Asianet Suvarna News Asianet Suvarna News

9/11 Terror Attack: ಅತ್ಯಂತ ದುರ್ಬಲ ಸ್ಥಿತಿಯಲ್ಲೂ ನಮ್ಮ ಒಗ್ಗಟ್ಟೇ ನಮ್ಮ ಶಕ್ತಿ: ಬೈಡೆನ್

* 9/11, ಭೀಕರ ಭಯೋತ್ಪಾದಕ ದಾಳಿಗೆ 20 ವರ್ಷ

* ಭಯೋತ್ಪಾದಕ ದಾಳಿ ನೆನಪಿಸಿಕೊಂಡು ಅಧ್ಯಕ್ಷ ಬೈಡೆನ್ ಮಾತು

* ದುರ್ಬಲ ಪರಿಸ್ಥಿತಿಯಲ್ಲೂ ನಮ್ಮ ಒಗ್ಗಟ್ಟೇ ನಮ್ಮ ಬಲ ಎಂದ ಬೈಡೆನ್

9 11 attacks Joe Biden commemorates victims calls for unity on 20th anniversary pod
Author
Bangalore, First Published Sep 11, 2021, 9:26 AM IST

ವಾಷಿಂಗ್ಟನ್(ಸೆ.11): 9/11, ಭೀಕರ ದಾಳಿ ನಡೆದು ಇಂದಿಗೆ 20 ವರ್ಷ. ಹೀಗಿರುವಾಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಪ್ಪತ್ತು ವರ್ಷಗಳ ಹಿಂದೆ ದಾಳಿಯಿಂದ ಪ್ರಾಣ ಕಳೆದುಕೊಂಡ 2,977 ಮಂದಿಯನ್ನು ನೆನಪಿಸಿಕೊಂಡರು. ಇದೇ ವೇಳೆ ವೀಡಿಯೋ ಮೂಲಕ ಸಂದೇಶ ಕೊಟ್ಟಿರುವ ಅಮೆರಿಕ ಅಧ್ಯಕ್ಷ ಬೈಡೆನ್, "ಸೆಪ್ಟೆಂಬರ್ 11, 2009 ರಿಂದ 20 ವರ್ಷಗಳ ನಂತರ, ದಾಳಿಯಲ್ಲಿ ಕಳೆದುಕೊಂಡ 2,977 ಜನರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅಲ್ಲದೇ ತಮ್ಮ ಜೀವವನ್ನು ಪಣಕ್ಕಿಟ್ಟವರನ್ನೂ ಗೌರವಿಸುತ್ತೇವೆ. ದಾಳಿ ಬಳಿಕದ ದಿನಗಳಲ್ಲಿ ಏಕತೆಯೇ ನಮ್ಮ ದೊಡ್ಡ ಶಕ್ತಿ ಎಂದು ನೋಡಿದ್ದೇವೆ. ನಾವು ಯಾರೆಂದು ಇದೇ ತೋರಿಸಿಕೊಡುತ್ತದೆ. ಹಾಗೂ ನಮ್ಮ ಈ ಶಕ್ತಿಯನ್ನು ನಾವೆಂದಿಗೂ ಮರೆಯಬಾರದು ಎಂದಿದ್ದಾರೆ.

ಶ್ವೇತಭವನದಿಂದ ಜಾರಿಗೊಳಿಸಲಾದ ಈ ಆರು ನಿಮಿಷಗಳ ಸಂದೇಶದಲ್ಲಿ "ನಮ್ಮ ಅತ್ಯಂತ ದುರ್ಬಲ ಪರಿಸ್ಥಿತಿಯಲ್ಲೂ ನಮ್ಮ ಏಕತೆಯೇ ನಮ್ಮನ್ನು ಮಾನವರನ್ನಾಗಿ ಮಾಡುತ್ತದೆ, ಅಮೆರಿಕದ ಹೋರಾಟದಲ್ಲೂ ಇದೇ ಒಗ್ಗಟ್ಟು ನ್ಮ ಬಲ ಎಂಬುವುದು ಸೆಪ್ಟೆಂಬರ್ 11 ನಮಗೆ ಕಲಿಸಿದೆ ಎಂದು ಬೈಡೆನ್ ತಿಳಿಸಿದ್ದಾರೆ. ಇದೇ ವೇಳೆ ದಾಳಿ ವೇಳೆ ತಮ್ಮ ಪ್ರಾಣ ಪಣಕ್ಕಿಟ್ಟವರನ್ನೂ ಬೈಡೆನ್ ನೆನಪಿಸಿಕೊಂಡಿದ್ದಾರೆ.

ನಾವು ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಇಎಂಟಿಗಳು ಮತ್ತು ನಿರ್ಮಾಣ ಕಾರ್ಮಿಕರು, ವೈದ್ಯರು ಮತ್ತು ದಾದಿಯರು, ಸೇವಾ ಸದಸ್ಯರು ಮತ್ತು ರಕ್ಷಣೆ, ಚೇತರಿಕೆ ಮತ್ತು ಪುನರ್ನಿರ್ಮಾಣಕ್ಕಾಗಿ ತಮ್ಮ ಸರ್ವಸ್ವವನ್ನು ನೀಡಿದ ಎಲ್ಲರನ್ನು ಗೌರವಿಸುತ್ತೇವೆ" ಎಂದೂ ಅಮೆರಿಕ ಅಧ್ಯಕ್ಷ ತಿಳಿಸಿದ್ದಾರೆ.

ಸೆಪ್ಟೆಂಬರ್ 11, 2001 ರಂದು, ಅಮೆರಿಕ ತನ್ನ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯನ್ನು ಎದುರಿಸಿತು. ಭಯೋತ್ಪಾದಕರ ದಾಳಿಯಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ ಖೈದಾ ಭಯೋತ್ಪಾದಕರು ವಿಮಾನಗಳನ್ನು ಅಪಹರಿಸಿದ 102 ನಿಮಿಷಗಳಲ್ಲಿ, ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಎರಡೂ ಗೋಪುರಗಳನ್ನು ಧ್ವಂಸಗೊಳಿಸಿದ್ದರು. 

Follow Us:
Download App:
  • android
  • ios