ಈಜಿಪ್ಟಿನ ಮರುಭೂಮಿಯಲ್ಲಿ 3 ಕೋಟಿ ವರ್ಷಗಳ ಹಿಂದಿನ ಬಾಸ್ಟೆಟೊಡಾನ್ ತಲೆಬುರುಡೆ ಪತ್ತೆಯಾಗಿದೆ. ಇದು ಆನೆ, ಹಿಪ್ಪೋಗಳನ್ನು ಬೇಟೆಯಾಡುತ್ತಿದ್ದ ಹಯನೋಡಾಂಟ್ ಗುಂಪಿಗೆ ಸೇರಿದ ಮಾಂಸಾಹಾರಿ ಸಸ್ತನಿಯಾಗಿದೆ.

ಈಜಿಪ್ಟಿನ ಫಯೂಮ್ ಮರುಭೂಮಿಯಲ್ಲಿ ಸುಮಾರು ಮೂರು ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಆನೆ, ಹಿಪ್ಪೋಗಳನ್ನು ಬೇಟೆಯಾಡುತ್ತಿದ್ದ ಜನರ ತಲೆಬುರುಡೆಯು ಪತ್ತೆಯಾಗಿದೆ. ಪಳೆಯುಳಿಕೆ ತಜ್ಞರು ಈ ಮಾಂಸಾಹಾರಿ ಸಸ್ತನಿ ಪ್ರಾಣಿಯು ಒಂದು ಕಾಲದಲ್ಲಿ ಭೂಮಿಯನ್ನು ಆಳುತ್ತಿತ್ತು ಎಂದು ನಂಬಿದ್ದಾರೆ. 

ಭೂಮಿಯ ಮೇಲೆ ಸಿಂಹ, ತೋಳ, ನರಿಗಳು ಹುಟ್ಟುವುದಕ್ಕೂ ಮಿಲಿಯನ್ ವರ್ಷಗಳ ಮುಂಚೆ ಹಯನೋಡಾಂಟ್ ಎಂಬ ಗುಂಪಿಗೆ ಸೇರಿದ ಪ್ರಾಣಿ ಇದು ಎಂದು ಸಂಶೋಧಕರು ಹೇಳಿದ್ದಾರೆ. ಈಜಿಪ್ಟ್ ಮರುಭೂಮಿಯಲ್ಲಿನ ಈ ಆವಿಷ್ಕಾರವು ಆಫ್ರಿಕಾದ ಹಳೆಯ ಆಹಾರ ಸರಪಳಿಯ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಪಳೆಯುಳಿಕೆ ತಜ್ಞರು ಹೇಳಿದ್ದಾರೆ. ಇವು ಚಿರತೆ ಗಾತ್ರದಲ್ಲಿದ್ದು, ಚೂಪಾದ ಹಲ್ಲುಗಳು ಮತ್ತು ಬಲವಾದ ದವಡೆಗಳನ್ನು ಹೊಂದಿದ್ದವು. ಈ ಹೊಸ ಪ್ರಾಣಿಗೆ ಬಾಸ್ಟೆಟೊಡಾನ್ ಎಂದು ಹೆಸರಿಡಲಾಗಿದೆ.

ಬಾಸ್ಟೆಟೊಡಾನ್ ಎಂಬ ಹೆಸರು ಈಜಿಪ್ಟಿನ ಪುರಾಣಗಳಿಗೆ ಸಂಬಂಧಿಸಿದೆ. ಬೆಕ್ಕಿನ ತಲೆಯುಳ್ಳ ದೇವತೆ 'ಬಾಸ್ಟೆಟ್' ಹೆಸರನ್ನು ಈ ಜೀವಿ ವರ್ಗಕ್ಕೆ ಇಡಲಾಗಿದೆ. 'ಓಡನ್' ಎಂದರೆ ಹಲ್ಲು. ಈ ಪ್ರಾಣಿಯ ಹಲ್ಲಿನ ವಿಶೇಷತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಬಗ್ಗೆ ಟೈಲರ್ & ಫ್ರಾನ್ಸಿಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ:ಮಿಸೌರಿಯಲ್ಲಿ 70 ಮಿಲಿಯನ್ ವರ್ಷಗಳ ಹಿಂದಿನ ಡೈನೋಸಾರ್ ಭ್ರೂಣ ಪತ್ತೆ! ಈಗಲೂ ಡೈನೋಸರ್ ಮರಿ ಸುರಕ್ಷಿತ!

