ಇಲ್ಲೊಬ್ಬಳು ಬ್ಯೂಟಿ ತನ್ನ ಪ್ರೀತಿಯ ಶ್ವಾನದ ಜೊತೆಗೆ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡಲ್ಲಾಸ್: ಸೌಂದರ್ಯ ಸ್ಪರ್ಧೆಯಲ್ಲಿ ಸುಂದರಿಯರು ಕಿರೀಟ ಗೆದ್ದರೆ ಜೊತೆಗೆ ತಮ್ಮ ಪೋಷಕರು ಬಹಳ ಆತ್ಮೀಯರ ಮುಂದೆ ಸೌಂದರ್ಯ ಕಿರೀಟವನ್ನು ಮುಡಿಗೇರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಬ್ಯೂಟಿ ತನ್ನ ಪ್ರೀತಿಯ ಶ್ವಾನದ ಜೊತೆಗೆ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೌಂದರ್ಯ ಸ್ಪರ್ಧೆಯ ಆಯೋಜಕರು ಆಕೆಯ ಜೊತೆ ಆಕೆಯ ಶ್ವಾನಕ್ಕೂ ಕಿರೀಟ ಅಳವಡಿಸಿ ಖುಷಿ ಪಟ್ಟರು. ಈ ಘಟನೆ ನಡೆದಿದ್ದು ಡಲ್ಲಾಸ್‌ನ ಮಿಸ್ ಡಲ್ಲಾಸ್ ಟೀನ್ 2020 ಸೌಂದರ್ಯ ಸ್ಪರ್ಧೆಯಲ್ಲಿ. 

ಈ ಸ್ಪರ್ಧೆಯಲ್ಲಿ 17 ವರ್ಷದ ಅಲಿಸನ್ ಆಪಲ್ಬಿ (Alison Appleby) ಅವರು ಸೌಂದರ್ಯ ಕಿರೀಟವನ್ನು ಮೂಡಿಗೇರಿಸಿಕೊಂಡರು. ಸ್ಪರ್ಧೆಯುದ್ದಕ್ಕೂ ಈಕೆಯ ಜೊತೆಗಿದ್ದ ಸೇವಾ ಶ್ವಾನ ಬ್ರಾಡಿ ಆಕೆ ಸೌಂದರ್ಯ ಸ್ಪರ್ಧೆ ಗೆಲ್ಲಲು ವಿಶೇಷ ಕೊಡುಗೆ ನೀಡಿತ್ತು. ಈ ಸೌಂದರ್ಯ ಸ್ಪರ್ಧೆಯ ವಿಜೇತೆ ಅಲಿಸನ್ ಅವರು ಎರಡು ವರ್ಷಗಳ ಹಿಂದೆ ಮೂರ್ಛೆ ರೋಗದಿಂದ (epilepsy) ಬಳಲುತ್ತಿದ್ದರು. ಈ ವೇಳೆ ಈ ಶ್ವಾನ ಬ್ರಾಡಿ, ಅಲಿಸನ್‌ಗೆ ಸೇವಕನಾಗಿ ಮುಂದೆ ಸಂಭವಿಸುವ ಅನಾಹುತಗಳ ಬಗ್ಗೆ ಎಚ್ಚರಿಸುತ್ತಿತ್ತು. ಅವಳಿಗೆ ಹೊತ್ತಿಗೆ ಸರಿಯಾಗಿ ಔಷಧಿ ಸೇವಿಸಲು ಸಹಾಯ ಮಾಡುತ್ತಿತ್ತು. ಇದು ಅಲಿಸನ್ ಅವರ ಮೊದಲ ಸೌಂದರ್ಯ ಸ್ಪರ್ಧೆಯಾಗಿದೆ. 

