Asianet Suvarna News Asianet Suvarna News

Kabul Blast: ರಾಯಭಾರ ಕಚೇರಿಯ ಹೊರಗೆ ಸ್ಫೋಟ; ರಷ್ಯಾದ ಇಬ್ಬರು ರಾಜತಾಂತ್ರಿಕರು ಸೇರಿ 20 ಮಂದಿ ಬಲಿ

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ರಷ್ಯಾ ರಾಯಭಾರಿ ಕಚೇರಿಯ ಹೊರಗೆ ಸ್ಫೋಟ ಸಂಭವಿಸಿದ್ದು, ಈ ವೇಳೆ 20 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಇನ್ನು, ಆತ್ಮಹತ್ಯಾ ಬಾಂಬರ್‌ ಅನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

2 russian diplomats among 20 killed in blast outside embassy in kabul afghanistan ash
Author
First Published Sep 5, 2022, 3:22 PM IST

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಷ್ಯಾ ದೇಶದ ರಾಯಭಾರ ಕಚೇರಿಯ (Embassy Office) ಹೊರಗೆ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ರಷ್ಯಾದ ರಾಜತಾಂತ್ರಿಕ ಅಧಿಕಾರಿಗಳು (Russian Diplomats) ಸೇರಿದಂತೆ 20 ಜನರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ರಷ್ಯಾದ ರಾಜ್ಯ-ಸಂಯೋಜಿತ ಮಾಧ್ಯಮ RT ವರದಿ ಮಾಡಿದೆ. ಕಾಬೂಲ್‌ನ  ದಾರುಲಮಾನ್ ರಸ್ತೆಯಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಪ್ರವೇಶದ್ವಾರದ ಬಳಿ ಆತ್ಮಹತ್ಯಾ ಬಾಂಬರ್ (Suicide bomber) ಸ್ಫೋಟಕಗಳನ್ನು ಸ್ಫೋಟಿಸಿದ್ದಾರೆ ಎಂದು ಅಫ್ಗಾನ್ ಪೊಲೀಸರು ಈ ಹಿಂದೆ ಹೇಳಿದ್ದರು. ಅಲ್ಲದೆ, ದಾಳಿಕೋರನು ಗೇಟ್ ಸಮೀಪಿಸುತ್ತಿದ್ದಂತೆ ಆತನನ್ನು ಶಸ್ತ್ರಸಜ್ಜಿತ ಗಾರ್ಡ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದೂ ಅಫ್ಘಾನಿಸ್ತಾನದ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. 

"ಆತ್ಮಹತ್ಯಾ ದಾಳಿಕೋರ ತನ್ನ ಗುರಿಯನ್ನು ತಲುಪುವ ಮೊದಲು ಆತನನ್ನು ಗುರುತಿಸಿ, ರಷ್ಯಾದ ರಾಯಭಾರಿ (ತಾಲಿಬಾನ್) ಗಾರ್ಡ್‌ಗಳು ಗುಂಡು ಹಾರಿಸಿದ್ದಾರೆ. ಸಾವು ನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ" ಎಂದು ದಾಳಿ ನಡೆದ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಮೌಲಾವಿ ಸಬೀರ್ ರಾಯಿಟರ್ಸ್‌ಗೆ ಮಾಹಿತಿ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ಇದನ್ನು ಓದಿ: ಆಫ್ಘಾನಿಸ್ತಾನದ ಮಸೀದಿ ಮೇಲೆ ಬಾಂಬ್ ದಾಳಿ, 30 ಸಾವು 40 ಮಂದಿಗೆ ತೀವ್ರ ಗಾಯ!

ಒಂದು ವರ್ಷದ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರವೂ ಕಾಬೂಲ್‌ನಲ್ಲಿ ರಾಯಭಾರ ಕಚೇರಿಯನ್ನು ನಡೆಸುತ್ತಿರುವ ಕೆಲವೇ ದೇಶಗಳಲ್ಲಿ ರಷ್ಯಾ ಕೂಡ ಒಂದು. ಮಾಸ್ಕೋ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಗುರುತಿಸದಿದ್ದರೂ, ಅವರು ಗ್ಯಾಸೋಲಿನ್ ಮತ್ತು ಇತರ ಸರಕುಗಳನ್ನು ಪೂರೈಸುವ ಒಪ್ಪಂದದ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಆಫ್ಘಾನ್ ಲೀಗ್ ಪಂದ್ಯದ ನಡುವೆ ಆತ್ಮಾಹುತಿ ಬಾಂಬ್ ದಾಳಿ, ಕ್ರಿಕೆಟಿಗರು ಬಂಕರ್‌ಗೆ ಶಿಫ್ಟ್!

Follow Us:
Download App:
  • android
  • ios