Asianet Suvarna News Asianet Suvarna News

ಹೊಟ್ಟೆ ನೋವೆಂದು ಟಾಯ್ಲೆಟ್‌ಗೆ ಹೋದಾಗ ಹುಟ್ಟಿತ್ತು ಮಗು!

Weird News: ಆಕೆ ಗರ್ಭಿಣಿ ಎಂಬುದು ಆಕೆಗೇ ಗೊತ್ತಿರಲಿಲ್ಲ. ಮಗುವಿಗೆ ಜನ್ಮ ನೀಡಿದಾಗಲೇ ಆಕೆಗೆ ಗೊತ್ತಾಗಿದ್ದು ಎಂದರೆ ನೀವು ನಂಬಲೇಬೇಕು. ವಿಚಿತ್ರವಾದರೂ ಸತ್ಯ ಘಟನೆಯೊಂದು ಇಂಗ್ಲೆಂಡಿನಲ್ಲಿ ನಡೆದಿದೆ. ಹೊಟ್ಟೆ ನೋವೆಂದು ಟಾಯ್ಲೆಟ್‌ಗೆ ಹೋದ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅದು ಕನಸೋ ನನಸೋ ಎಂಬುದು ಆರಂಭದಲ್ಲಿ ಆಕೆಗೆ ಅರ್ಥವೇ ಆಗಲಿಲ್ಲವಂತೆ. 

20 year old student give birth to baby boy in toilet she never knew she was pregnant
Author
Bengaluru, First Published Jun 28, 2022, 12:27 PM IST

ಇಂಗ್ಲೆಂಡಿನ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿನಿ ಹೊಟ್ಟೆ ನೋವೆಂದು ಟಾಯ್ಲೆಟ್‌ಗೆ ಹೋಗಿದ್ದಳು. ಆದರೆ ನಂತರ ಆಗಿದ್ದೇ ಬೇರೆ. ಆಕೆ ಅಲ್ಲೇ ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿಯ ಹೆಸರು ಜೆಸ್‌ ಡೇವಿಸ್‌ (20). ವಿಚಿತ್ರವೆಂದರೆ ಮಗುವಿಗೆ ಜನ್ಮ ನೀಡುವವರೆಗೂ ಆಕೆ ಗರ್ಭಿಣಿ ಎಂಬುದು ಆಕೆಗೆ ತಿಳಿದೇ ಇರಲಿಲ್ಲವಂತೆ. ಋತುಚಕ್ರದ ಕಾರಣ ಹೊಟ್ಟೆ ನೋವು ಬಂದಿರಬಹುದು ಎಂದುಕೊಂಡಿದ್ದಳಂತೆ. ಆದರೆ ರಾತ್ರಿ ಟಾಯ್ಲೆಟ್‌ಗೆ ಹೋದವಳಿಗೆ ಶಾಕ್‌ ಕಾದಿತ್ತು, ಆಕೆ ಮಗುವಿಗೆ ಜನ್ಮ ನೀಡಿದ್ದಳು. 

ಬ್ರಿಸ್ಟೊಲ್‌ನ ಸೌಥ್‌ ಆಂಪ್ಟನ್‌ ವಿಶ್ವವಿದ್ಯಾಲಯದಲ್ಲಿ ಜೆಸ್‌ ಡೇವಿಸ್‌ ಇತಿಹಾಸ ಮತ್ತು ರಾಜಕೀಯವನ್ನು ಓದುತ್ತಿದ್ದಾಳೆ. ಆಕೆಗೆ ಗರ್ಭಿಣಿಯ ಯಾವ ಲಕ್ಷಣಗಳೂ ಇರಲಿಲ್ಲ ಮತ್ತು ಹೊಟ್ಟೆ ಕೂಡ ಬಂದಿರಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜತೆಗೆ ಹಲವು ವರ್ಷಗಳಿಂದ ಆಕೆಯ ಋತುಚಕ್ರ ಕೂಡ ಸರಿಯಾಗಿರಲಿಲ್ಲ, ಆಗಾಗ ಮುಟ್ಟಾಗುವುದು ಕೆಲವೊಮ್ಮೆ ತಿಂಗಳುಗಟ್ಟಲೆ ಆಗುತ್ತಲೇ ಇರಲಿಲ್ಲ. ಇದೇ ಕಾರಣಕ್ಕಾಗಿ ಆಕೆಗೆ ಗರ್ಭಿಣಿಯ ಲಕ್ಷಣವೆಂದು ಅನಿಸಲಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ: Weird Marriage: ಮದುಮಗನ್ನಲ್ಲ, ಅವನ ತಂಗಿಯನ್ನ ಮದುವೆ ಆಗ್ತಾಳೆ ಮದುಮಗಳು

