Asianet Suvarna News Asianet Suvarna News

ಸ್ಪೇನ್‌ನ ರಾಯಲ್‌ ಬೇಬಿಗೆ 157 ಅಕ್ಷರ, 25 ಪದದ ಒಂದೇ ಹೆಸರು, 'ಹೆಸರು ಚಿಕ್ಕದು ಮಾಡಿ' ಅಧಿಕಾರಿಗಳ ಮನವಿ !

157-ಅಕ್ಷರ, 25-ಪದಗಳ ಹೆಸರು ಸ್ಪೇನ್‌ನ ನಿಯಮಗಳನ್ನು ಉಲ್ಲಂಘಿಸಿದೆ. ಹಾಗಾಗಿ ಮಗಳಿಗೆ ಹೊಸ ಹೆಸರನ್ನು ಆಯ್ಕೆ ಮಾಡಲು ಸ್ಪ್ಯಾನಿಷ್ ಡ್ಯೂಕ್‌ಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
 

157 Letter 25 words Spanish Duke And Duchess Asked To Shorten Daughters Name san
Author
First Published Oct 28, 2023, 5:50 PM IST

ನವದೆಹಲಿ (ಅ.28):  ಸೋಫಿಯಾ ಫೆರ್ನಾಂಡಾ ಡೊಲೊರೆಸ್ ಕಯೆಟಾನಾ ತೆರೇಸಾ ಏಂಜೆಲಾ ಡೆ ಲಾ ಕ್ರೂಜ್ ಮೈಕೆಲಾ ಡೆಲ್ ಸ್ಯಾಂಟಿಸಿಮೊ ಸ್ಯಾಕ್ರಮೆಂಟೊ ಡೆಲ್ ಪರ್ಪೆಟುವೊ ಸೊಕೊರೊ ಡೆ ಲಾ ಸ್ಯಾಂಟಿಸಿಮಾ ಟ್ರಿನಿಡಾಡ್ ವೈ ಡಿ ಟೊಡೊಸ್ ಲಾಸ್ ಸ್ಯಾಂಟೋಸ್ (Sofía Fernanda Dolores Cayetana Teresa Ángela de la Cruz Micaela del Santísimo Sacramento del Perpetuo Socorro de la Santísima Trinidad y de Todos Los Santos). ಹಾಗೇನಾದರೂ ನೀವು ಇದನ್ನು ಪೂರ್ತಿಯಾಗಿ ಓದಿದ್ದರೆ ನಿಮಗೆ ಖಂಡಿತವಾಗಿ ದೊಡ್ಡ ನಮಸ್ಕಾರ. ಇದು ಯಾವುದೇ ವಿವರಣೆಯಲ್ಲ ಬದಲಿಗೆ ಸ್ಪೇನ್‌ನ ಡ್ಯೂಕ್‌ ಹಾಗೂ ಡಚಸ್‌ ತಮ್ಮ 2ನೇ ಮಗಳಿಗೆ ಇಟ್ಟಿರುವ ಹೆಸರು..! ಹೌದು ನೀವು ಓದ್ತಿರೋದು ನಿಜ ಸ್ಪೇನ್‌ನ ರಾಜ ಹಾಗೂ ರಾಣಿ ತಮ್ಮ 2ನೇ ಮಗಳಿಗೆ ಈ ಹೆಸರನ್ನು ಇಟ್ಟಿದ್ದೇ, ಅಲ್ಲಿನ ಅಧಿಕಾರಿಗಳು ಕಂಗಾಲಾಗಿ ಹೋಗಿದ್ದಾರೆ. ಆಲ್ಬಾದ ಮೃತ ಡಚೆಸ್, ಕುಟುಂಬ ಸದಸ್ಯರು ಮತ್ತು ಧಾರ್ಮಿಕ ಭಕ್ತಿಗಳಿಗೆ ಗೌರವವಾಗಿ ಸ್ಪೇನ್‌ನ ರಾಜ ರಾಣಿ ತಮ್ಮ ಮಗಳಿಗೆ ಈ ಹೆಸರನ್ನು ಇಟ್ಟಿದ್ದರೂ ಇದನ್ನು ಈಗ ಟ್ರಿಮ್‌ ಮಾಡಲೇಬೇಕಾಗಿದೆ. ಹೆಸರನ್ನು ಆದಷ್ಟು ಚಿಕ್ಕದು ಮಾಡಿ ಎಂದು ಸ್ಪೇನ್‌ ಅಧಿಕಾರಿಗಳು ತಮ್ಮ ಡ್ಯೂಕ್‌ ಹಾಗೂ ಡಚಸ್‌ಗೆ ಮನವಿ ಮಾಡಿದ್ದಾರೆ.

