Asianet Suvarna News Asianet Suvarna News

43 ವರ್ಷದ ಈ ವ್ಯಕ್ತಿ 1 ಸಾವಿರ ಮಕ್ಕಳ ತಂದೆ... ಈಗ ಒಂದೇ ಒಂದು ಮಗುವಾದ್ರೆ ಬೀಳಲಿದೆ 91 ಲಕ್ಷ  ದಂಡ!

ಜೋನಾಥನ್ ಮೇಯರ್ ತನ್ನ 26ನೇ ವಯಸ್ಸಿನಲ್ಲಿಯೇ ವೀರ್ಯದಾನಿಯಾಗಿ ಕೆಲಸ ಶುರು ಮಾಡಿದ್ದನು. ಜೀವನಕ್ಕಾಗಿ ಸಂಗೀತಕಾರನಾಗಿರುವ ಜೋನಾಥನ್ ಓರ್ವ ಖ್ಯಾತ ಯುಟ್ಯೂಬರ್ ಸಹ ಆಗಿದ್ದಾನೆ.

43 year old sperm donar  Jonathan Jacob Meijer is Father of 1000 children mrq
Author
First Published Aug 1, 2024, 3:27 PM IST | Last Updated Aug 1, 2024, 3:27 PM IST

ಆಮ್ಸ್ಟರ್ಡ್ಯಾಮ್: ನೆದರಲ್ಯಾಂಡ್‌ 43 ವರ್ಷದ ವ್ಯಕ್ತಿಯೋರ್ವ 1,000 ಮಕ್ಕಳ ತಂದೆ ಅಂದ್ರೆ ನೀವು ನಂಬಲೇಬೇಕು. ಹೌದು, ಈತ ಹೇಳಿಕೊಳ್ಳುವಂತೆ ವಿವಿಧ ದೇಶಗಳಲ್ಲಿ ಈತನ ಮಕ್ಕಳಿವೆ. ಈಗ ಒಂದೇ ಒಂದು ಮಗುವಾದ್ರೆ ಈತನಿಗೆ ಅಲ್ಲಿಯ ಸರ್ಕಾರ 91 ಲಕ್ಷ ದಂಡ ವಿಧಿಸಲು ಸಿದ್ಧವಾಗುತ್ತಿದೆ. ಹಾಗಾಗಿ ಈತ ಮಕ್ಕಳು ಪಡೆಯುವ ಪ್ರಕ್ರಿಯೆಯಿಂದ ನಿವೃತ್ತಿ ಹೊಂದಿರೋದಾಗಿ ಹೇಳಿಕೊಂಡಿದ್ದಾನೆ. ಈಗಾಗಲೇ ಈ ವ್ಯಕ್ತಿ ಕುರಿತು ನೆಟ್‌ಫ್ಲಿಕ್ಸ್‌ನಲ್ಲಿ ಡಾಕ್ಯುಮೆಂಟರಿ ಸಹ ಇದೆ ಎಂದು ನ್ಯೂಸ್ 18 ವರದಿ ಮಾಡಿದೆ. 43 ವರ್ಷದ ಈ ವ್ಯಕ್ತಿಯ ಹೆಸರು ಜೋನಥಾನ್ ಜಾಕೋಬ್ ಮೋಯರ್, ಈತ ನೆದರಲ್ಯಾಂಡ್ ನಿವಾಸಿಯಾಗಿದ್ದಾನೆ. ಸಮಾಜಸೇವೆ ಮಾಡಬೇಕೆಂದು ಯೋಚಿಸಿದ ಜೋನಥಾನ್ ವೀರ್ಯ ದಾನಿಯಾಗಿ  ಗುರುತಿಸಿಕೊಂಡಿದ್ದನು. ಸರ್ಕಾರದಿಂದ ದಂಡ ಬೀಳುತ್ತೆ ಎಂಬ ವಿಷಯ ಗೊತ್ತಾಗುತ್ತಲೇ ವೀರ್ಯದಾನವನ್ನು ನಿಲ್ಲಿಸಿರೋದಾಗಿ ಜೋನಾಥನ್ ಹೇಳಿಕೊಂಡಿದ್ದಾನೆ. 

ಈ ವ್ಯಕ್ತಿಯ ಅಂದಾಜು ಲೆಕ್ಕದ ಪ್ರಕಾರ, ಈತನಿಗೆ 550ಕ್ಕೂ ಹೆಚ್ಚು ಮಕ್ಕಳಿವೆ. ಆದ್ರೆ ಡಾಕ್ಯುಮೆಂಟರಿಯಲ್ಲಿ ವರದಿ ಪ್ರಕಾರ ಜೋನಥಾನ್ ಸಾವಿರ ಮಕ್ಕಳ ತಂದೆಯಾಗಿದ್ದಾನೆ. ವೀರ್ಯದಾನಿಯಾಗಿದ್ದ ಜೋನಥಾನ್ ಸಹ ಎಷ್ಟು ಮಕ್ಕಳಿವೆ ಎಂಬುದರ ಬಗ್ಗೆ ನಿಖರ ಲೆಕ್ಕ ಇರಿಸಿಲ್ಲ ಮತ್ತು ನನಗೆ ಅವರ ಬಗ್ಗೆ ಯಾವ ಭಾವನೆಗಳು ಇಲ್ಲ ಎಂದು ಜೋನಾಥನ್ ಹೇಳುತ್ತಾನೆ. 