ಇದೇ ಜೂನ್‌ 11ರಂದು ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಗರ್ಭಿಣಿಯಂತೆ ಹೊಟ್ಟೆಯೇ ಬರದಿದ್ದರೂ ಮಗು ಮೂರು ಕೆಜಿ ತೂಕವಿತ್ತು ಎನ್ನಲಾಗಿದೆ. "ನನ್ನ ಮಗ ಹುಟ್ಟಿದ್ದು ನನ್ನ ಬದುಕಿನಲ್ಲೇ ಅತಿದೊಡ್ಡ ಶಾಕ್‌. ನಾನು ಕನಸು ಕಾಣುತ್ತಿದ್ದೇನೆ ಅಂದುಕೊಂಡಿದ್ದೆ," ಎನ್ನುತ್ತಾಳೆ ಜೆಸ್‌ ಡೇವಿಸ್‌. ಆರಂಭದಲ್ಲಿ ನನಗೆ ಈ ಆಘಾತವನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ. ಆದರೆ ನಿಧಾನವಾಗಿ ನಾನು ಒಗ್ಗಿಕೊಂಡಿದ್ಧೇನೆ. ನನ್ನ ಮಗನ ಜತೆ ನನ್ನ ಬಾಂಧವ್ಯ ಬೆಳೆಸಿಕೊಂಡಿದ್ದೇನೆ. ಈಗ ನನಗೆ ಹೇಳಿಕೊಳ್ಳಲಾಗದಷ್ಟು ಸಂತಸವಾಗುತ್ತಿದೆ ಎನ್ನುತ್ತಾಳೆ ಡೇವಿಸ್‌. 

ಇಂಗ್ಲೆಂಡಿನ ಮಾಧ್ಯಮ ಸಂಸ್ಥೆಯೊಂದರ ಜತೆ ಮಾತನಾಡಿರುವ ಡೇವಿಸ್‌ "ಜೂನ್‌ ತಿಂಗಳ ಆರಂಭದಿಂದಲೇ ನನಗೆ ಅತೀವ ಹೊಟ್ಟೆ ನೋವು ಶುರುವಾಗಿತ್ತು. ಕೂರುವುದಕ್ಕೆ, ಏಳುವುದಕ್ಕೆ ತುಂಬಾ ಸಮಸ್ಯೆಯಾಗಿತ್ತು. ಆದರೆ ನಾನು ಋತುಚಕ್ರದ ಕಾರಣದಿಂದ ಹೀಗಾಗುತ್ತಿದೆ ಎಂದುಕೊಂಡಿದ್ದೆ. ನಾನು ಗರ್ಭಿಣಿಯಾಗಿದ್ದೇನೆ ಎಂಬ ಸುಳಿವೂ ನನಗಿರಲಿಲ್ಲ," ಎಂದು ಹೇಳಿದ್ದಾಳೆ. 
ಇನ್ನೊಂದು ವಿಷಯವೆಂದರೆ, ಡೇವಿಸ್‌ ಹುಟ್ಟುಹಬ್ಬದ ಹಿಂದಿನ ದಿನವೇ ಮಗ ಹುಟ್ಟಿದ್ದಾನೆ. ಜೂನ್‌ 11ರಂದು ರಾತ್ರಿ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆಗಾಗಿ ಜನರೆಲ್ಲರೂ ಸೇರಿದ್ದರು.

