ಜ್ವರದಿಂದ ಬಳಲುತ್ತಿರುವ ಸುಮಾರು 3.5 ಲಕ್ಷ ಮಂದಿಗೆ ಚಿಕಿತ್ಸೆ ಮೊದಲ ಕೇಸ್ ಬೆನ್ನಲ್ಲೇ ಇಡೀ ದೇಶದಲ್ಲಿ ಲಾಕ್ಡೌನ್‌ ಘೋಷಣೆ ಉತ್ತರ ಕೊರಿಆದಲ್ಲಿ ಸೋಂಕಿಗೆ 6 ಮಂದಿ ಬಲಿ

ಸಿಯೋಲ್‌(ಮೇ.14): ದೇಶದಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ ಎಂದು ಮೊದಲ ಬಾರಿಗೆ ಒಪ್ಪಿಕೊಂಡ ಮಾರನೇ ದಿನವೇ ಉತ್ತರ ಕೊರಿಆದಲ್ಲಿ ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ. ಜ್ವರದಿಂದ ಬಳಲುತ್ತಿರುವ ಸುಮಾರು 3.5 ಲಕ್ಷ ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಹೇಳಿದೆ. ಮೊದಲ ಪ್ರಕರಣ ಕಾಣಿಸಿಕೊಂಡ ಬೆನ್ನಲ್ಲೇ ಇಡೀ ದೇಶದಲ್ಲಿ ಲಾಕ್ಡೌನ್‌ ವಿಧಿಸಲಾಗಿತ್ತು. ಏಪ್ರಿಲ್‌ ಅಂತ್ಯದಿಂದ ಇಲ್ಲಿಯವರೆಗೆ ಸುಮಾರು 3.5 ಲಕ್ಷ ಮಂದಿ ಜ್ವರದಿಂದ ಬಳಲಿದ್ದಾರೆ. ಇವರಲ್ಲಿ 1.62 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 18 ಸಾವಿರ ಮಂದಿಯಲ್ಲಿ ಹೊಸದಾಗಿ ಜ್ವರ ಕಾಣಿಸಿಕೊಂಡಿದೆ ಎಂದು ಕೇಂದ್ರೀಯ ನ್ಯೂಸ್‌ ಏಜೆನ್ಸಿ ಶುಕ್ರವಾರ ಹೇಳಿದೆ.

ಕೋವಿಡ್‌ ಪತ್ತೆ ಬೆನ್ನಲ್ಲೇ ಸಮುದ್ರಕ್ಕೆ 3 ಕ್ಷಿಪಣಿಗಳ ಹಾರಿಸಿದ ಉ. ಕೊರಿಯಾ
ತನ್ನ ದೇಶದಲ್ಲಿ ಮೊದಲ ಬಾರಿಗೆ ಕೋವಿಡ್‌ ಸೋಂಕು ಪತ್ತೆಯಾಗಿದೆ ಎಂದು ಘೋಷಣೆ ಮಾಡಿಕೊಂಡ ಕೆಲವೇ ತಾಸಿನಲ್ಲಿ ಉತ್ತರ ಕೊರಿಯಾ ಅಲ್ಪ ದೂರ ಕ್ರಮಿಸುವ 3 ಬ್ಯಾಲಿಸ್ಟಿಕ್‌ (ಗುರುತ್ವ ಬಲದಿಂದ ಗುರಿ ತಲುಪುವ) ಕ್ಷಿಪಣಿಗಳನ್ನು ಸಮುದ್ರದತ್ತ ಉಡಾವಣೆ ಮಾಡಿದೆ. ಕೊರೋನಾ ಸೋಂಕು ಪತ್ತೆಯಾಗಿದ್ದರೂ, ತಾನು ಶಸ್ತ್ರಾಸ್ತ್ರ ಪರೀಕ್ಷೆ ನಡೆಸುತ್ತಿರುವ ಸಂದೇಶವನ್ನು ನೀಡಲು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಸಮುದ್ರಕ್ಕೆ ಮೂರು ಕ್ಷಿಪಣಿಗಳನ್ನು ಹಾರಿಸಿರಬಹುದು ಎಂದು ಹೇಳಲಾಗುತ್ತಿದೆ. ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ ಮಾಡಿರುವುದನ್ನು ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಎರಡೂ ದೃಢಪಡಿಸಿವೆ.

ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್‌ ಕೇಸ್‌!

