚ್‌ಐವಿ ಸೋಂಕಿತ

* ಹೆಂಡತಿ ಗರ್ಭಿಣಿಯಾದಾಗಲೇ ಗೊತ್ತಾಗಿದ್ದು ಗಂಡನ ಅಸಲಿಯತ್ತು

* ವಿಶ್ವ ಏಡ್ಸ್ ದಿನದಂದು ಈ ಸುದ್ದಿ ನೀವು ಓದಲೇಬೇಕು

A Florida man who failed to inform sexual partners about his HIV positive status was sentenced pod
Author
Bangalore, First Published Dec 1, 2021, 3:03 PM IST
  • Facebook
  • Twitter
  • Whatsapp

ಫ್ಲೋರಿಡಾ(ಡಿ.01): ವಿಶ್ವದಲ್ಲಿ ಎಚ್ಐವಿ ಸೋಂಕಿನ (HIV Infection) ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನಾಗಿ (World AIDS Day) ಆಚರಿಸಲಾಗುತ್ತದೆ. ಏಡ್ಸ್ ಜಾಗೃತಿ ಏಕೆ ಮುಖ್ಯ ಎಂದು ಫ್ಲೋರಿಡಾದಲ್ಲಿ (Florida) ವರದಿಯಾದ ಘಟನೆಯಿಂದ ತಿಳಿಯಬಹುದು. ಇಲ್ಲೊಬ್ಬ ತಾಯಿ, ಹೇಗೆ ತನ್ನ ಗಂಡ ತನ್ನ ಅನಾರೋಗ್ಯವನ್ನು 5 ವರ್ಷಗಳ ಕಾಲ ಮುಚ್ಚಿಟ್ಟಿದ್ದಾನೆಂದು ವಿವರಿಸಿದ್ದಾರೆ. ಗಂಡನ ಈ ಅನಾರೋಗ್ಯದಿಂದ ಪತ್ನಿಗೂ ಎಚ್‌ಐವಿ ಸೋಂಕು ತಗುಲಿದೆ. ಒಬ್ಬ ವ್ಯಕ್ತಿ ತನ್ನ ಕುಟುಂಬವನ್ನು ಹೇಗೆ ಅಪಾಯಕ್ಕೆ ಸಿಲುಕಿಸಿದನೆಂದು ಡೈಲಿ ಮೇಲ್‌ನಲ್ಲಿನ ವರದಿಯು ವಿವರಿಸುತ್ತದೆ. ಆದರೆ ಅನಾರೋಗ್ಯದ ಅರಿವಿದ್ದೂ ಹೆಂಡತಿಗೆ ಮೋಸ ಮಾಡಿದ ಕಾರಣಕ್ಕಾಗಿ ನ್ಯಾಯಾಲಯ ಆತನನ್ನು 5 ವರ್ಷಗಳ ಕಾಲ ಜೈಲಿಗೆ ಕಳುಹಿಸಿದೆ.

ಮಹಿಳೆಯರು ಮಾತ್ರವಲ್ಲ, ಪುರುಷರೊಂದಿಗೂ ಸಂಬಂಧವಿಟ್ಟುಕೊಂಡಿದ್ದ

ಫ್ಲೋರಿಡಾದ ಜಾಕ್ಸನ್‌ವಿಲ್ಲೆಯಲ್ಲಿ ವಾಸಿಸುವ 38 ವರ್ಷದ ರೆನೀ ಬರ್ಗೆಸ್ ಅವರು ಸುಮಾರು ಐದು ವರ್ಷಗಳಿಂದ ಎಚ್‌ಐವಿ ಪಾಸಿಟಿವ್ ವ್ಯಕ್ತಿಯೊಂದಿಗೆ ಇದ್ದುದನ್ನು ಬಹಿರಂಗಪಡಿಸಿದ್ದಾರೆ. ಮಹಿಳೆ ಗರ್ಭಿಣಿಯಾದಾಗಲೇ ಈ ವಿಚಾರ ಬಿಹಿರಂಗಗೊಂಡಿದ್ದು. ಅಕೆಯ ಹೊಟ್ಟೆಯಲ್ಲಿ ಇಬ್ಬರು ಅವಳಿ ಮಕ್ಕಳಿದ್ದರು. ಆಗ ಮಹಿಳೆಯ ಪತಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಇದಾದ ಬಳಿಕ ಪತಿರಾಯ ತನಗೆ 2002 ರಿಂದಲೇ ಈ ಕಾಯಿಲೆ ಇದೆ ಎಂದು ತಿಳಿದಿತ್ತು ಎಂದು ಬಹಿರಂಗಪಡಿಸಿದ್ದಾನೆ. ಮದುವೆಯಾದ ಬಳಿಕವೂ ಇತರ ಮಹಿಳೆಯರು ಮತ್ತು ಪುರುಷರೊಂದಿಗೆ ಸೇರಿ ಆಕೆಗೆ ಮೋಸ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾನೆ.

ಆರೋಪಿ ಪತಿಯನ್ನು 5 ವರ್ಷಗಳ ಕಾಲ ಜೈಲಿಗೆ ಕಳುಹಿಸಿದ ನ್ಯಾಯಾಲಯ 

ಪತಿ ತನಗೆ ತುಂಬಾ ಮೋಸ ಮಾಡಿದ್ದಾನೆ ಎಂದು ತಿಳಿದ ಮಹಿಳೆ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ. ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಸೋಂಕು ತಗುಲಿಸಿರುವ ಆರೋಪ ಮಾಡಿದ್ದಾಳೆ. ನ್ಯಾಯಾಲಯ ಆತನನ್ನು ಅಪರಾಧಿ ಎಂದು ಘೋಷಿಸಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದದೆ. ತನಗೆ ಏನಾಯಿತು ಎಂಬ ಒತ್ತಡವು ಅವಧಿಪೂರ್ವ ಹೆರಿಗೆಗೆ ಒಳಗಾಗುವಂತೆ ಮಾಡಿದೆ ಎಂದು ರೆನೀ ಹೇಳಿದ್ದಾರೆ. ನಾಲ್ಕು ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇನ್ನು ಆಕೆ ಎಚ್ಐವಿ ನೆಗೆಟಿವ್ ಆಗಿದ್ದಾರೆ. ರೆನೀ ಬರ್ಗೆಸ್ ಅವರು ಫ್ಲೋರಿಡಾ ಆರೋಗ್ಯ ಇಲಾಖೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಎಚ್ಐವಿ ಸೋಂಕಿತ ವ್ಯಕ್ತಿಯೊಂದಿಗೆ 5 ವರ್ಷಗಳ ಕಾಲ ಇದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಫ್ಲೋರಿಡಾದಲ್ಲಿ ಉದ್ದೇಶಪೂರ್ವಕ ಸೋಂಕು ಹಬ್ಬಿಸುವುದು ಗಂಭೀರ ಅಪರಾಧ

ಗೊತ್ತಿದ್ದೂ ಎಚ್ ಐವಿ ಸೋಂಕಿಗೆ ಒಳಗಾಗುವುದು ಅಪರಾಧ ಎಂದು ರೆನೀಗೆ ಮೊದಲು ಗೊತ್ತಿರಲಿಲ್ಲ. ಆದರೆ ಟಿವಿಯಲ್ಲಿ ಪ್ರಸಾರವಾದ ಸುದ್ದಿಯಲ್ಲಿ ಇದೇ ರೀತಿಯ ವರದಿ ಗಮನಿಸಿದ್ದರು. ಅಲ್ಲಿ ಪುರುಷನೊಬ್ಬ ಮಹಿಳೆಗೆ ಮೋಸದಿಂದ ಸೋಂಕು ತಗುಲಿಸಿದ್ದ ಪ್ರಕರಣ ಉಲ್ಲೇಖಿಸಲಾಗಿತ್ತು. ಮಹಿಳೆಯ ದೂರಿನ ಬಳಿಕ ಆತ ಜೈಲಿಗೆ ಹೋಗಬೇಕಾಯಿತು. ಇಲ್ಲಿಂದ ಮಾಹಿತಿ ಪಡೆದ ರೆನೀ ಕೂಡ ತನ್ನ ಪತಿಯ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದಳು. ಆರೋಪಿ ಪತಿ ಇತರ ಮಹಿಳೆಯರೊಂದಿಗೆ ಮಾತ್ರವಲ್ಲದೆ ಇತರ ಪುರುಷರೊಂದಿಗೂ ಸಂಬಂಧ ಹೊಂದಿದ್ದಾಗಿ ಬಹಿರಂಗಪಡಿಸಿದ್ದಾನೆ.

Follow Us:
Download App:
  • android
  • ios