ನೈಟ್‌ಕ್ಲಬ್‌ಗೆ ತೆರಳಿದ 17 ಜನರ ನಿಗೂಢ ಸಾವು

ನೈಟ್‌ಕ್ಲಬ್‌ಗೆ ತೆರಳಿದ್ದ 18 ವರ್ಷದಿಂದ 20 ವರ್ಷದ ಸುಮಾರು 17 ಜನರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ದಕ್ಷಿಣ ಭಾಗದ ನಗರ ಈಸ್ಟ್ ಲಂಡನ್‌ನಲ್ಲಿ ಈ ಘಟನೆ ನಡೆದಿದೆ. 

17 Found Dead who went nightclub in South Africa akb

ನೈಟ್‌ಕ್ಲಬ್‌ಗೆ ತೆರಳಿದ್ದ 18 ವರ್ಷದಿಂದ 20 ವರ್ಷದ ಸುಮಾರು 17 ಜನರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ದಕ್ಷಿಣ ಭಾಗದ ನಗರ ಈಸ್ಟ್ ಲಂಡನ್‌ನಲ್ಲಿ ಈ ಘಟನೆ ನಡೆದಿದೆ. 

17 ಜನ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ನಮಗೆ ಸಿಕ್ಕಿದೆ. ಈಸ್ಟ್ ಲಂಡನ್‌ನಲ್ಲಿರುವ ಸ್ಥಳೀಯ ಸೀನರಿ ಪಾರ್ಕ್‌ನಲ್ಲಿರುವ ಹೊಟೇಲೊಂದರಲ್ಲಿ ಈ ಘಟನೆ ನಡೆದಿದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಬ್ರಿಗೇಡಿಯರ್ ಥೆಂಬಿಂಕೋಸಿ ಕಿನಾನಾ (Thembinkosi Kinana) ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಈ ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. 

ಅನ್‍ಲಾಕ್ ಆರಂಭ; ಮಾಸ್ಕ್- ಅಂತರ ಇಲ್ಲ, ಒಂದು ವರ್ಷಗಳ ಬಳಿಕ ನೈಟ್‌ಕ್ಲಬ್‌ನಲ್ಲಿ ಜನಸಾಗರ!
 

ಮೃತರೆಲ್ಲರೂ 18 ರಿಂದ 20 ವರ್ಷ ಹರೆಯದವರು ಎಂದು ತಿಳಿದು ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ  ಮೃತರ ಮೃತದೇಹಗಳ ಫೋಟೋಗಳಲ್ಲಿ ಇವರ ದೇಹಗಳಲ್ಲಿ ಯಾವುದೇ ಗಾಯಗಳು ಕಾಣಿಸಿಕೊಂಡಿಲ್ಲ. ಕ್ಲಬ್‌ನ ನೆಲದ ಮೇಲೆ ಮೃತರು ಬಿದ್ದಿರುವುದು ಕಾಣಿಸುತ್ತಿವೆ ಎಂದು ತಿಳಿದು ಬಂದಿದೆ.

ಕೋವಿಡ್‌ಗೆ ರಹದಾರಿ : ಗೋವಾದ ಸುಪ್ರಸಿದ್ಧ ಬೀಚ್‌ನಲ್ಲಿ ಜಾತ್ರೆಯಂತೆ ಸೇರಿದ ಜನ ಸಾಗರ
 

ಸುದ್ದಿ ತಿಳಿದು ನೈಟ್ ಕ್ಲಬ್ ಹೊರಗೆ ಸಾವಿರಾರು ಜನ ಸೇರಿದ್ದರು. ಅವರನೆಲ್ಲಾ ಚದುರಿಸಲು ಪೊಲೀಸರು ಹರ ಸಾಹಸ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜೋಹಾನ್ಸ್‌ಬರ್ಗ್‌ನ (Johannesburg) ದಕ್ಷಿಣಕ್ಕೆ ಸುಮಾರು 1,000 ಕಿಮೀ (620 ಮೈಲುಗಳು) ದೂರದಲ್ಲಿ ಹಿಂದೂ ಮಹಾಸಾಗರದ ಕರಾವಳಿಯಲ್ಲಿರುವ ನಗರದ ಕ್ಲಬ್‌ನಲ್ಲಿ ಈ ಅನಾಹುತ ನಡೆದಿದೆ.
 
 

Latest Videos
Follow Us:
Download App:
  • android
  • ios