Asianet Suvarna News Asianet Suvarna News

37 ವರ್ಷದ ಪೇಟೊಂಗ್ಟಾರ್ನ್ ಶಿನವತ್ರಾ ಥೈಲ್ಯಾಂಡ್‌ನ ನೂತನ ಪ್ರಧಾನಿ

ಥೈಲ್ಯಾಂಡ್‌ನ ನೂತನ ಪ್ರಧಾನಿಯಾಗಿ 37 ವರ್ಷದ ಪೇಟೊಂಗ್ಟಾರ್ನ್ ಶಿನವತ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಸಂವಿಧಾನ ಉಲ್ಲಂಘನೆಯ ಕಾರಣಕ್ಕೆ ಶ್ರೆತ್ತಾ ಥಾವಿಸಿನ್ ಅವರನ್ನು ಪದಚ್ಯುತಗೊಳಿಸಿದ ಬೆನ್ನಲ್ಲೇ ಈ ನೇಮಕಗೊಂಡಿದೆ. ಪೇಟೊಂಗ್ಟಾರ್ನ್ ಶಿನವತ್ರಾ ಅವರು ಮಾಜಿ ಪ್ರಧಾನಿ ತಕ್ಸಿನ್ ಶಿನವತ್ರಾ ಅವರ ಪುತ್ರಿ.

37 year old Paetongtarn Shinawatra elected as new Prime Minister of Thailand
Author
First Published Aug 16, 2024, 3:13 PM IST | Last Updated Aug 16, 2024, 3:13 PM IST

ಬ್ಯಾಕಾಂಕ್: ಥೈಲ್ಯಾಂಡ್‌ನ ನೂತನ ಪ್ರಧಾನಿಯಾಗಿ 37 ವರ್ಷ ಪೇಟೊಂಗ್ಟಾರ್ನ್ ಶಿನವತ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಸಂವಿಧಾನ ಉಲ್ಲಂಘನೆಯ ಕಾರಣಕ್ಕೆ 2 ದಿನಗಳ ಹಿಂದೆಯಷ್ಟೇ ಥೈಲ್ಯಾಂಡ್ ಪ್ರಧಾನಿ ಶ್ರೆತ್ತಾ ಥಾವಿಸಿನ್ ಅವರನ್ನು ಥೈಲ್ಯಾಂಡ್‌ನ ಸಂವಿಧಾನಿಕ ನ್ಯಾಯಾಲಯ ಅಧಿಕಾರದಿಂದ ಪದಚ್ಯುತಗೊಳಿಸಿತ್ತು. ಈಗ ಆ ಹುದ್ದೆಗೆ ನೂತನ  ಪ್ರಧಾನಿಯನ್ನು ನೇಮಕ ಮಾಡಲಾಗಿದೆ. ನೂತನ ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ  ಅವರು ಥೈಲ್ಯಾಂಡ್‌ನ ಮಾಜಿ ಪ್ರಧಾನಿ ತಕ್ಸಿನ್ ಶಿನವತ್ರಾ ಅವರ ಪುತ್ರಿಯಾಗಿದ್ದಾರೆ. 

ಪೇಟೊಂಗ್ಟಾರ್ನ್ ಶಿನವತ್ರಾ  (Paetongtarn Shinawatra) ಅವರು ಶಿನವತ್ರಾ ಕುಟುಂಬದಿಂದ ಪ್ರಧಾನಿಯಾದ ಮೂರನೇ ವ್ಯಕ್ತಿಯಾಗಿದ್ದಾರೆ. ಪೇಟೊಂಗ್ಟಾರ್ನ್ ಶಿನವತ್ರಾ  ತಂದೆ ತಕ್ಸಿನ್ ಶಿನವತ್ರಾ ಅವರ ವಿರುದ್ಧ ದೇಶ ಭ್ರಷ್ಟದ ಆರೋಪ ಹೊರಿಸಲಾಗಿತ್ತು. ಅಲ್ಲದೇ ಅವರನ್ನು ದಂಗೆ ಎದ್ದು ಅಧಿಕಾರದಿಂದ ಕಿತ್ತೊಗೆಯಲಾಗಿತ್ತು. ಆದರೆ ಅವರು ಆರೋಪಮುಕ್ತರಾಗಿ ಹೊರ ಬಂದಿದ್ದರು. ಇನ್ನು ಪೇಟೊಂಗ್ಟಾರ್ನ್ ಶಿನವತ್ರಾ ಅವರ ಅತ್ತೆ ಯಿಂಗ್ಲಕ್ ಶಿನವತ್ರಾ ಕೂಡ ದೇಶಭ್ರಷ್ಟದ ಆರೋಪ ಹೊತ್ತು ಪದತ್ಯಾಗ ಮಾಡಿದ್ದರು. ಈಗ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಪೇಟೊಂಗ್ಟಾರ್ನ್ ಶಿನವತ್ರಾ ಥೈಲ್ಯಾಂಡ್‌ನ 2ನೇ ಮಹಿಳಾ ಪ್ರಧಾನಮಂತ್ರಿಯಾಗಿದ್ದು, ದೇಶದ ಅತ್ಯಂತ ಕಿರಿಯ ನಾಯಕಿ ಎನಿಸಿದ್ದಾರೆ. 

