Asianet Suvarna News Asianet Suvarna News

ದ.ಆಫ್ರಿಕಾದಲ್ಲಿ ಬಹುಮಹಡಿ ಕಟ್ಟಡಕ್ಕೆ ಬೆಂಕಿ: 73 ಜನರು ಬಲಿ

: ದಕ್ಷಿಣಾ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಘಟನೆಯಲ್ಲಿ ಮಕ್ಕಳೂ ಸೇರಿದಂತೆ 73 ಜನರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. 52 ಮಂದಿ ಗಾಯಗೊಂಡಿದ್ದಾರೆ.

A fire broke out in a high rise building in Johannesburg South Africa 73 people including children died akb
Author
First Published Sep 1, 2023, 7:44 AM IST | Last Updated Sep 1, 2023, 7:45 AM IST

ಜೋಹಾನ್ಸ್‌ಬರ್ಗ್‌: ದಕ್ಷಿಣಾ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಘಟನೆಯಲ್ಲಿ ಮಕ್ಕಳೂ ಸೇರಿದಂತೆ 73 ಜನರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. 52 ಮಂದಿ ಗಾಯಗೊಂಡಿದ್ದಾರೆ.

ಹೆಚ್ಚಾಗಿ ವಲಸಿಗರು ವಾಸಿಸುತ್ತಿದ್ದ ನಗರದ ಆಲ್ಬಟ್ಸ್‌ರ್‍ ನಗರದಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಮಧ್ಯರಾತ್ರಿ 1.30ರ ಸುಮಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದ್ದು ಕಟ್ಟಡದ ಬಹುತೇಕ ಭಾಗ ಸುಟ್ಟು ಹೋಗಿದೆ.

ಬಿಬಿಎಂಪಿ ಬೆಂಕಿ ಅವಘಡ; ಗಾಯಾಳು ಶಿವಕುಮಾರ ಇಂದು ಕೊನೆಯುಸಿರು!

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು ಮೃತದೇಹಗಳನ್ನು ಹೊರತೆಗೆದು, ಕಟ್ಟಡದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಈವರೆಗೆ ಬೆಂಕಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು ಇನ್ನೂ ಹೆಚ್ಚಿನ ಶವಗಳು ಪತ್ತೆಯಾಗುವ ಆತಂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ, 4 ಮಂದಿ ಸಜೀವದಹನ

Latest Videos
Follow Us:
Download App:
  • android
  • ios