Asianet Suvarna News Asianet Suvarna News

6 ವರ್ಷದ ಕಂದನ ಮನೆಯ ಮುಂದೆ 20,000 ಬೈಕರ್ಸ್..!

  • ಆರು ವರ್ಷದ ಮಗುವಿನ ಮನೆಯ ಮುಂದೆ 20 ಸಾವಿರ ಬೈಕರ್ಸ್
  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗುವಿನ ಕೊನೆ ಆಸೆ ನೆರವೇರಿಸಲು ಮಾನವೀಯತೆ ಮೆರೆದ ಜನ
20 thousand bikers turned up outside 6 year old boys home to fulfill his last wish in Germany dpl
Author
Bangalore, First Published Jul 27, 2021, 10:15 AM IST | Last Updated Jul 27, 2021, 10:37 AM IST

ಬರ್ಲಿನ್(ಜು.27): ಜಗತ್ತಿನಲ್ಲಿ ಅಪರಾಧ, ಕ್ರೌರ್ಯ ಹೆಚ್ಚುತ್ತಿದ್ದರೂ ಎಷ್ಟೋ ಸಲ ಮಾನವೀಯತೆಯ ಅದ್ಧೂರಿ ಗೆಲುವಿಗೆ ಜನ ಸಾಕ್ಷಿಯಾಗುತ್ತಾರೆ. 16 ಕೋಟಿಯ ಇಂಜೆಕ್ಷನ್‌ ಒದಗಿಸಲು ಜನ ಹೇಗೆ ತಮ್ಮ ಕೈಲಾದ ನೆರವು ಕೊಟ್ಟರೋ ಹಾಗೆಯೇ ಅಂತಹ ಹಲವು ಘಟನೆ ನಮ್ಮ ಸುತ್ತಮುತ್ತ ನಡೆಯುತ್ತಿರುತ್ತದೆ.

ಇದೀಗ ಜರ್ಮನಿಯಲ್ಲಿ ನಡೆದ ಘಟನೆ ಮನಮಿಡಿಯುವಂತಿದೆ. 6 ವರ್ಷದ ಕಂದನ ಕೊನೆ ಆಸೆ ನೆರವೇರಿಸಲು 20 ಸಾವಿರ ಜನ ಒಟ್ಟಾಗಿದ್ದಾರೆ. ಅದೂ ಏಕಕಾಲಕ್ಕೆ. ಇದೊಂದು ಅಧ್ಭುತ ಕ್ಷಣವಾಗಿತ್ತು.

ಜರ್ಮನಿಯಲ್ಲಿ 20 ಸಾವಿರ ಬೈಕರ್‌ಗಳು ಒಂದೇ ದಿನ ಒಂದೇ ಕಡೆಗೆ ಬೈಕ್ ಓಡಿಸಿದ್ದರು. ಇವರೆಲ್ಲ ಹೊರಟಿದ್ದು ಬೇರೆ ಬೇರೆ ಕಡೆಯಿಂದಾದರೂ ಎಲ್ಲರೂ ತಲುಪಬೇಕಿದ್ದ ಗಮ್ಯ ಒಂದೇ ಆಗಿತ್ತು. ಆ ಪಯಣಕ್ಕೆ ಮಹತ್ವದ ಒಂದು ಉದ್ದೇಶವೂ ಇತ್ತು. ಅವರ ಯಾವುದೇ ರೈಡ್‌ಗಿಂತ ಆ ದಿನದ ಬೈಕ್ ರೈಡ್ ವಿಶೇಷವಾಗಿತ್ತು. ಎಂದಿಗೂ ಮರೆಯಲಾಗದಿರುವಂತದ್ದಾಗಿತ್ತು.

ಮುಳುಗಡೆಯಾಗಿದ್ದ ಭೂಪ್ರದೇಶ ನೀರಿಂದ ಎದ್ದು ಬಂತು..! ಏನೀ ವಿಸ್ಮಯ ?

20,000 ಬೈಕರ್‌ಗಳು ಉತ್ತರ ಜರ್ಮನಿಯಲ್ಲಿ ಟರ್ಮಿನಲ್ ಕ್ಯಾನ್ಸರ್ ಹೊಂದಿರುವ 6 ವರ್ಷದ ಮಗುವಿನ ಮನೆಗೆ ರೈಡ್ ಮಾಡಿದ್ದಾರೆ. ಬೈಕ್‌ ಸವಾರರು ತಮ್ಮ ಮನೆಯ ಹಿಂದೆ ರೈಡ್ ಮಾಡುವುದನ್ನು ನೋಡಬೇಕೆಂಬುದು ಆ ಕಂದ ಕೊನೆಯ ಆಸೆಯಾಗಿತ್ತು.

ಮಗುವಿನ ಆಸೆ ನೆರವೇರಿಸಲು ಕುಟುಂಬದ ಸ್ನೇಹಿತರು 30 ಬೈಕ್‌ಗಳನ್ನು ಹುಡುಕುವ ಪ್ರಯತ್ನದಲ್ಲಿ ಅದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಮಾನವೀಯತೆಯ ಶಕ್ತಿ ದೊಡ್ಡದಲ್ಲವೇ... 30 ಬೈಕ್ ಕೇಳಿದ್ದಲ್ಲಿ 20 ಸಾವಿರ ಬೈಕ್ ಜಮಾಯಿಸಿತ್ತು. ಕುಟುಂಬದ ಆನ್‌ಲೈನ್ ಪೋಸ್ಟ್ ವ್ಯಾಪಕವಾಗಿ ಶೇರ್ ಮಾಡಲ್ಪಟ್ಟಿತ್ತು. ಜರ್ಮನಿ ಮತ್ತು ಇತರ ದೇಶಗಳಿಂದ ಬಂದವರು ಇದ್ದರು. ಅಲ್ಲಿ ಯಾವ ಬೇಧವೂ ಇರಲಿಲ್ಲ. ಅಷ್ಟೂ ರೈಡರ್‌ಗಳ ಮನಸಿನಲ್ಲಿದ್ದದ್ದು 6 ವರ್ಷದ ಪುಟ್ಟ ಕಂದನ ಮುಖ, ಆ ಮಗುವಿನ ಮನಸಿನ ಕೊನೆ ಆಸೆ ಮಾತ್ರ.

Latest Videos
Follow Us:
Download App:
  • android
  • ios