Asianet Suvarna News Asianet Suvarna News

280 ಗ್ರಾಮಗಳಿಗೆ ಕಾಡ್ಗಿಚ್ಚು : 24 ಜನರಿಗೆ ಗಲ್ಲು !

-ಸಿರಿಯಾದಲ್ಲಿ ಕಾಡ್ಗಿಚ್ಚು ಹಬ್ಬಲು ಕಾರಣರಾಗಿದ್ದ  24 ಜನರಿಗೆ ಗಲ್ಲು ಶಿಕ್ಷೆ
-2020 ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಿದ್ದ ಕಾಡ್ಗಿಚ್ಚು!
-11,000 ಹೆಕ್ಟೇರ್‌ ಅರಣ್ಯ ಪ್ರದೇಶ ಹಾನಿಗೆ ಕಾರಣವಾಗಿದ್ದ ವೈಲ್ಡ್‌ಫಾಯರ್
 

24 people charged with lighting wildfires executed in syria
Author
Bengaluru, First Published Oct 22, 2021, 5:13 PM IST

ಸಿರಿಯಾ( ಅ. 22 ) : ಸಿರಿಯಾದಲ್ಲಿ (Syria) ಮೂವರನ್ನು ಬಲಿ ಪಡೆದು ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿಸಿದ ಕಾಡ್ಗಿಚ್ಚಿಗೆ  (Wildfire) ಕಾರಣವಾಗಿದ್ದ 24 ಜನರನ್ನು ಗಲ್ಲಿಗೇರಿಸಲಾಗಿದೆ ಎಂದು ಸಿರಿಯಾ ಕಾನೂನು ಸಚಿವಾಲಯ (Ministry of Justice) ತಿಳಿಸಿದೆ. ಅರಣ್ಯದ  ಹಲವು ಕಡೆಗಳಲ್ಲಿ ಬೆಂಕಿ ಹಚ್ಚಿರುವುದನ್ನು ಅಪರಾಧಿಗಳು ಓಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಅಕ್ಟೋಬರ್‌ 20, 2021 ಬುಧವಾರದಂದು 24 ಜನರನ್ನೂ ಗಲ್ಲಿಗೇರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.  ಅಲ್ಲದೇ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರಿಗೂ ಜೀವಾವಧಿ ಶಿಕ್ಷೆ ನೀಡಲಾಗಿದ್ದು ಕೆಲವರಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಇವರಲ್ಲಿ ಐದು ಬಾಲಪರಾಧಿಗಳಿದ್ದು ಇವರಿಗೂ ಕೂಡ 10 ರಿಂದ 12 ವರ್ಷ ಸೆರೆಮನೆಯ ಶಿಕ್ಷೆಯನ್ನು ವಿಧಿಸಲಾಗಿದೆ.

ಮಿಷನ್ ಇಂಪಾಸಿಬಲ್ ನಟ ಬಾಲ್ಡ್‌ವಿನ್ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ: ಶೂಟಿಂಗ್ ಮಧ್ಯೆ ಅವಘಡ

2020 ರ ಸೆಪ್ಟೆಂಬರ್‌ನಲ್ಲಿ ಈ ಕಾಡ್ಗಿಚ್ಚು ಸುಮಾರು 280 ಗ್ರಾಮಗಳು ಹಬ್ಬಿದ್ದು 370 ಮನೆಗಳನ್ನು ಧ್ವಂಸಗೊಳಿಸಿತ್ತು. ಜತೆಗೆ 11,000 ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ಹಾನಿಯಾಗಿತ್ತು. ಈ ಅವಘಡಲ್ಲಿ ಸಾವಿರಾರು ಪ್ರಾಣಿ ಮತ್ತು ಸಸ್ಯಸಂಕುಲಕ್ಕೆ ತೊಂದರೆ ಉಂಟಾಗಿತ್ತು. ಕೃಷಿ ಪ್ರದೇಶಗಳಲ್ಲಿಯೂ ಇದು ಹಬ್ಬಿಕೊಂಡಿದ್ದು ಸಾಕಷ್ಟು ಪ್ರಮಾಣದ ಕೃಷಿ ಯಂತ್ರೋಪಕರಣಳ ನಾಶಕ್ಕೆ ಕಾರಣವಾಗಿತ್ತು. ಸಿರಿಯಾದ ಅಧ್ಯಕ್ಷರಾದ ಬಸಾರ್‌-ಅಲ್-ಅಸಾದ್‌ ( Bashar- al-Assad) ಹಾನಿಯಾದ ಪ್ರದೇಶಗಳಿಗೆ ಅಕ್ಟೋಬರ್‌ ತಿಂಗಳಲ್ಲಿ ಭೇಟಿ ನೀಡಿದ್ದರು. 2020 ರ ಆಗಸ್ಟ್‌ ತಿಂಗಳ ಕೊನೆಯಲ್ಲಿ ವಿವಧ ಪ್ರದೇಶಗಳಿಗೆ ಬೆಂಕಿ ಹಾಕುವ ಯೋಜನೆಯನ್ನು ಅಪರಾಧಿಗಳು ಮಾಡಿದ್ದರು. ಸೆಪ್ಟೆಂಬರ್‌ ನಿಂದ ಅಕ್ಟೋಬರ್‌  2020ರ ವರೆಗೆ ಈ ಕೃತ್ಯವನ್ನು ನಡೆಸಿದ್ದಾರೆ ಎಂದು  ಸಿರಿಯಾದ ಕಾನೂನು ಸಚಿವಾಲಯ ತಿಳಿಸಿದೆ. 

