ಈ ಘಟನೆಯ ಕುರಿತು ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ ಟ್ವೀಟ್ ಮಾಡಿದ್ದಾರೆ. ಅಮೆರಿಕನ್ ಏರ್‌ಲೈನ್ಸ್ ಉದ್ಯೋಗಿಯೊಬ್ಬರು ಆಕೆ ಮತ್ತು ಮತ್ತೊಬ್ಬರು ಮಹಿಳಾ ಸಹಚರ ಪ್ರಯಾಣಿಕರಾದ ಕೀನು ಸಿ. ಥಾಂಪ್ಸನ್ ಅವರನ್ನು ವಿಮಾನದ ಬೋರ್ಡಿಂಗ್‌ಗೂ ಮೊದಲು ತಮ್ಮ ಪ್ಯಾಂಟ್ ಬದಲಾಯಿಸುವಂತೆ ಒತ್ತಾಯಿಸಿದರು.

ವಾಷಿಂಗ್ಟನ್‌ (ಮೇ 4, 2023): ವಿಮಾನವನ್ನು ಹತ್ತಲು "ಯಾವುದೇ ಕವರ್ ಇಲ್ಲದೆ" ಸಾರ್ವಜನಿಕವಾಗಿ ತಮ್ಮ ಬಟ್ಟೆಗಳನ್ನು ಬದಲಾಯಿಸುವಂತೆ ಇಬ್ಬರು ಮಹಿಳಾ ಪ್ರಯಾಣಿಕರಿಗೆ ಒತ್ತಾಯಿಸಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಅಮೆರಿಕನ್ ಏರ್‌ಲೈನ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮೇ 2 ರಂದು ಲಾಸ್ ವೇಗಾಸ್‌ನ ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡಡೆದಿದೆ ಎಂದು ತಿಳಿದುಬಂದಿದೆ.

ಈ ಘಟನೆಯ ಕುರಿತು ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ ಟ್ವೀಟ್ ಮಾಡಿದ್ದಾರೆ. ಅಮೆರಿಕನ್ ಏರ್‌ಲೈನ್ಸ್ ಉದ್ಯೋಗಿಯೊಬ್ಬರು ಆಕೆ ಮತ್ತು ಮತ್ತೊಬ್ಬರು ಮಹಿಳಾ ಸಹಚರ ಪ್ರಯಾಣಿಕರಾದ ಕೀನು ಸಿ. ಥಾಂಪ್ಸನ್ ಅವರನ್ನು ವಿಮಾನದ ಬೋರ್ಡಿಂಗ್‌ಗೂ ಮೊದಲು ತಮ್ಮ ಪ್ಯಾಂಟ್ ಬದಲಾಯಿಸುವಂತೆ ಒತ್ತಾಯಿಸಿದರು. ಅವರು ಧರಿಸಿದ್ದ ಉಡುಪು ಹೆಚ್ಚು ಮಾಡರ್ನ್‌ ಆಗಿದೆ ಎಂದು ಬಟ್ಟೆ ಬದಲಾಯಿಸುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರು ಮೊದಲು ಧರಿಸಿದ್ದ ಬಟ್ಟೆಗಳಿಗಿಂತ ನಂತರ ಧರಿಸಿರುವ ಉಡುಪು ಹೆಚ್ಚು ಬಹಿರಂಗವಾಗಿದೆ ಎಂದು ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ ಹೇಳಿದ್ದಾರೆ. 

ಇದನ್ನು ಓದಿ: ಮೇ 9 ರವರೆಗೆ Go First ವಿಮಾನಗಳು ಕ್ಯಾನ್ಸಲ್; ಪ್ರಯಾಣಿಕರಿಗೆ ಸಕಾಲಕ್ಕೆ ರೀಫಂಡ್‌ ಮಾಡಲು ಡಿಜಿಸಿಎ ಸೂಚನೆ

ಇನ್ನು, ಆ ಮಹಿಳೆ ತಾವು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಧರಿಸಿದ್ದ ಬಟ್ಟೆಯ ಫೋಟೋವನ್ನು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಈ ಫೋಟೋ ಜತೆಗೆ ಬೋರ್ಡಿಂಗ್‌ಗೆ ಮೊದಲು ಬದಲಾಯಿಸಲು ಹೇಳಲಾಗಿದೆ ಎಂಬ ಉಡುಪಿನ ಫೋಟೋವನ್ನೂ ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ ಪೋಸ್ಟ್‌ ಮಾಡಿದ್ದಾರೆ. ಈ ಇಬ್ಬರ ಮೊದಲಿನ ಬಟ್ಟೆಗಳು ಮ್ಯಾಕ್ಸಿ ಸ್ಕರ್ಟ್ ಮತ್ತು ಪ್ಯಾಂಟ್ ಅನ್ನು ಒಳಗೊಂಡಿವೆ ಎಂದು ಫೋಟೋ ತೋರಿಸುತ್ತದೆ. 

