ಬಾರ್ಸಿಲೋನಾ (ಡಿ.11):  ಈಗಾಗಲೇ ವಿಶ್ವವನ್ನೇ ಬೆಚ್ಚಿಬೀಳಿಸಿದ ಮಹಾಮಾರಿ ಕೊರೋನಾ ವೈರಸ್ ಲಕ್ಷಾಂತರ ಬಲಿ ಪಡೆದಿದ್ದು, ಕೊಟ್ಯಂತರ ಜನರ ಮೇಲೆ ತನ್ನ ಅಟ್ಟಹಾಸ ಮೆರೆದಿದೆ. ವಿವಿಧ ದೇಶಗಳು ಇದರಿಂದ ತತ್ತರಿಸಿದ್ದು, ಇದೀಗ ಪ್ರಾಣಿಗಳಲ್ಲಿಯೂ ಕೊರೋನಾ ಕಾಣಿಸಿಕೊಂಡಿದೆ. 

ಸಾಧಾರಣವಾಗಿ ಸಿಂಹಗಳ ಸಹವಾಸ ಹಾಗಿರಲಿ ಹತ್ತಿರಕ್ಕೆ ಸುಳಿಯುವುದೂ ಕಷ್ಟ. ಅಂಥದ್ದರಲ್ಲಿ ಸ್ಪೇನ್‌ನ ಬಾರ್ಸಿಲೋನಾದ ಪ್ರಾಣಿ ಸಂಗ್ರಹಾಲಯವೊಂದರಲ್ಲಿ ನಾಲ್ಕು ಸಿಂಹಗಳಿಗೆ ಕೊರೋನಾ ವೈರಸ್‌ ಕಾಣಿಸಿಕೊಂಡಿದೆ.

'ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್‌ನಿಂದ ದೂರವಿರಿ!' ...

 ಸಿಂಹಗಳಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಅವುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 3 ಹೆಣ್ಣು ಹಾಗೂ 1 ಗಂಡು ಸಿಂಹಕ್ಕೆ ಸೋಂಕು ಇರುವುದು ದೃಢಪಟ್ಟಿದೆ.

 ಅಷ್ಟಕ್ಕೂ ಸಿಂಹಗಳಿಗೆ ವೈರಸ್‌ ತಗುಲಿದ್ದು ಹೇಗೆ ಎಂಬುದೇ ಈಗ ಯಕ್ಷಪ್ರಶ್ನೆಯಾಗಿದೆ. ಹೀಗಾಗಿ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.