ಅಪ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ, 50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಲು ಭಾರತ ಸಜ್ಜು!

ಸಿರಿಯಾದಲ್ಲಿದೆ ಮಾನವ ಕಸಾಯಿಖಾನೆ : Amnesty International ಆರೋಪ!

ಸಿರಿಯಾ ಕಾನೂನಿಗೆ ಸಂಬಂಧಪಟ್ಟಂತೆ ದೇಶದ್ರೋಹ, ಬೇಹುಗಾರಿಕೆ, ಕೊಲೆ ಸೇರಿದಂತೆ ದಹನ ಅಪರಾಧಗಳಲ್ಲಿ ಭಾಗಿಯಾದವರಿಗೆ ಮರಣ ದಂಡಣೆ ವಿಧಿಸುವ ಅಧಿಕಾರವಿದೆ. ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವ   ಅಮ್ನೆಸ್ಟಿ ಇಂಟರ್‌ನ್ಯಾಷನಲ್ (Amnesty International) ಸಿರಿಯಾದ ರಾಜಧಾನಿ ಡಮಾಸ್ಕಸ್‌ನ (Damascus) ಉತ್ತರದಲ್ಲಿರುವ ಸಯದ್ನಾಯಾ ಜೈಲಿನಲ್ಲಿ ಸಾಮೂಹಿಕ ಗಲ್ಲಿಗೇರಿಸುವ ಪ್ರಕ್ರಿಯೆ ಬಗ್ಗೆ ಬೆಳಕು ಚೆಲ್ಲಿತ್ತು.  24 ಜನರನ್ನು ಗಲ್ಲಿಗೇರಿಸುವ ಮೂಲಕ ಸಿರಿಯಾ ಅಂತಾರಾಷ್ಟ್ರೀಯ ಕಾನೂನಿಗೆ (International law) ಅಗೌರವ (Disregard) ತೋರಿಸಿದೆ ಅಲ್ಲದೆ ವಿಶೇಷವಾಗಿ ಜೀವಿಸುವ ಹಕ್ಕನ್ನು (Right to life) ಸಿರಿಯಾ ಮರೆತಂತಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನಲ್ಲಿ ಸಿರಿಯಾ ಬಗ್ಗೆ ಸಂಶೋಧನೆ ನಡೆಸುತ್ತಿರುವ ದಿಯಾನಾ ಸೇಮಾನ್‌ (Diana Semaan) ಹೇಳಿದ್ದಾರೆ. 

ತಾಲೀಬಾನ್ ರಕ್ಕಸರ ವಶದಲ್ಲಿ ಅಫ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ

'ಮಾನವ ಕಸಾಯಿಖಾನೆ' ಎಂಬಂತ್ತಿರುವ ಜೈಲಿನಲ್ಲಿ 13,000 ಜನರನ್ನು ಹಿರಿಯ ಆಧಿಕಾರಿಗಳಿಗೆ ಗೊತ್ತಿರುವಂತೆಯೇ  ಗಲ್ಲಿಗೇರಿಸಲಾಗಿತ್ತು. ಕೈದಿಗಳನ್ನು ಒಂಡೆದೆ ಇಂದ ಇನ್ನೊಂದೆಗೆ ಸಾಗಿಸಲಾಗುತ್ತಿದೆ ಎಂದು ಹೇಳಿ ಮಧ್ಯ ರಾತ್ರಿಯೇ ಅವರನ್ನು ಗಲ್ಲಿಗೇರಿಸಲಾಗಿತ್ತು ಎಂದು ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಆದರೆ ಸಿರಿಯಾ ಕಾನೂನು ಸಚಿವಾಲಯ ಈ ವರದಿಗಳನ್ನು ತಳ್ಳಿ ಹಾಕಿದೆ.

Follow Us:
Download App:
  • android
  • ios