Scroll to load tweet…

ಆದರೆ ವಿಮಾನವನ್ನು ಹತ್ತಲು ಅನುಮತಿಸುವ ಮೊದಲು ಅವರು ಅಂತಿಮವಾಗಿ ಶಾರ್ಟ್ಸ್ ಬಟ್ಟೆ ಧರಿಸಬೇಕಾಯಿತು ಹಾಗೂ ಅಲ್ಲೇ ಬದಲಾಯಿಸಬೇಕಾಯಿತು. "ಅಕ್ಷರಶಃ ಯಾವುದೇ ಹೊದಿಕೆಯಿಲ್ಲದೆ ಗೇಟ್‌ನಲ್ಲಿ ಬಟ್ಟೆ ಬದಲಿಸಬೇಕಾಯಿತು" ಎಂದು ಆಕೆ ಹೇಳಿಕೊಂಡಿದ್ದು ಅದು ತನಗೆ ಅವಮಾನಕರವಾಗಿತ್ತು ಎಂದೂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. . 
ಇನ್ನು, ಅಮೆರಿಕನ್ ಏರ್‌ಲೈನ್ಸ್‌ನ ಸಾಮಾಜಿಕ ಮಾಧ್ಯಮ ಖಾತೆಯು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು ಹೆಚ್ಚಿನ ವಿವರಗಳನ್ನು ಕಳುಹಿಸಲು ಕ್ರಿಸ್ಸಿ ಮೇಯ್ರ್‌ಗೆ ಕೇಳಿದೆ. "ನಿಮ್ಮ ಕಾಮೆಂಟ್‌ಗಳು ನಮಗೆ ಸಂಬಂಧಿಸಿವೆ. ದಯವಿಟ್ಟು DM ಮೂಲಕ ನಮ್ಮ ಜತೆ ಜಾಯಿನ್‌ ಆಗಿ, ನಾವು ಇಲ್ಲಿದ್ದೇವೆ ಮತ್ತು ನಿಮ್ಮ ತೊಂದರೆ ಕೇಳಲು ಸಿದ್ಧರಾಗಿದ್ದೇವೆ" ಎಂದು ಏರ್‌ಲೈನ್ ಹೇಳಿದೆ. ಬಳಿಕ ಉತ್ತರಿಸಿದ ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ "ಇದು ನಿಜವಾಗಿಯೂ ಅವಮಾನಕರವಾಗಿದೆ ಮತ್ತು ನಾನು ನಿಮಗೆ ತುಂಬಾ ನಿಷ್ಠನಾಗಿದ್ದೇನೆ, ನನ್ನ ಬಳಿ ಕ್ರೆಡಿಟ್ ಕಾರ್ಡ್ ಮತ್ತು ಎಲ್ಲವೂ ಇದೆ" ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಸೂಡಾನ್‌ನಲ್ಲಿ ವಾಯುಪಡೆ ರಾತ್ರಿ ಸಾಹಸ: ವಿಮಾನ ಇಳಿಯಲೂ ಕಷ್ಟವಾದ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಿ 121 ಜನರ ರಕ್ಷಣೆ

ಇನ್ನು, ಮಹಿಳಾ ಪ್ರಯಾಣಿಕರು ವಿಮಾನ ಹತ್ತುವ ಮುನ್ನ ತಮ್ಮ ಬಟ್ಟೆಗಳನ್ನು ಬದಲಾಯಿಸುವಂತೆ ಹೇಳಿರುವುದು ಇದೇ ಮೊದಲಲ್ಲ. ಮೇ 2022 ರಲ್ಲಿ, ವಿಮಾನ ಹತ್ತಲು ತಯಾರಿ ನಡೆಸುವಾಗ ಅಲಾಸ್ಕಾ ಏರ್‌ಲೈನ್ಸ್ ಸಿಬ್ಬಂದಿ ತನಗೆ ಮರೆಮಾಚುವ ಉಡುಪು ಧರಿಸಲು ಹೇಳಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದರು. ಹಾಗೆ. ಅದೇ ವರ್ಷದ ಜನವರಿಯಲ್ಲಿ, ಮಾಜಿ ವಿಶ್ವ ಸುಂದರಿ ಒಲಿವಿಯಾ ಕಲ್ಪೋಗೆ ಅಮೆರಿಕನ್ ಏರ್‌ಲೈನ್ಸ್ ಸಿಬ್ಬಂದಿ ಮರೆಮಾಚುವ ಉಡುಪು ಧರಿಸುವಂತೆ, ಇಲ್ಲದಿದ್ದರೆ ವಿಮಾನ ಹತ್ತಿಸದೆ ಬಿಟ್ಟುಹೋಗುವ ಅಪಾಯವನ್ನು ಎದುರಿಸಲು ಹೇಳಿದರು ಎಂದೂ ವರದಿಯಾಗಿತ್ತು.

ಈ ಘಟನೆಗಳು ಮಹಿಳಾ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಗಳು ನಡೆಸಿಕೊಳ್ಳುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಈ ಘಟನೆಯ ಕುರಿತು ಅಮೆರಿಕನ್ ಏರ್‌ಲೈನ್ಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಗಗನಸಖಿಯರ ಜತೆ ಪೋರ್ಚುಗಲ್‌ನಿಂದ ಐರ್ಲೆಂಡ್‌ಗೆ ವಿಮಾನದಲ್ಲಿ ಏಕಾಂಗಿಯಾಗಿ ಪಯಣಿಸಿದ ವಿಐಪಿ ಗೆಸ್ಟ್‌..!