ಜಗತ್ತಿನ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ ಈ ನಗರ

ಇನ್ನು ಥೈಲ್ಯಾಂಡ್ ಪ್ರಧಾನಿ ಹುದ್ದೆಗೆ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. 319 ವೋಟುಗಳ ಮೂಲಕ ಅವರ ಆಯ್ಕೆಗೆ ಅನುಮೋದನೆ ಸಿಕ್ಕಿತ್ತು. 145 ವೋಟುಗಳು ಆಕೆಯ ವಿರುದ್ಧ ಬಿದ್ದಿದ್ದವು. ಹಾಗೆಯೇ 27 ಜನ ಮತದಾನದಿಂದ ದೂರ ಉಳಿದಿದ್ದರು. ಪಾರ್ಲಿಮೆಂಟ್ ಸದಸ್ಯರು ಒಂದು ಗಂಟೆ ಒಬ್ಬೊಬ್ಬರಾಗಿ ಕಾಲ ಮತ ಚಲಾವಣೆ ಮಾಡಿ ಪೇಟೊಂಗ್ಟಾರ್ನ್ ಶಿನವತ್ರಾ ಅವರನ್ನು ಆಯ್ಕೆ ಮಾಡಿದ್ದಾರೆ. ಪೇಟೊಂಗ್ಟಾರ್ನ್ ಶಿನವತ್ರಾ ಅವರು ಥೈಲ್ಯಾಂಡ್‌ನಲ್ಲಿ ಅಧಿಕಾರದಲ್ಲಿರುವ ಫ್ಯೂ ಥೈ ಪಕ್ಷದ ನಾಯಕಿಯಾಗಿದ್ದರು, ಅವರು ಜನರಿಂದ ಆಯ್ಕೆಯಾದ ಜನಪ್ರತಿನಿಧಿ ಅಲ್ಲ, ಆಕೆ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಆ ಅರ್ಹತೆ ಅಗತ್ಯವಿರುವುದಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 

ಸಂವಿಧಾನ ಉಲ್ಲಂಘನೆ: ಅಧಿಕಾರದಿಂದ ಥೈಲ್ಯಾಂಡ್ ಪ್ರಧಾನಿ ಶ್ರೆತ್ತಾ ಥವಿಸಿನ್‌ ಕಿತ್ತೆಸೆದ ನ್ಯಾಯಾಲಯ

ಆಕೆಯ ಪಕ್ಷದ ನಾಯಕರು ನೂತನ ಪ್ರಧಾನಿಯಾಗಿ (Thailand new prime minister)ಆಯ್ಕೆಯಾದ ಪೇಟೊಂಗ್ಟಾರ್ನ್ ಶಿನವತ್ರಾ ಅವರಿಗೆ ಚಪ್ಪಾಳೆಯೊಂದಿಗೆ ಭವ್ಯ ಸ್ವಾಗತ ನೀಡಿದರು. ನಂತರ ಬ್ಯಾಕಾಂಕ್‌ನ ಪಕ್ಷದ ಕಚೇರಿಯಲ್ಲಿ ಮತದಾನದ ನಂತರ ಮಾತನಾಡಿದ ಆಕೆ ತಾನು ಹೊಸ ಹುದ್ದೆಯ ಬಗ್ಗೆ ಬಹಳ ಉತ್ಸಾಹಿತರಾಗಿರುವುದಾಗಿ ಅವರು ಹೇಳಿದರು. ಜೊತೆಗೆ ತಮಗೆ ಮತ ಹಾಕಿದ ಸದಸ್ಯರಿಗೆ ಅಭಿನಂದನೆ ತಿಳಿಸಿದರು. ಥೈಲ್ಯಾಂಡ್‌ನ ರಾಜಮನೆತನದ ಅನುಮೋದನೆಯ ನಂತರ ಅವರು ಅಧಿಕೃತವಾಗಿ ಥೈಲ್ಯಾಂಡ್ ಪ್ರಧಾನಿ ಎನಿಸಲಿದ್ದಾರೆ.

Latest Videos
Follow Us:
Download App:
  • android
  • ios