* 7,200 ವರ್ಷ ಹಳೆಯ ಮಾನವ ಅವಶೇಷ ಪತ್ತೆ* ಡಿಎನ್‌ಎ ಆಧಾರದಲ್ಲಿ ಹೊಸ ಮಾನವ ವಂಶಾವಳಿಯ ಶೋಧ* ಈ ರೀತಿಯ ವಂಶಾ​ವಳಿ ಬೇರೆಲ್ಲೂ ಪತ್ತೆ ಆಗಿ​ಲ್ಲ

ಜಕಾರ್ತಾ(ಆ.28): ಇಂಡೋನೇಷ್ಯಾದಲ್ಲಿ 7,200 ವರ್ಷದ ಹಿಂದೆ ಬದುಕಿದ್ದ ಬೇಟೆಗಾರ ಮಹಿಳೆಯೊಬ್ಬಳ ಪಳೆಯುಳಿಕೆಗಳು ಪತ್ತೆ ಆಗಿವೆ. ಅವಶೇಷಗಳು ಇನ್ನೂ ಹಾಳಾಗದೇ ಉಳಿದಿದ್ದು, ಸ್ಥಳದಲ್ಲಿ ಲಭ್ಯವಾದ ಡಿಎನ್‌ಎ ಆಧಾರದ ಮೇಲೆ ಇದೊಂದು ವಿಭಿನ್ನ ವಂಶಾವಳಿಗೆ ಸೇರಿದ ಮೃತದೇಹವಾಗಿದ್ದು, ಈ ರೀತಿಯ ಮಾನವ ವಂಶಾವಳಿ ವಿಶ್ವದ ಬೇರೆಲ್ಲಿಯೂ ಪತ್ತೆ ಆಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

17ರಿಂದ 18 ವರ್ಷದ ಬಾಲಕಿಯ ಮೃತದೇಹ ಇದಾಗಿರಬಹುದು ಎಂದ ಅಂದಾಜಿಸಲಾಗಿದೆ. ಇದನ್ನು ದಕ್ಷಿಣ ಸುಲವೇಸಿಯಯದಲ್ಲಿರುವ ಲಿಯಾಂಗ್‌ ಪ್ಯಾನಿಂಗೆ ಸುಣ್ಣದ ಗುಹೆಯಲ್ಲಿ ಸಮಾಧಿ ಮಾಡಲಾಗಿತ್ತು. ಬೇಟೆಗಾರ ಜನಾಂಗದ ಟಿಲೋಯನ್‌ ಜನಾಂಗದ ಕಲಾಕೃತಿಯ ಜೊತೆ ಮೃತದೇಹದ ಪಳೆಯುಳಿಕೆಗಳನ್ನು ಪತ್ತೆ ಹಚ್ಚಲಾಗಿದೆ.

ಇದು ಈ ಪ್ರದೇಶದಲ್ಲಿ ಪತ್ತೆ ಆದ ಟೋಲಿಯನ್ನರಲ್ಲಿ ಮೊದಲ ಅಸ್ತಿಪಂಜರವಾಗಿದೆ. ಅದ್ರ್ರ ಉಷ್ಣವಲಯ ಪ್ರದೇಶದಲ್ಲಿ ಮಾನವ ಡಿಎನ್‌ಎಯನ್ನು ಒಳಗೊಂಡ ಅಸ್ಥಿಪಂಜರ ಪತ್ತೆ ಆಗಿರುವುದು ತೀರಾ ಅಪರೂಪ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.