Scroll to load tweet…

ಪಳೆಯುಳಿಕೆ ತಜ್ಞೆ ಶೊರೂಖ್ ಅಲ್-ಅಷ್ಕರ್ ನೇತೃತ್ವದಲ್ಲಿ ಕೈರೋದ ಮನ್ಸೂರಾ ವಿಶ್ವವಿದ್ಯಾಲಯ ಮತ್ತು ಅಮೆರಿಕನ್ ವಿಶ್ವವಿದ್ಯಾಲಯದ ಸಂಶೋಧಕರು ಬಾಸ್ಟೆಟೊಡಾನ್ ತಲೆಬುರುಡೆಯ ಪಳೆಯುಳಿಕೆಯನ್ನು ಪತ್ತೆ ಮಾಡಿದ್ದಾರೆ. ಬಾಸ್ಟೆಟೊಡಾನ್ ತಲೆಬುರುಡೆಯ ಅಧ್ಯಯನದ ಸಮಯದಲ್ಲಿ, ಫಯೂಮ್‌ನಲ್ಲಿ ಒಂದು ಶತಮಾನದ ಹಿಂದೆ ಪತ್ತೆಯಾದ ಇತರ ಕೆಲವು ಪಳೆಯುಳಿಕೆಗಳನ್ನು ಸಹ ಸಂಶೋಧಕರು ಅಧ್ಯಯನ ಮಾಡಿದರು. ಸಲ್ಲಂ ಲ್ಯಾಬ್‌ನಲ್ಲಿ ನಡೆದ ಈ ಅಧ್ಯಯನದ ಸಮಯದಲ್ಲಿ, ಈ ಹಿಂದೆ ಸಂಗ್ರಹಿಸಲಾದ ಮತ್ತೊಂದು ಪ್ರಾಣಿಯ ತಲೆಬುರುಡೆಯು ಪತ್ತೆಯಾಯಿತು. 

Scroll to load tweet…

ಇದನ್ನೂ ಓದಿ: ಆದಷ್ಟು ಶೀಘ್ರವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಧ್ವಂಸ ಮಾಡಿ ಎಂದ ಎಲಾನ್‌ ಮಸ್ಕ್‌!

ಹಯನೋಡಾಂಟ್ ಜಾತಿಗೆ ಸೇರಿದ ಈ ಪ್ರಾಣಿಗೆ ಯುದ್ಧ ಮತ್ತು ವಿನಾಶಕ್ಕೆ ಸಂಬಂಧಿಸಿದ ಸಿಂಹದ ತಲೆಯುಳ್ಳ ಈಜಿಪ್ಟಿನ ದೇವತೆ ಸೆಖ್ಮೆಟ್ ಹೆಸರನ್ನು ಇಡಲಾಗಿದೆ. ಆಫ್ರಿಕಾ, ಯುರೋಪ್, ಏಷ್ಯಾ, ಭಾರತ ಮತ್ತು ಉತ್ತರ ಅಮೆರಿಕಾದ ಅನೇಕ ಪ್ರದೇಶಗಳಲ್ಲಿ ಹಯನೋಡಾಂಟ್‌ಗಳು ಲಕ್ಷಾಂತರ ವರ್ಷಗಳಿಂದ ವಾಸಿಸುತ್ತಿದ್ದವು. ಕೆಲವು ಜಾತಿಗಳು ಮಾಂಸಾಹಾರಿ ಸಸ್ತನಿಗಳಾಗಿ ವಿಕಸನಗೊಂಡರೆ ಇನ್ನು ಕೆಲವು ನಾಶವಾದವು ಎಂದು ಸಂಶೋಧಕರು ಹೇಳಿದ್ದಾರೆ.