ಒಂಭತ್ತು ವರ್ಷದ ಭಾರತೀಯ ಬಾಲಕ ಈಗ ಯೋಗ ಶಿಕ್ಷಕ

ಅತ್ಯಂತ ಕಿರಿಯ ಯೋಗ ತರಬೇತುದಾರ ಎಂಬ ಹೆಗ್ಗಳಿಕೆಯನ್ನು ಭಾರತೀಯ ಮೂಲದ ಬಾಲಕ ರೇಯಾಶ್‌ ಸುರಾನಿ ಗಳಿಸಿದ್ದು ಈ ಮೂಲಕ ಗಿನ್ನೆಸ್‌ ಪುಟ ಸೇರಿದ್ದಾನೆ

Nine year old Indian boy becomes youngest yoga instructor akb

ಒಂಬತ್ತು ವರ್ಷದ ಭಾರತೀಯ ಹುಡುಗನೋರ್ವ ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಗಿನ್ನೆಸ್ ವಿಶ್ವ ದಾಖಲೆಯ ಪುಟದಲ್ಲಿ ಈ ಬಾಲಕನ ಹೆಸರು ಸೇರಿಸಲಾಗಿದೆ. ಒಂಬತ್ತು ವರ್ಷದ ಭಾರತೀಯ ಬಾಲಕನೊಬ್ಬ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ವಿಡಿಯೋವನ್ನು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರನಾದ ಒಂಬತ್ತು ವರ್ಷದ ಭಾರತೀಯ ಬಾಲಕ ರೇಯಾಶ್ ಸುರಾನಿ (Reyash Surani) ಅವರ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮಕ್ಕಳಿಗಾಗಿ ಮೀಸಲಾಗಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವು ಎಲ್ಲರನ್ನು ಬೆರಗುಗೊಳಿಸುತ್ತಿದೆ.

ಈ ವಿಡಿಯೋದಲ್ಲಿ ಬಾಲಕ ರೇಯಾಶ್ ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಕಿರಿಯ ಪ್ರಮಾಣೀಕೃತ ಯೋಗ ಬೋಧಕನಾಗುವ ತನ್ನ ಸಾಧನೆಗಳ ಬಗ್ಗೆ ಆತ ಈ ವಿಡಿಯೋದಲ್ಲಿ ಮಾತನಾಡಿದ್ದಾನೆ. ಯೋಗವು ಯಾವಾಗಲೂ ತನಗೆ ಆಸಕ್ತಿಕರ ವಿಚಾರವಾಗಿತ್ತು. ಮತ್ತು ಈಗ ಸ್ವತಃ ನಾನೇ ಬೇರೆಯವರಿಗೆ ಕಲಿಸಲು ಪ್ರಾರಂಭಿಸಿದ್ದು ಈ ಬೋಧನೆಯನ್ನು ಕೂಡ ತಾನು ಇಷ್ಟಪಡುತ್ತಿರುವುದಾಗಿ ಬಾಲಕ ಹೇಳಿದರು. ಅಲ್ಲದೇ ಅವರು ಇಂಟರ್‌ನೆಟ್ ಹಾಗೂ ಎಸಿ ಇಲ್ಲದ ಪ್ರಕೃತಿಯ ಮಡಿಲಲ್ಲಿ ಯೋಗಾಭ್ಯಾಸ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಜೊತೆಗೆ ಈ ವಿಡಿಯೋದಲ್ಲಿ ಬಾಲಕ ಯೋಗ ಮಾಡುತ್ತಿರುವ ದೃಶ್ಯಗಳಿವೆ. ಈ ವಿಡಿಯೋವನ್ನು ಫೆಬ್ರವರಿ 17 ರಂದು ಪೋಸ್ಟ್ ಮಾಡಲಾಗಿದೆ. ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

 

ಯುವ ಯೋಗಪಟು ತಮ್ಮ 200 ಗಂಟೆಗಳ ಯೋಗ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ 2021ರ ಜುಲೈ  27 ರಂದು ಆನಂದ್ ಶೇಖರ್ ಯೋಗ ಶಾಲೆಯಿಂದ ಅವರಿಗೆ ಪ್ರಮಾಣಪತ್ರ ನೀಡಲಾಯಿತು ಎಂದು ಗಿನ್ನೆಸ್‌ ಬುಕ್‌ ಅಪ್‌ ವರ್ಲ್ಡ್‌ ರೆಕಾರ್ಡ್‌ಗೆ ಸಂಬಂಧಿಸಿದ ಅಧಿಕೃತ ಬ್ಲಾಗ್ ವರದಿ ಮಾಡಿದೆ. ರೇಯಾಶ್ ಸುರಾನಿ ಅವರು ಕೇವಲ ನಾಲ್ಕು ವರ್ಷದವರಾಗಿದ್ದಾಗ ಯೋಗ ಮಾಡಲು ಪ್ರಾರಂಭಿಸಿದರು ಎಂದು ಈ ಬ್ಲಾಗ್‌ನಲ್ಲಿ ಹೇಳಲಾಗಿದೆ. 