ಸ್ಪೇನ್‌ನ ಅಧಿಕಾರಿಗಳು ತಮ್ಮ ಮಗಳ ಹೆಸರನ್ನು ಬದಲಾಯಿಸಲು ರಾಜ ದಂಪತಿಗಳಾದ ಡ್ಯೂಕ್ ಫರ್ನಾಂಡೋ ಫಿಟ್ಜ್-ಜೇಮ್ಸ್ ಸ್ಟುವರ್ಟ್ ಮತ್ತು ಸೋಫಿಯಾ ಪಲಾಜುವೆಲೊ ಅವರನ್ನು ಕೇಳಿದ್ದಾರೆ. ಹೆಸರು ಬಹಳ ಉದ್ದವಾಗಿದ್ದು ಭವಿಷ್ಯದದಲ್ಲಿ ಸಮಸ್ಯೆಗಳು ಎದುರಾಗುತ್ತದೆ ಎಂದು ತಿಳಿಸಿದ್ದಾರೆ. ಸ್ಪೇನ್‌ನ ರಾಯಲ್‌ ಬೇಬಿ ಹೆಸರಿನಲ್ಲಿ 157 ಅಕ್ಷರಗಳು, 25 ಪದಗಳು ಇದೆ. ಆದ್ದರಿಂದ ದೇಶದಲ್ಲಿ ಕಾನೂನುಬದ್ಧವಾಗಿ ಹೆಸರನ್ನು ನೋಂದಾಯಿಸಿಕೊಳ್ಳಲು ಹೆಸರು ಬದಲಾವಣೆಗೆ ಒಳಗಾಗಲೇಬೇಕಾಗುತ್ತದೆ.

ಹೆಸರು ಒಂದಕ್ಕಿಂತ ಹೆಚ್ಚು ಸಂಯುಕ್ತ ಮತ್ತು ಎರಡು ಸರಳ ಹೆಸರುಗಳನ್ನು ಮೀರದಿದ್ದರೆ ಮಾತ್ರ ಸ್ಪೇನ್‌ನ ಅಧಿಕಾರಿಗಳು ಸಿವಿಲ್ ರಿಜಿಸ್ಟ್ರಿಯಲ್ಲಿ ಹೆಸರನ್ನು ನೋಂದಣಿ ಮಾಡಿಕೊಳ್ಳುತ್ತಾರೆ. ಎಲ್ಲಾ ನಿಯಮಗಳನ್ನು ಮೀರಿದ ಹೆಸರುಗಳ ಸರಮಾಲೆ ಇದರಲ್ಲಿ ಸಿವಿಲ್ ರಿಜಿಸ್ಟ್ರಿಯಲ್ಲಿ ರಾಯಲ್‌ ಬೇಬಿಯ ಹೆಸರನ್ನು ನೋಂದಾಯಿಸಲು ಸಾಧ್ಯವಾಗುವುದಿಲ್ಲ" ಎಂದು ಅಧಿಕಾರಿಗಳು ಸ್ಪ್ಯಾನಿಷ್ ಪತ್ರಿಕೆ ಎಲ್ ಪೈಸ್ಗೆ ತಿಳಿಸಿದ್ದಾರೆ.

