ಕಡಲಾಮೆಯ ಮಾಂಸ ತಿಂದ 9 ಜನ ಸಾವು 78ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಕಡಲಾಮೆಯ ಮಾಂಸ ತಿಂದು  9 ಜನ ಸಾವಿಗೀಡಾಗಿ 78ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೀಡಾದ ಘಟನೆ ಪೂರ್ವ ಆಫ್ರಿಕಾದ ಜಂಜಿಬಾರ್ ಕರಾವಳಿಯಲ್ಲಿ ನಡೆದಿದೆ.

9 people died after eating sea sea turtle meat more than 78 people were hospitalized in Pemnba Islands Zanzibar akb

ಕಡಲಾಮೆಯ ಮಾಂಸ ತಿಂದು  9 ಜನ ಸಾವಿಗೀಡಾಗಿ 78ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೀಡಾದ ಘಟನೆ ಪೂರ್ವ ಆಫ್ರಿಕಾದ ಜಂಜಿಬಾರ್ ಕರಾವಳಿಯಲ್ಲಿ ನಡೆದಿದೆ. ಜಂಜಿಬಾರ್‌ನಲ್ಲಿರುವ  ದ್ವೀಪ ಸಮೂಹದಲ್ಲಿ ಒಂದಾಗಿರುವ ಪೆಂಬಾ ದ್ವೀಪದಲ್ಲಿ  ಜನ ಕಡಲಾಮೆಯ ಮಾಂಸ ತಿಂದಿದ್ದು, ಬಳಿಕ ಈ ದುರಂತ ಸಂಭವಿಸಿದೆ. ಮೃತರಾದ ಒಂಬತ್ತು ಜನರಲ್ಲಿ 8 ಜನ ಮಕ್ಕಳಾಗಿದ್ದಾರೆ. 

ಕಡಲಾಮೆಯ ಮಾಂಸವನ್ನು ಇಲ್ಲಿನ ಜನ ಬಹಳ ರುಚಿಯಾದ ಆಹಾರವೆಂದು ಭಾವಿಸುತ್ತಾರೆ.  ಚೆಲೋನಿಟಾಕ್ಸಿಸಮ್ ಎಂಬ ವಿಷಾಹಾರವಾಗಿ ಇದು ಬದಲಾಗಿ ಈ ಹಿಂದೆಯೂ ಅನೇಕ ಸಾವುಗಳು ಸಂಭವಿಸಿದರೂ ಇಲ್ಲಿನ ಜನ ಇದನ್ನು ತುಂಬಾ ರುಚಿಯಾದ ಆಹಾರವೆಂದೇ ಪರಿಗಣಿಸುತ್ತಾರೆ. ಇದರಿಂದ ಈ ಕಡಲಾಮೆಯ ಆಹಾರ ತಿಂದವರು ವಿಷಾಹಾರದಿಂದ ತೊಂದರೆಗೊಳಗಾಗುತ್ತಾರೆ.

ಘಟನೆಯಲ್ಲಿ ಮೃತರಾದ ವಯಸ್ಕರ ಮಗು ಈ ಹಿಂದೆ ಇದೇ ರೀತಿ ಕಡಲಾಮೆಯ ಆಹಾರ ಸೇವಿಸಿ ಸಾವಿಗೀಡಾಗಿತ್ತು ಎಂದು ಮ್ಕೋನಿ ಜಿಲ್ಲಾ ವೈದ್ಯಕೀಯ ಅಧಿಕಾರಿ ಹಾಜಿ ಬಕರಿ ಹೇಳಿದ್ದಾರೆ. ಮೃತರು ಹಾಗೂ ಅಸ್ವಸ್ಥರಾದವರೆಲ್ಲರೂ ಬುಧವಾರ ಈ ಕಡಲಾಮೆಯ ಆಹಾರ ಸೇವಿಸಿದ್ದರು.  ಘಟನೆಗೆ ಸಂಬಂಧಿಸಿದಂತೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದ್ದು, ಮೃತರ ಹಾಗೂ ಅಸ್ವಸ್ಥರಾದವರ ವೈದ್ಯಕೀಯ ಪರೀಕ್ಷೆಗಳು ಅವರು ಕಡಲಾಮೆಯ ಮಾಂಸ ತಿಂದಿದ್ದಾರೆ ಎಂಬುದನ್ನು ಖಚಿತ ಪಡಿಸಿದೆ ಎಂದು ವರದಿ ಮಾಡಿದೆ. 

ಕಾಸರಕೋಡ ಟೊಂಕದ ಕಡಲತೀರದಲ್ಲಿ Olive ridley ಜಾತಿಯ ಕಡಲಾಮೆ ಮೊಟ್ಟೆಪತ್ತೆ!

ಜಂಜಿಬಾರ್ ಪೂರ್ವ ಆಫ್ರಿಕಾದ ತಾಂಜಾನಿಯಾ ದೇಶದ ಸ್ವಯತ್ತ ಪ್ರದೇಶವಾಗಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ಹಂಜಾ ಹಸನ್ ಜುಮಾ ನೇತೃತ್ವದ ವಿಪತ್ತು ನಿರ್ವಹಣಾ ತಂಡವನ್ನು ಕಳುಹಿಸಲಾಗಿದ್ದು, ಜನರಿಗೆ ಸಮುದ್ರ ಆಮೆಗಳ ಮಾಂಸವನ್ನು ತಿನ್ನುವುದನ್ನು ನಿಲ್ಲಿಸುವಂತೆ ಈ ತಂಡ ಮನವಿ ಮಾಡುತ್ತಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. 2021 ರ ನವಂಬರ್‌ನಲ್ಲೂ ಹೀಗೆ ಸಮುದ್ರ ಆಮೆಯ ಮಾಂಸ ತಿಂದು ಇದೇ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಪೆಂಬಾದಲ್ಲಿ 7 ಜನ ಸಾವನ್ನಪ್ಪಿದ್ದರು. ಮೂವರು ಆಸ್ಪತ್ರೆ ಸೇರಿದ್ದರು. ಆದರೂ ಜನ ಈ ಆಮೆಯ ಮಾಂಸ ತಿನ್ನುವುದನ್ನು ಬಿಡುತ್ತಿಲ್ಲ,

Sea turtle: ಹೊನ್ನಾವರ: ಸಮುದ್ರ ಸೇರಿದ ಪುಟಾಣಿ ಕಡಲಾಮೆಗಳು!

Latest Videos
Follow Us:
Download App:
  • android
  • ios