Yogasana : ಮನೆಯಲ್ಲೇ ಹೀಗೆಲ್ಲಾ ಮಾಡಿದ್ರೆ ಹದಗೆಡಬಹುದು ಆರೋಗ್ಯ

ಯಾವುದೇ ಕೆಲಸವನ್ನು ತ್ವರಿತವಾಗಿ ಮತ್ತು ಸರಿಯಾಗಿ ಮಾಡಬೇಕು ಮತ್ತು ಅದರ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಅದು ವಯಸ್ಸಾದವರಾಗಿರಲಿ ಅಥವಾ ಮಕ್ಕಳಾಗಿರಲಿ, ಏನನ್ನಾದರೂ ಕಲಿಯಲು  ಗಮನವನ್ನು ಹೊಂದಿರುವುದು ಬಹಳ ಮುಖ್ಯ. ಮತ್ತೊಂದೆಡೆ, ಕೆಲವು ಪೋಷಕರು ತಮ್ಮ ಮಗು ಅಧ್ಯಯನದ ಮೇಲೆ ಗಮನ ಹರಿಸುವುದಿಲ್ಲ ಎಂದು ದೂರುತ್ತಾರೆ. 

ಹೌದು ಕೆಲವೊಂದು ಮಕ್ಕಳು (Kids) ಅಧ್ಯಯನದ ಕಡೆಗೆ ಕಡಿಮೆ ಆಸಕ್ತಿಯನ್ನು ಹೊಂದಿರುತ್ತಾರೆ. ಈ ಸಮಸ್ಯೆಯನ್ನು ನೀವು ನಿಮ್ಮ ಮಗು ಅಥವಾ ನಿಮ್ಮಲ್ಲೂ ನೋಡುತ್ತಿದ್ದರೆ, ವಿಶೇಷ ಯೋಗಾಸನ (Yogasana) ಮಾಡಲು ಪ್ರಾರಂಭಿಸಿ. ಈ ಯೋಗಾಸನದ ಹೆಸರು ವೃಕ್ಷಾಸನ . ಇದನ್ನು ಮಾಡುವ ಮೂಲಕ ಏಕಾಗ್ರತೆ (Concentration) ಹೆಚ್ಚಿಸಬಹುದು. 

Yoga Asanas: ಹೈರಾಣ ಮಾಡುವ ಕತ್ತು, ಬೆನ್ನು ನೋವಿಗೆ ಇಲ್ಲಿದೆ ಪರಿಹಾರ

ದೇಹದ ಸಮತೋಲನ (Body Balance) ಮತ್ತು ಗಮನವನ್ನು ಹೆಚ್ಚಿಸಲು ವೃಕ್ಷಾಸನ ಸಹಾಯ ಮಾಡುತ್ತದೆ ಎಂದು ನಟಿ ಮಲೈಕಾ ಹೇಳುತ್ತಾರೆ.ಇದರಿಂದ ಸುಲಭವಾಗಿ ಏಕಾಗ್ರತೆ(Concentration) ಹೆಚ್ಚಿಸಬಹುದು. ಮೊದಲು ನಿಮ್ಮ ಎರಡೂ ಪಾದಗಳ ಮೇಲೆ ನೇರವಾಗಿ ನಿಂತುಕೊಳ್ಳಿ. ಈಗ ಎಡಗಾಲನ್ನು (Left leg) ಸಮತೋಲನದಲ್ಲಿ ಇಡುವಾಗ ಬಲಗಾಲನ್ನು ಬಾಗಿಸಿ ಮತ್ತು ಬಲಗಾಲಿನ ಅಂಗಾಲು ಎಡಪಾದದ ಒಳ ತೊಡೆಯ ಮೇಲೆ ಇರಿಸಿ. ಈ ಮಧ್ಯೆ,  ಬಲಗಾಲಿನ ಪಂಜವು ನೆಲದ ಬದಿಯಲ್ಲಿರಬೇಕು. ಈ ಭಂಗಿಯನ್ನು ಸಮತೋಲನಗೊಳಿಸಿ(balance) ಮತ್ತು ನಂತರ ಕೈಗಳನ್ನು ಮಡಚಿ ಮತ್ತು ಅವುಗಳನ್ನು ತಲೆಯ ಮೇಲೆ ಸರಿಸಿ. ಸ್ವಲ್ಪ ಸಮಯ ಒಂದೇ ಭಂಗಿಯಲ್ಲಿರಿ ಮತ್ತು ನಂತರ ಅದೇ ವಿಧಾನವನ್ನು ಇನ್ನೊಂದು ಕಾಲಿನಿಂದ ಪುನರಾವರ್ತಿಸಿ.

Latest Videos
Follow Us:
Download App:
  • android
  • ios