700 ಕಾರುಗಳು, 58 ವಿಮಾನಗಳು, 20 ಅರಮನೆಗಳು ಮತ್ತು $200 ಬಿಲಿಯನ್ ಆಸ್ತಿಯನ್ನು ಹೊಂದಿರುವ ವಿಶ್ವದ ಶ್ರೀಮಂತ ರಾಜಕಾರಣಿ ಯಾರೆಂದು ತಿಳಿಯಿರಿ. ಈ ಲೇಖನವು ಅವರ ಅಗಾಧ ಸಂಪತ್ತು ಮತ್ತು ಐಷಾರಾಮಿ ಜೀವನಶೈಲಿಯನ್ನು ಬಹಿರಂಗಪಡಿಸುತ್ತದೆ.

ನವದೆಹಲಿ: ಟೆಸ್ಲಾ ಕಂಪನಿ, ಎಕ್ಸ್ ಪ್ಲಾಟ್‌ಫಾರಂ ಮಾಲೀಕ ಎಲಾನ್ ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ರಾಜಕೀಯ ನಾಯಕರೊಬ್ಬರು ಎಲಾನ್ ಮಸ್ಕ್ ಆಸ್ತಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದ್ದಾರೆ. ಈ ರಾಜಕೀಯ ನಾಯಕ ವಿಶ್ವದ ಶ್ರೀಮಂತ ರಾಜಕಾರಣಿ ಎಂದು ಕರೆಸಿಕೊಳ್ಳುತ್ತಾರೆ. ಈ ರಾಜಕೀಯ ನಾಯಕನ ಬಳಿ 700 ಕಾರ್, 58 ವಿಮಾನ, 20 ಅರಮನೆ , 200 ಬಿಲಿಯನ್ ಡಾಲರ್ ಆಸ್ತಿ ಇದೆ ಎಂದು ವರದಿಯಾಗಿದೆ. ವಾರ್ಷಿಕವಾಗಿ 1 ಕೋಟಿ ರೂ.ಗಳಿಗೂ ಅಧಿಕ ಸಂಬಳ ಪಡೆಯುತ್ತಿದ್ದಾರೆ. ಸಂಬಳ ಸೇರಿದಂತೆ ವಿವಿಧ ಮೂಲಗಳಿಂದಲೂ ನಿರಂತರ ಆದಾಯವನ್ನು ಪಡೆಯುತ್ತಿದ್ದಾರೆ. ಯಾರು ಈ ಶ್ರೀಮಂತ ರಾಜಕೀಯ ಮುಖಂಡ ಎಂಬುದನ್ನು ಈ ಲೇಖನದಲ್ಲಿ ನೋಡೋಣ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅತ್ಯಂತ ಶ್ರೀಮಂತ ನಾಯಕನ ಹೆಸರು ವ್ಲಾಡಿಮಿರ್ ಪುಟಿನ್. ರಷ್ಯಾ ಅಧ್ಯಕ್ಷರಾಗಿರವ ವ್ಲಾಡಿಮಿರ್ ಪುಟಿನ್ ಶ್ರೀಮಂತ ರಾಜಕೀಯ ಮುಖಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟು ಮಾತ್ರವಲ್ಲ ವ್ಲಾಡಿಮಿರ್ ಪುಟಿನ್ ವಿಶ್ವದ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ. ರಷ್ಯಾದ ಅಧ್ಯಕ್ಷರಾಗಿರುವ ಪುಟಿನ್ ವಾರ್ಷಿಕ 1,40,000 ಡಾಲರ್ (ಸುಮಾರು 1.17 ಕೋಟಿ ರೂಪಾಯಿ) ಸಂಬಳ ಪಡೆಯುತ್ತಾರೆ. 