ಇದನ್ನೂ ಓದಿ: ಮದುವೆಯಾದ್ಮೇಲೆ ಗೊತ್ತಾಯ್ತು ಹೆಂಡತಿಯ ಮಾಜಿ ಬಾಯ್‌ಫ್ರೆಂಡ್‌ ಜತೆ ಲೈಂಗಿಕ ಸಂಬಂಧ

ಡೇವಿಸ್‌ಗೆ ಹೊಟ್ಟೆ ನೋವು, ಸುಸ್ತು ಇದ್ದ ಕಾರಣ ಸ್ನಾನ ಮಾಡಿದರೆ ಸ್ವಲ್ಪ ಹಿತ ಅನಿಸಬಹುದು ಎಂದು ಬಾತ್‌ರೂಮ್‌ಗೆ ಹೋಗಿದ್ದಾಳೆ. ಆದರೆ ನೋವು ಕಡಿಮೆಯಾಗುವ ಮೊದಲು ವಿಪರೀತವಾಗಿದೆ. ನಂತರ ಸ್ನಾನದ ಕೋಣೆಯಲ್ಲೇ ಮಗು ಜನಿಸಿದೆ. "ಸ್ನಾನ ಮಾಡಿದರೆ ಮೈಗೆ ಹಿತ ಅನಿಸಬಹುದು ಎಂದು ಸ್ನಾನಕ್ಕೆ ಹೋದೆ. ಹೊಟ್ಟೆ ನೋವು ವಿಪರೀತವಾಯಿತು, ನಂತರ ಮಗುವಿನ ಅಳು ಕೇಳಿಸಿದಾಗ ನನಗೆ ನಂಬಲು ಸಾಧ್ಯವೇ ಆಗಲಿಲ್ಲ," ಎನ್ನುತ್ತಾಳೆ ಡೇವಿಸ್‌. 

"ಹೊಟ್ಟೆಯ ನೋವು ಹೆಚ್ಚಾಗಿದ್ದರಿಂದ ಟಾಯ್ಲೆಟ್‌ನಲ್ಲಿ ಕುಳಿತು ಪುಶ್‌ ಮಾಡಿದೆ. ಖಾಸಗಿ ಭಾಗ ಹರಿದ ರೀತಿ ಭಾಸವಾಯಿತು, ಆದರೆ ಏನು ಎಂಬುದು ತಿಳಿಯಲಿಲ್ಲ. ನಂತರ ಮಗುವಿನ ಅಳು ಕೇಳಿದ ನಂತರ ನಾನು ದಂಗಾಗಿಹೋದೆ. ಕನಸೋ ನನಸೋ ಎಂಬುದೇ ನನಗೆ ತಿಳಿಯಲಿಲ್ಲ," ಎನ್ನುತ್ತಾಳೆ ಡೇವಿಸ್‌. ಅದಾದ ನಂತರ ಏನು ಮಾಡಬೇಕೆಂದು ತಿಳಿಯದ ಡೇವಿಸ್‌, ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿದಳು. ಅಲ್ಲಿಯವರೆಗೂ ಹುಟ್ಟುಹಬ್ಬ ಆಚರಣೆಗೆ ಜನ ಬಂದಿರಲಿಲ್ಲ. ಆಕೆ ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡುವಂತೆ ಹೇಳಿದ್ದಾಳೆ. ನಂತರ ಆಸ್ಪತ್ರೆ ತಲುಪಿ ಸ್ನೇಹಿತರಿಗೆ ಮಗುವಿನ ಚಿತ್ರ ಡೇವಿಸ್‌ ಕಳಿಸಿದ್ದಾಳೆ. 

ಇದನ್ನೂ ಓದಿ: ಶಾಲೆಯ ಪ್ರಿನ್ಸಿಪಲ್‌, ಟೀಚರ್‌, ಸೂಪರ್‌ವೈಸರ್‌ ಮತ್ತು ವಿದ್ಯಾರ್ಥಿನಿ ಎಲ್ಲರಿಗೂ ಒಬ್ಬನೇ ಗಂಡ!

ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇರಿಸಿದ್ದಾರೆ. ಮಗು 35 ವಾರಗಳಿಗೇ ಜನಿಸಿದೆ. ಆದರೆ ಈಗ ತಾಯಿ ಮತ್ತು ಮಗು ಇಬ್ಬರ ಆರೋಗ್ಯದಲ್ಲೂ ಚೇತರಿಕೆ ಕಂಡಿದೆ. 

Follow Us:
Download App:
  • android
  • ios