ರಿಬ್ಬನ್ ಕಟ್ ಮಾಡ್ತಿದ್ದಂಗೆ ಬ್ರಿಡ್ಜ್ ಢಮಾರ್: ಕೆಳಗೆ ಬಿದ್ದ ಅಧಿಕಾರಿಗಳು
ಸೇತುವೆಯೊಂದು ಉದ್ಘಾಟನೆ ವೇಳೆ ಕುಸಿದು ಬಿದ್ದ ಘಟನೆ ಆಫ್ರಿಕಾದ ಕಾಂಗೋ ದೇಶದಲ್ಲಿ ನಡೆದಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸೇತುವೆಯನ್ನು ಔಪಚಾರಿಕವಾಗಿ ಉದ್ಘಾಟಿಸುವುದಾಗಿ ಗಣ್ಯರೆಲ್ಲರೂ ಸೇತುವೆ ಮೇಲೆ ಏರಿ ನಿಂತುಕೊಂಡಿದ್ದು, ಇನ್ನೇನು ರಿಬ್ಬನ್ ಕಟ್ ಮಾಡುತ್ತಿದ್ದಂತೆ ಬ್ರಿಡ್ಜ್ ಢಮಾರ್ ಆಗಿದೆ.
ಭ್ರಷ್ಟಾಚಾರದ ಕಾರಣಕ್ಕೆ ಕಳಪೆ ಕಾಮಗಾರಿಯಿಂದಾಗಿ ಡಾಂಬರು ಹಾಕಿದ ಮರುದಿನವೇ ರಸ್ತೆಗಳೆಲ್ಲಾ ಕಿತ್ತು ಹೋಗುವುದು, ಉದ್ಘಾಟನೆಯಾದ ಮೂರೇ ದಿನಕ್ಕೆ ಸೇತುವೆ ಕುಸಿದು ಬಿದ್ದಿರುವಂತಹ ಘಟನೆಗಳು ನಮ್ಮ ದೇಶದಲ್ಲಿ ಈ ಹಿಂದೆ ನಡೆದಿದೆ. ಈಗ ದಕ್ಷಿಣ ಆಫ್ರಿಕಾದ ಕಾಂಗೋ ದೇಶದ ಸರದಿ. ಸೇತುವೆಯೊಂದು ಉದ್ಘಾಟನೆ ವೇಳೆ ಕುಸಿದು ಬಿದ್ದ ಘಟನೆ ಆಫ್ರಿಕಾದ ಕಾಂಗೋ ದೇಶದಲ್ಲಿ ನಡೆದಿದೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸೇತುವೆಯನ್ನು ಔಪಚಾರಿಕವಾಗಿ ಉದ್ಘಾಟಿಸುವುದಾಗಿ ಗಣ್ಯರೆಲ್ಲರೂ ಸೇತುವೆ ಮೇಲೆ ಏರಿ ನಿಂತುಕೊಂಡಿದ್ದು, ಇನ್ನೇನು ರಿಬ್ಬನ್ ಕಟ್ ಮಾಡುತ್ತಿದ್ದಂತೆ ಬ್ರಿಡ್ಜ್ ಢಮಾರ್ ಆಗಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ನೋಡುಗರನ್ನು ನಗುವಂತೆ ಮಾಡುತ್ತಿದೆ.
ಕಾಂಗೋದ (Congo) ಸ್ಥಳೀಯ ಖಾಮ ಪ್ರೆಸ್ ನ್ಯೂಸ್ ಏಜೆನ್ಸಿ ಪ್ರಕಾರ, ಸ್ಥಳೀಯ ಜನರಿಗೆ ಮಳೆಗಾಲದಲ್ಲಿ ಸಣ್ಣ ಹೊಳೆಯನ್ನು ದಾಟಲು ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೂ ಮೊದಲು ಹೊಳೆ ದಾಟಲು ಇದ್ದ ತಾತ್ಕಾಲಿಕ ವ್ಯವಸ್ಥೆಯೂ ಆಗಾಗ ಹಾನಿಗೊಳಗಾಗುತ್ತಿದ್ದರಿಂದ ಇದಕ್ಕೆ ಶಾಶ್ವತ ಪರಿಹಾರ (Permanent solution) ಕಂಡುಕೊಳ್ಳಲು ಸ್ಥಳೀಯ ಆಡಳಿತ ಸೇತುವೆಯೊಂದನ್ನು ನಿರ್ಮಿಸಿತ್ತು. ಆದರೆ ಇದು ಉದ್ಘಾಟನೆಯಾಗುತ್ತಿದ್ದಂತೆ ಕುಸಿಯುವ ಮೂಲಕ ಅಧಿಕಾರಿಗಳನ್ನು (Officials) ನಗೆಪಾಟಾಲಿಗೀಡಾಗುವಂತೆ ಮಾಡಿದೆ.
ಅಧಿಕೃತ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಗಳೆಲ್ಲರೂ ಸೇತುವೆ ಉದ್ಘಾಟನೆಯ ಸಲುವಾಗಿ ಸೇತುವೆ ಮೇಲೇರಿ ನಿಂತಿರುವುದು ಹಾಗೂ ಕೆಂಪು ಬಣ್ಣದ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸುವುದು, ಕ್ಷಣದಲ್ಲೇ ಸೇತುವೆ ಕುಸಿದು ಸೇತುವೆ ಮೇಲಿದ್ದವರೆಲ್ಲ ಕೆಳಗೆ ಬೀಳುವುದು ವಿಡಿಯೋದಲ್ಲಿ ಸೆರೆ ಆಗಿದೆ. ಮಹಿಳಾ ಅಧಿಕಾರಿಯೊಬ್ಬರನ್ನು ಅವರ ಜೊತೆ ಇದ್ದ ಮತ್ತೊಬ್ಬರು ಎಳೆದುಕೊಂಡು ಪಕ್ಕಕ್ಕೆ ಹಾರಿದ್ದು, ಕೆಳಗೆ ಬೀಳುವುದರಿಂದ ಅವರು ಪಾರಾಗಿದ್ದಾರೆ. ಈ ಸೇತುವೆಯೂ ಮುರಿದು ಎರಡು ಭಾಗವಾಗಿದೆ ಎಂದು ತಿಳಿದು ಬಂದಿದೆ.