Scroll to load tweet…

ಸೌಂದರ್ಯ ಸ್ಪರ್ಧೆ ಗೆದ್ದ ಬಳಿಕ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಲಿಸನ್, ನನಗೆ ದೀರ್ಘಕಾಲದ ಅನಾರೋಗ್ಯವಿದೆ ಎಂದರೆ ನಾನು ದೀರ್ಘಕಾಲದವರೆಗೂ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಅರ್ಥವಲ್ಲ ಎಂದು ನಾನು ಬಹಳಷ್ಟು ಜನರಿಗೆ ಹೇಳಲು ಬಯಸುತ್ತೇನೆ ಎಂದು ಹೇಳಿದರು. ಈ ಸ್ಪರ್ಧೆ ಗೆದ್ದ ಬಳಿಕ ಅಲಿಸನ್ ಅವರು ಅನೇಕ ಚಾರಿಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ನಂತರ ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಲಿರುವ ಮಿಸ್ ಟೆಕ್ಸಾಸ್ ಸ್ಪರ್ಧೆಗೆ ತಯಾರಾಗಲಿದ್ದಾರೆ. ತಮ್ಮ ಈ ಗೆಲುವಿನೊಂದಿಗೆ ಅವರು ತನ್ನಂತೆ ಅಸಾಮರ್ಥ್ಯತೆ ಹೊಂದಿರುವ ಇತರರಿಗೆ ಪ್ರೇರಣೆಯಾಗಲು ಅಲಿಸನ್ ಬಯಸಿದ್ದಾರೆ. ಶ್ವಾನದ ಜೊತೆ ಅಲಿಸನ್ ಕಿರೀಟ ಮೂಡಿಗೇರಿಸಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಕಟ್ಟಡ ಕಾರ್ಮಿಕನ ಮಗಳು, 'ಮಿಸ್ ತಮಿಳುನಾಡು' ಕಿರೀಟ

ಒಬ್ಬ ಮೂರ್ಛೆ ರೋಗ ಹೊಂದಿರುವ ಮಗಳ ತಾಯಿಯಾಗಿ ಈ ವಿಡಿಯೋ ನನಗೆ ಈ ದಿನವನ್ನು ನನ್ನ ದಿನವಾಗಿಸಿತ್ತು. ಆ ಶ್ವಾನ ಜೊತೆಗಿರುವ ಕಾರಣಕ್ಕೆ ಅಲ್ಲ. ಆ ಹುಡುಗಿ ತನ್ನ ಅಸಮರ್ಥತೆಯನ್ನು ಮೀರಿ ಬಿಂದಾಸ್ ಆಗಿ ಬದುಕುತ್ತಿರುವುದಕ್ಕೆ, ಉನ್ನತವಾಗಿ ಬದುಕುವ ಮೂಲಕ ನನ್ನ ಹುಡಗಿಯರಿಗೆ ಒಂದು ಮಾದರಿಯಾಗಿರುವುದಕ್ಕೆ ಆಕೆಗೆ ಶುಭಾಶಯಗಳು ಹಾಗೂ ಧನ್ಯವಾದಗಳು. ಹಾಗೆಯೇ ಕಾರ್ಯಕ್ರಮ ಆಯೋಜಕರಿಗೆ ಅಲಿಸನ್ ಗೆದ್ದ ಸಂದರ್ಭದಲ್ಲಿ ಆಕೆಯ ಶ್ವಾನವನ್ನು ಜೊತೆ ಸೇರಿಸಿದ ಸ್ವಯಂಸೇವಕರಿಗೂ ನನ್ನ ಧನ್ಯವಾದಗಳು ಎಂದು ಮಹಿಳೆಯೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮಿಸ್‌ ವರ್ಲ್ಡ್‌, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕುಡ್ಲದ ಹುಡುಗಿಯರದ್ದೇ ಮಿಂಚು

ಶ್ವಾನಗಳು ಮನುಷ್ಯನ ಆತ್ಮೀಯ ಸ್ನೇಹಿತರು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ವಿದೇಶಗಳಲ್ಲಿ ಅನೇಕ ಶ್ವಾನಗಳು ಹಿರಿಯರಿಗೆ ಬುದ್ಧಿಮಾಂದ್ಯರಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತವೆ.