ಉಕ್ರೇನ್‌ನ ಪೂರ್ವ ಡೊನೆಟಸ್ಕ್ ವಲಯದಲ್ಲಿ ಉಕ್ರೇನ್‌ನ ಸೇನೆ ನಡೆಸಿದ ರಾಕೆಟ್‌ ದಾಳಿಯಲ್ಲಿ ರಷ್ಯಾದ 63 ಯೋಧರು ಮೃತಪಟ್ಟಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.

ಕೀವ್‌: ಉಕ್ರೇನ್‌ನ ಪೂರ್ವ ಡೊನೆಟಸ್ಕ್ ವಲಯದಲ್ಲಿ ಉಕ್ರೇನ್‌ನ ಸೇನೆ ನಡೆಸಿದ ರಾಕೆಟ್‌ ದಾಳಿಯಲ್ಲಿ ರಷ್ಯಾದ 63 ಯೋಧರು ಮೃತಪಟ್ಟಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ. ‘ಹಿಮಾ​ರ್‍ಸ್’ ಲಾಂಚ್‌ ಸಿಸ್ಟಮ್‌ ಬಳಸಿ ಉಕ್ರೇನ್‌ ಪಡೆಗಳು 6 ರಾಕೆಟ್‌ಗಳನ್ನು ಲಾಂಚ್‌ ಮಾಡಿದ್ದವು. ಇದರಲ್ಲಿ 2 ರಾಕೆಟ್‌ಗಳನ್ನು ಹೊಡೆದುರುಳಿಸುವಲ್ಲಿ ರಷ್ಯಾ ಸೇನೆ ಸಫಲವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಅಮೆರಿಕ ನೀಡಿರುವ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಇತ್ತೀಚಿಗೆ ರಷ್ಯಾ ವಿರುದ್ಧ ಉಕ್ರೇನ್‌ ಸ್ಪಷ್ಟವಾದ ದಾಳಿ ನಡೆಸಿದೆ. ಇತ್ತೀಚಿಗೆ ಯುದ್ಧ ನಿಲ್ಲಿಸುವತ್ತ ಮನಸ್ಸು ಮಾಡಿರುವುದಾಗಿ ಉಭಯ ದೇಶಗಳ ನಾಯಕರು ಪರೋಕ್ಷ ಹೇಳಿಕೆ ನೀಡಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ.

ರಷ್ಯಾ ಬಿಟ್ಟು ತೆರಳುವುದು ಹೇಗೆ?, ಕೈ ಮುರಿದುಕೊಳ್ಳುವುದು ಹೇಗೆ? ಪ್ರಶ್ನೆಗಳು ರಷ್ಯಾ ಗೂಗಲ್‌ನಲ್ಲಿ ಟ್ರೆಂಡಿಂಗ್‌!

ಅಂತಾರಾಷ್ಟ್ರೀಯ ಕೋರ್ಟ್‌ಗೆ ಉಕ್ರೇನ್‌ ಮೊರೆ: ಭದ್ರತಾ ಮಂಡಳಿಯಿಂದ ರಷ್ಯಾ ವಜಾಗೆ ಬಿಗಿಪಟ್ಟು