ಜೀವನದಲ್ಲಿ ಸಾರ್ಥಕವಾದ ಕೆಲಸ ಮಾಡಬೇಕು ಎಂದು ನಾನು ವೀರ್ಯ ದಾನ ಮಾಡಲು ಮುಂದಾದೆ. ತನ್ನ ದೇಶ ಮಾತ್ರವಲ್ಲದೇ ವಿದೇಶದ ಹಲವು ದಂಪತಿಗೆ ನಾನು ಸ್ಪರ್ಮ್ ದಾನವಾಗಿ ನೀಡಿದ್ದೇನೆ. ನಾನು ವೀರ್ಯ ದಾನ ಮಾಡುವದರಿಂದ ದಂಪತಿ ತಂದೆ-ತಾಯಿಯಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಜೋನಾಥನ್ ಹೇಳುತ್ತಾನೆ. ಈತನ ವೀರ್ಯದಿಂದ ಮಕ್ಕಳನ್ನು ಪಡೆದುಕೊಂಡಿರುವ ದಂಪತಿ ಭವಿಷ್ಯದಲ್ಲಿ ತಮ್ಮ ಮಲಸೋದರ/ರಿಯರ ಜೊತೆ ಸಂಬಂಧ ಬೆಳೆಸಿದ್ರೆ ಹೇಗೆ ಎಂದು ಭಯಗೊಂಡಿದ್ದಾರೆ. 

ಜೋನಾಥನ್ ಮೇಯರ್ ತನ್ನ 26ನೇ ವಯಸ್ಸಿನಲ್ಲಿಯೇ ವೀರ್ಯದಾನಿಯಾಗಿ ಕೆಲಸ ಶುರು ಮಾಡಿದ್ದನು. ಜೀವನಕ್ಕಾಗಿ ಸಂಗೀತಕಾರನಾಗಿರುವ ಜೋನಾಥನ್ ಓರ್ವ ಖ್ಯಾತ ಯುಟ್ಯೂಬರ್ ಸಹ ಆಗಿದ್ದಾನೆ. ಇಷ್ಟು ಮಾತ್ರವಲ್ಲದೇ ಜೋನಾಥನ್ ಹಲವು ಮಕ್ಕಳನ್ನು ಭೇಟಿಯಾಗಿರೋದಾಗಿ ಹೇಳಿದ್ದಾನೆ. ಮಕ್ಕಳ ಜೊತೆ ರಜಾದಿನಗಳಲ್ಲಿ ಪ್ರವಾಸ ಕೈಗೊಂಡಿರೋದಾಗಿ ಎಂಬ ವಿಷಯವನ್ನು ಹಂಚಿಕೊಂಡಿದ್ದಾನೆ. ಕೆಲ ಮಕ್ಕಳಿಗೆ ನಾನು ಅವರ ತಂದೆ ಎಂಬ ವಿಷಯ ಗೊತ್ತಿದೆ. ಕೆಲ ಪೋಷಕರು ಸಹ ಧೈರ್ಯದಿಂದ ವೀರ್ಯದಾನಿಯಿಂದ ತಾವು ಪೋಷಕರಾಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ದಂಪತಿಗಳು ತುಂಬಾ ಎಚ್ಚರಿಕೆಯಿಂದ ವೀರ್ಯದಾನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಜೋನಾಥನ್ ಹೇಳುತ್ತಾನೆ. 

ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!

ಓರ್ವ ಮಹಿಳೆ ವೀರ್ಯಕ್ಕಾಗಿ ಜೋನಾಥನ್ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಳು. ನೈಸರ್ಗಿಕ ರೀತಿಯಲ್ಲಿ ಆಕೆಗೆ ಗರ್ಭಧರಿಸಬೇಕು ಎಂಬ ಕಾರಣಕ್ಕಾಗಿ ಸಂಬಂಧ ಹೊಂದಿದ್ದಳು. ಇದೀಗ ಒಂದೇ ಒಂದು ಮಗುವಾದರೂ ಜೋನಾಥನ್ ಜಾಕೋಬ್ ಮೇಯರ್ 91 ಲಕ್ಷ ಬೀಳಲಿದೆ. ಈ ಹಿನ್ನೆಲೆ ಜೋನಾಥನ್ ವೀರ್ಯದಾನದಿಂದ ನಿವೃತ್ತಿ ಘೋಷಿಸಿದ್ದಾನೆ.

ಬಾಲಿವುಡ್‌ನಲ್ಲಿದೆ ಸಿನಿಮಾ

ವೀರ್ಯದಾನಿಯ ಕುರಿತ ಕಥೆಯುಳ್ಳ ಸಿನಿಮಾವೊಂದು ಬಾಲಿವುಡ್‌ನಲ್ಲಿ ತೆರೆಕಂಡಿತ್ತು. 2012ರಲ್ಲಿ ಬಿಡುಗಡೆಯಾಗಿದ್ದ ವಿಕ್ಕಿ ಡೋನರ್ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ, ಯಾಮಿ ಗೌತಮಿ, ಅನ್ನು ಕಪೂರ್, ಕಮ್ಲೇಶ್ ಗಿಲ್, ಡಾಲಿ ಅಹ್ಲುವಾಲಿಯಾ, ತರುಣ್ ಬಾಲಿ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿತ್ತು. ಚಿತ್ರದಲ್ಲಿ ಆಯುಷ್ಮಾನ್ ವೀರ್ಯದಾನಿಯ ಪಾತ್ರದಲ್ಲಿ ನಟಿಸಿದ್ದರು.

Sperm Donor: ವೀರ್ಯ ದಾನ ಮಾಡಿ, 165 ಮಕ್ಕಳಿಗೆ ತಂದೆಯಾದವ 50ರಲ್ಲಿ ನಿಲ್ಲಿಸ್ತಾನಂತೆ ಈ ಕೆಲಸ!

Latest Videos
Follow Us:
Download App:
  • android
  • ios