ಬಿಬಿಎಂಪಿ ಬೆಂಕಿ ಅವಘಡ; ಗಾಯಾಳು ಶಿವಕುಮಾರ ಇಂದು ಕೊನೆಯುಸಿರು!
ಬಿಬಿಎಂಪಿ ಕ್ವಾಲಿಟಿ ಕಂಟ್ರೋಲ್ ಕೊಠಡಿಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಶಿವಕುಮಾರ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ.

ಬೆಂಗಳೂರು (ಆ.30): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಗುಣ ನಿತಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುಣ ನಿಯಂತ್ರಣ ಮತ್ತು ಗುಣ ಭರವಸೆ ವಿಭಾಗದ ಮುಖ್ಯ ಅಭಿಯಂತರರಾದ ಸಿ.ಎಂ ಶಿವಕುಮಾರ್ ಅವರು ಶೇಷಾದ್ರಿಪುರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ವಿಧಿವಶರಾಗಿದ್ದಾರೆ.
ಮೃತ ಶಿವಕುಮಾರ್(45) ಮೂಲತಃ ಮೈಸೂರಿನ ನಂಜನಗೂಡಿನವರು. ಪತ್ನಿ ಉಮಾಮಹೇಶ್ವರಿ, ವಿಭಾ ನಿಧಿ ಶಿವಂ (12 ವರ್ಷ), ನಿರ್ವಿ ನೇಹ ಶಿವಂ (10 ವರ್ಷ) ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬಿಇ ವ್ಯಾಸಂಗ ಮಾಡಿದ್ದ ಮೃತ ಸಿಎಂ ಶಿವಕುಮಾರ್, 2005ರಲ್ಲಿ ಅಧೀಕ್ಷಕ ಅಭಿಯಂತರರು(ಬೃಹತ್ ನೀರುಗಾಲುವೆ ವಿಭಾಗ), ಪ್ರಭಾರ ಮುಖ್ಯ ಅಭಿಯಂತರರು(ಗುಣ ನಿಯಂತ್ರಣ ಮತ್ತು ಗುಣ ಭರವಸೆ ವಿಭಾಗ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದರು.
ಲ್ಯಾಬ್‌ಗೆ ಬೆಂಕಿ ಪ್ರಕರಣ: ಬಿಬಿಎಂಪಿ ಸಿಬ್ಬಂದಿಇಗೆ ಕ್ಲೀನ್ ಚಿಟ್?
ಕಳೆದ 11ರಂದು ಬಿಬಿಎಂಪಿ ಕಂಟ್ರೋಲ್ ರೂಮ್ ಕೊಠಡಿಗೆ ಬೆಂಕಿಬಿದ್ದ ವೇಳೆ ಕೊಠಡಿಯೊಳಗಿದ್ದ 10ಕ್ಕೂ ಹೆಚ್ಚು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ಈ ಪೈಕಿ ಶಿವಕುಮಾರ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಹನ್ನೊಂದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂಜಿನಿಯರ್ ಇಂದು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
Bengaluru: ಬಿಬಿಎಂಪಿ ಬೆಂಕಿ ಪ್ರಕರಣದಲ್ಲಿ ಗಾಯಗೊಂಡಿದ್ದ ಮುಖ್ಯ ಇಂಜಿನಿಯರ್ ಸ್ಥಿತಿ ಗಂಭೀರ
ಬಿಬಿಎಂಪಿ ಮುಖ್ಯ ಶಿವಕುಮಾರ್ ಎಂಬುವವರು ಕಳೆದ 8-9 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಶ್ವಾಸಕೋಶಕ್ಕೆ ಸೋಂಕು ಹೆಚ್ಚಾಗಿತ್ತು.ದುರದೃಷ್ಟವಶಾತ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7 ಗಂಟೆ ಸುಮಾರಿಗೆ ಅವರು ನಿಧನರಾಗಿದ್ದಾರೆ
ಡಾ. ಉದಯ್, ಅಪೋಲೊ ಆಸ್ಪತ್ರೆ ಮುಖ್ಯಸ್ಥ ಶೇಷಾದ್ರಿಪುರ