ಇವರೆಲ್ಲರಿಗಿಂತಲೂ ಶ್ರೀಮಂತ
2007ರಲ್ಲಿ ಯುಎಸ್ ಸೆನೆಟ್ ಜ್ಯುಡಿಷಿಯಲ್‌ಗೆ ಸಲ್ಲಿಸಿದ ವರದಿ ಪ್ರಕಾರ, ವ್ಲಾಡಿಮಿರ್ ಪುಟಿನ್ 200 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡುವ ಫೋರ್ಬ್ಸ್‌ಗೂ ವ್ಲಾಡಿಮಿರ್ ಪುಟಿನ್ ಆಸ್ತಿಯ ಪರಿಶೀಲನೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪುಟಿನ್ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಕೆಲ ವರದಿಗಳ ಪ್ರಕಾರ, ಅಮೆಜಾನ್ ಸ್ಥಾಪಕ ಬೆಜೊಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಮತ್ತು ಫ್ರಾನ್ಸ್ ಶ್ರೀಮಂತ ವ್ಯಕ್ತಿಯಾಗಿರುವ ಬರ್ನಾಲ್ಡ್ ಅರ್ನಾಲ್ಡ್ ಅವರಿಗಿಂತಲೂ ವ್ಲಾಡಿಮಿರ್ ಪುಟಿನ್ ಶ್ರೀಮಂತ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ: ಅಂಬಾನಿ ಮತ್ತು ಅದಾನಿ ಬ್ಲೂಮ್‌ಬರ್ಗ್‌ನ 100 ಬಿಲಿಯನೇರ್ ಪಟ್ಟಿಯಿಂದ ಔಟ್! ದಿಢೀರ್ ಸಂಪತ್ತು ಕುಸಿತಕ್ಕೆ ಕಾರಣವೇನು?

900 ಕೋಟಿ ಮೌಲ್ಯದ ಬೋಟ್‌ ಹೌಸ್
ಅಮೆರಿಕಾದ ಪ್ರತಿಷ್ಠಿತ ನಿಯತಕಾಲಿಕೆ ಪತ್ರಿಕೆ "ಫಾರ್ಚೂನ್" ವರದಿ ಪ್ರಕಾರ, ವ್ಲಾಡಿಮಿರ್ ಪುಟಿನ್ ಬಳಿ 20ಕ್ಕೂ ಅಧಿಕ ಐಷಾರಾಮಿ ಅರಮನೆಗಳು, 700ಕ್ಕೂ ಹಚ್ಚು ವಿಲಾಸಿಮಯ ಕಾರ್‌ಗಳನ್ನು ಹೊಂದಿದ್ದಾರೆ. ಇಷ್ಟು ಮಾತ್ರವಲ್ಲ 900 ಕೋಟಿ ಮೌಲ್ಯದ ಬೋಟ್‌ ಹೌಸ್ ಸಹ ಪುಟಿನ್ ಬಳಿಯಲ್ಲಿದೆಯಂತೆ. 60 ಸಾವಿರದಿಂದ 5 ಲಕ್ಷ ಡಾಲರ್ ಬೆಲೆ ಬಾಳುವ ಐಷಾರಾಮಿ ವಾಚ್‌ಗಳನ್ನು ಪುಟಿನ್ ಹೊಂದಿದ್ದಾರೆ. 

 22 ಬೋಗಿಯ ಬುಲೆಟ್ ಪ್ರೂಫ್ ರೈಲು
ಬ್ಲ್ಯಾಕ್ ಸಮುದ್ರ ದಡದಲ್ಲಿ 1,90,000 ಚದರ ಅಡಿ ವಿಸ್ತಾರದ 1 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಅರಮನೆಯನ್ನು ಹೊಂದಿದ್ದಾರೆ. ಈ ಮನೆಯಲ್ಲಿ ಈಜುಕೊಳ, ಜಿಮ್, ಸಿನಿಮಾ ಹಾಲ್, ಕ್ಯಾಸಿ ನೋ ಸೇರಿದಂತೆ ಎಲ್ಲಾ ಐಷಾರಾಮಿ ಸೌಲಭ್ಯಗಳಿವೆ. ಇದರ ಜೊತೆ 22 ಬೋಗಿಯ ಬುಲೆಟ್ ಪ್ರೂಫ್ ರೈಲು ಹೊಂದಿದ್ದಾರೆ. ಇದನ್ನು ಘೋಸ್ಟ್ ರೈಲು ಅಂತಾನೂ ಕರೆಯಲಾಗುತ್ತದೆ. ಅರಮನೆಯಲ್ಲಿ ಬಂಕರ್‌ಗಳನ್ನು ಸಹ ನಿರ್ಮಾಣ ಮಾಡಲಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಕರ್ನಾಟಕದ ಟಾಪ್ 5 ಆಗರ್ಭ ಶ್ರೀಮಂತರು ಯಾರು ಗೊತ್ತಾ?

View post on Instagram