ಚೀನಾದಿಂದ ಉ.ಕೊರಿಯಾಕ್ಕೆ ಹೋದರೆ ಗುಂಡಿಟ್ಟು ಹತ್ಯೆ ಆದೇಶ ನೀಡಿದ್ದ ಕಿಮ್
ಉತ್ತರ ಕೊರಿಯಾದಲ್ಲಿ ಯಾರಿಗಾದರೂ ಕೊರೋನಾ ಬಂದರೆ ಅವರನ್ನು ಗುಂಡಿಟ್ಟು ಸಾಯಿಸಿ ಎಂದು ಈ ಹಿಂದೆ ಆದೇಶ ಹೊರಡಿಸಿದ್ದ ಆ ದೇಶದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ಈಗ ತನ್ನ ಏಕೈಕ ಸ್ನೇಹಿತ ರಾಷ್ಟ್ರವಾಗಿರುವ ಚೀನಾದಿಂದ ಯಾರಾದರೂ ಗಡಿ ದಾಟಿ ಬರಲು ಯತ್ನಿಸಿದರೆ ಅವರನ್ನೂ ಗುಂಡಿಟ್ಟು ಸಾಯಿಸಿ ಎಂದು ಆದೇಶಿಸಿದ್ದರು. 2020ರಲ್ಲಿ ಕೋವಿಡ್ ಭೀಕರ ಪರಿಣಾಮ ಎದುರಿಸಿದ್ದ ಚೀನಾ, ವಿಶ್ವಕ್ಕೆ ಕೋವಿಡ್ ಹರಡಿತ್ತು. ಈ ವೇಳೆ ಕಿಮ್ ಈ ಆದೇಶ ಹೊರಡಿಸಿದ್ದರು.

ಉತ್ತರ ಕೊರಿಯಾ ತನಗೆ ಅಗತ್ಯವಿರುವ ಬಹುತೇಕ ವಸ್ತುಗಳಿಗೆ ನೆರೆ ರಾಷ್ಟ್ರವಾದ ಚೀನಾವನ್ನೇ ಅವಲಂಬಿಸಿದೆ. ಮತ್ತು ಚೀನಾದ ಜೊತೆಗೆ ಮಾತ್ರ ಸ್ನೇಹ ಹೊಂದಿದೆ. ಆದರೆ, ಚೀನಾದಿಂದ ವೈರಸ್‌ ಪ್ರವೇಶಿಸಬಹುದು ಎಂಬ ಭೀತಿಯಿಂದ ಕಳೆದ ಜನವರಿ ತಿಂಗಳಲ್ಲೇ ಚೀನಾದ ಗಡಿಯನ್ನು ಕಿಮ್‌ ಜಾಂಗ್‌ ಮುಚ್ಚಿದ್ದಾನೆ. ಅಲ್ಲಿ 2 ಕಿ.ಮೀ.ನಷ್ಟುಬಫರ್‌ ವಲಯ ಸೃಷ್ಟಿಸಿದ್ದು, ಅದನ್ನು ದಾಟಿ ಯಾರಾದರೂ ಬಂದರೆ ಗುಂಡಿಟ್ಟು ಸಾಯಿಸಿ ಎಂದು ಆದೇಶ ಹೊರಡಿಸಿದ್ದಾನೆ. ‘ಕೊರೋನಾ ಪಹರೆ’ಗೆಂದೇ ಅಲ್ಲಿ ‘ಉತ್ತರ ಕೊರಿಯಾ ವಿಶೇಷ ಕಾರ್ಯಾಚರಣೆ ಪಡೆ’ (ಎಸ್‌ಒಎಫ್‌) ನಿಯೋಜಿಸಿದ್ದಾನೆ ಎಂದು ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕ ಸೇನೆಯ ಮುಖ್ಯಸ್ಥರು ಹೇಳಿದ್ದಾರೆ.

Coronavirus: ಕೊರಿಯಾ, ಚೀನಾ, ಹಾಂಕಾಂಗಲ್ಲಿ ಕೋವಿಡ್‌ ಕೊಂಚ ಇಳಿಕೆ

ಚೀನಾದಿಂದ ಉತ್ತರ ಕೊರಿಯಾಕ್ಕೆ ಮಾಡಿಕೊಳ್ಳುತ್ತಿದ್ದ ಅಗತ್ಯ ವಸ್ತುಗಳ ಆಮದು ಶೇ.85ರಷ್ಟುಕುಸಿದಿದೆ. ಹೀಗಾಗಿ ಅಲ್ಲಿ ಜನರ ಪರದಾಟ ಮಿತಿಮೀರಿದ್ದು, ತುರ್ತು ಸ್ಥಿತಿಯನ್ನೂ ಘೋಷಿಸಲಾಗಿದೆ. ಜೊತೆಗೆ ಇತ್ತೀಚೆಗಷ್ಟೇ ಚಂಡಮಾರುತದಿಂದ 2000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಹೀಗಾಗಿ ಇಷ್ಟುದಿನ ಅಣ್ವಸ್ತ್ರ ಪರೀಕ್ಷೆ ಹಾಗೂ ಅಮೆರಿಕದ ಮೇಲೆ ದಾಳಿ ನಡೆಸುವುದೂ ಸೇರಿದಂತೆ ನಾನಾ ರೀತಿಯ ಬೆದರಿಕೆಗಳನ್ನು ಹಾಕುತ್ತಿದ್ದ ಕಿಮ್‌ ಜಾಂಗ್‌ ಉನ್‌ನ ಹಾರಾಟ ಸದ್ಯಕ್ಕೆ ಬಂದ್‌ ಆಗಿದೆ ಎಂದು ತಿಳಿಸಿದ್ದಾರೆ.