ಮೇಘಸ್ಫೋಟಕ್ಕೆ ಮತ್ತೆ ಉತ್ತರಕ್ಕೆ ಜಲ ಕಂಟಕ: ವರುಣ ಮೃದಂಗದ 20 ದೃಶ್ಯಗಳು ಇಲ್ಲಿವೆ ನೋಡಿ
ಆಫ್ರಿಕಾದ ರಾಜಕಾರಣಿಗಳು ಹೀಗೆ ಸಾರ್ವಜನಿಕವಾಗಿ ನಗೆಪಾಟಾಲಿಗೀಡಾಗುವುದು ಸಾಮಾನ್ಯ ಎನಿಸಿದೆ. 2018ರಲ್ಲಿ ಜಿಂಬಾಬ್ವೆಯ ( Zimbabwe) ಮಾಜಿ ಹಣಕಾಸು ಸಚಿವ ಪ್ಯಾಟ್ರಿಕ್ ಚಿನಮಸ (Patrick Chinamasa) ಅವರು ರಬ್ಬಿಸ್ ಬಿನ್ (ಕಸದ ಬುಟ್ಟಿ) ಶುರು ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ(social Media) ಸಖತ್ ಟ್ರೆಂಡ್ ಆಗಿದ್ದರು. ಕಳೆದ ವಾರ ರಿಬ್ಬನ್‌ನಿಂದ ಕಟ್ಟಿದ ನೀರಿನ ನಲ್ಲಿಯೊಂದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದನ್ನು ಅಧಿಕಾರಿಗಳು ಉದ್ಘಾಟಿಸಿದ್ದರು, ಇದು ಕೂಡ ತಮಾಷೆಗೆ ಕಾರಣವಾಗಿತ್ತು. ಈ ಮಧ್ಯೆ ಈಗ ಸಣ್ಣದೊಂದು ಕಾಲು ಸೇತುವೆಯನ್ನು ಅಧಿಕಾರಿಗಳು ಉದ್ಘಾಟನೆಗೆ ಮುಂದಾಗಿದ್ದು, ಅದೂ ಕೂಡ ಫಲ ಕೊಡದೇ ಹೋಗಿದೆ. ಕಾಂಗೋದ ಜನರು ಕೂಡ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಚೀನಾ ಮೇಡ್ ಸೇತುವೆ ಎಂದು ವ್ಯಂಗ್ಯವಾಡಿದ್ದಾರೆ.
Chikkamagaluru;ಕುದುರೆಮುಖ ವ್ಯಾಪ್ತಿಯಲ್ಲಿ ಭಾರೀ ಮಳೆ ಹಿನ್ನೆಲೆ, ಹೆಬ್ಬಾಳೆ ಸೇತುವೆ ಮುಳುಗಡೆ
ನೋಡಿ ಹೋದ ಕೆಲವೇ ನಿಮಿಷದಲ್ಲಿ ಕುಸಿದ ಸೇತುವೆ
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಇನ್ನೇನು ಅಲ್ಲಿಂದ ಹೊರಟ ಐದೇ ನಿಮಿಷದಲ್ಲೇ ತೀತಾ ಸೇತುವೆ ಕುಸಿದುಬಿದ್ದ ಘಟನೆ ಕಳೆದ ಆಗಸ್ಟ್‌ನಲ್ಲಿ ಕೊರಟಗೆರೆ ತಾಲ್ಲೂಕಿನ ತೀತಾ-ಗೊರವನಹಳ್ಳಿ ಯಲ್ಲಿ ನಡೆದಿತ್ತು. ಅದೃಷ್ಟವಶಾತ್ ಪರಮೇಶ್ವರ್ ಸ್ವಲ್ಪದರಲ್ಲೇ ಭಾರೀ ಅನಾಹುತದಿಂದ ಪಾರಾಗಿದ್ದರು. ಪರಮೇಶ್ವರ್ ಭೇಟಿ ಬಳಿಕ 5 ನಿಮಿಷಕ್ಕೆ ಕೊರಟಗೆರೆ ತಾಲೂಕಿನ ತೀತಾ-ಗೊರವನಹಳ್ಳಿ ನಡುವಿನ ಸೇತುವೆ ಕುಸಿತಗೊಂಡಿತ್ತು. ತೀತಾ ಸೇತುವೆ ಆಗಸ್ಟ್ 25 ರ ರಾತ್ರಿ ಸುರಿದ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು. ಸೇತುವೆ ಕುಸಿತ ಹಿನ್ನೆಲೆ ಸಂಜೆ ಡಾ.ಜಿ ಪರಮೇಶ್ವರ್ ಅವರು ತಹಶೀಲ್ದಾರ್ ಜೊತೆಗೆ ಭೇಟಿ ನೀಡಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಸೇತುವೆ ಸಂಪೂರ್ಣ ಕುಸಿದಿದೆ.