ರಾಯಲ್‌ ಬೇಬಿಯ ಮೊದಲ ಹೆಸರು ಸೋಫಿಯಾ ಅವರ ತಾಯಿ ಮತ್ತು ಅಜ್ಜಿ ಸೋಫಿಯಾ ಬರೋಸೊ ಅವರ ಹೆಸರನ್ನು ಹೊಂದಿದೆ ಎಂದು ಸ್ಪ್ಯಾನಿಷ್ ಪತ್ರಿಕೆ ವರದಿ ಮಾಡಿದೆ. ಎರಡನೆಯದು, ಫರ್ನಾಂಡಾ, ಅವಳ ತಂದೆ, ಡ್ಯೂಕ್ ಆಫ್ ಹ್ಯೂಸ್ಕರ್, ಹಾಗೆಯೇ ಅವಳ ದೊಡ್ಡಪ್ಪ, ಇರುಜೋದ ಫರ್ನಾಂಡೋ ಮಾರ್ಟಿನೆಜ್, ಸ್ಯಾನ್ ವಿಸೆಂಟೆ ಡೆಲ್ ಬಾರ್ಕೊದ ಮಾರ್ಕ್ವಿಸ್ ಅವರಿಗೆ ಗೌರವ ನೀಡುವ ಸಲುವಾಗಿ ಎಲ್ಲರ ಹೆಸರನ್ನೂ ಇದರಲ್ಲಿ ಸೇರಿಸಲಾಗಿದೆ.

ವಾರಕ್ಕೆ 70 ಗಂಟೆ ಕೆಲಸಕ್ಕೆ ಬೆಂಬಲ; ಪ್ರಧಾನಿ ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡ್ತಾರೆ ಎಂದ ಸಜ್ಜನ್‌ ಜಿಂದಾಲ್‌!

ರಾಜಮನೆತನದ ಮಗುವಿನ ಹೆಸರಿಡುವ ಕಾರ್ಯಕ್ರಮ ಈ ತಿಂಗಳ ಆರಂಭದಲ್ಲಿ ಸೆವಿಲ್ಲೆಯ ಐತಿಹಾಸಿಕ ನಗರದಲ್ಲಿ ನಡೆಯಿತು, ಆದರೂ ಆಕೆಯ ಹೆಸರು ರಿಜಿಸ್ಟ್ರಿ ನಿಯಮಗಳಿಗೆ ಹೊಂದಿಕೆಯಾಗುವುದಿಲ್ಲ. ಸ್ಪ್ಯಾನಿಷ್ ರಾಜರು ಇಂಗ್ಲೆಂಡ್‌ನ ಕಿಂಗ್ ಜೇಮ್ಸ್ II ರೊಂದಿಗೆ ಪೂರ್ವಜರ ಸಂಬಂಧವನ್ನು ಹೊಂದಿದ್ದಾರೆ. ಸ್ಪೇನ್‌ ಡ್ಯೂಕ್ ಮತ್ತು ಡಚಸ್‌ ಅವರ ಮೊದಲ ಮಗಳು, ರೊಸಾರಿಯೊ, 2021 ರಲ್ಲಿ ಜನಿಸಿದಳು. ಅವಳ ಪೂರ್ಣ ಹೆಸರು ಕೂಡ ಉದ್ದವಾಗಿತ್ತು, ರೊಸಾರಿಯೊ ಮಟಿಲ್ಡೆ ಸೋಫಿಯಾ ಕ್ಯಾಯೆಟಾನಾ ಡೊಲೊರೆಸ್ ತೆರೇಸಾ ಎಂದು ಪ್ರಾರಂಭವಾಗುತ್ತದೆ.

ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿದೆ: ಇನ್ಫೋಸಿಸ್‌ ನಾರಾಯಣ ಮೂರ್ತಿ!

Follow Us:
Download App:
  • android
  • ios