ಸಿಂಗಾಪುರ(ಜು.19): ಸಮುದ್ರದ ಆಳದಲ್ಲಿರುವ ಎಲ್ಲಾ ಜೀವಿಗಳ ಮಾಹಿತಿ ಲಭ್ಯವಿಲ್ಲ. ಕಾರಣ ಪ್ರತಿ ಬಾರಿ ಸಮುದ್ರದ ಆಳಕ್ಕೆ ಇಳಿದಾಗ ಹೊಸ ಹೊಸ ಜೀವಿಗಳು ಪತ್ತೆಯಾಗುತ್ತವೆ. ಇದೀಗ ಸಿಂಗಾಪುರದ ಪಶ್ಚಿಮ ಜಾವಾದ ಬ್ಯಾಂಟಿನ್ ಸಮುದ್ರದಲ್ಲಿ ಹೊಸ ಜೀವಿಯೊಂದು ಪತ್ತೆಯಾಗಿದೆ. ಏಡಿ ಹಾಗೂ ಜಿರಳೆ ರೂಪದಲ್ಲಿರುವ ಈ ಜೀವಿಗೆ 14 ಕಾಲುಗಳಿವೆ. 

ಆಶ್ಚರ್ಯವಾದರೂ ಆರೋಗ್ಯಕಾರಿ ಜಿರಲೆ ಹಾಲು

ಸಮುದ್ರದಿಂದ ಸಿಕ್ಕಿರುವ ಈ ಜೀವಿ ಇದೀಗ ಎಲ್ಲರ ಆಕರ್ಷಕಣೆಯಾಗಿದೆ. ಸಿಂಗಾಪುರ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಇದೀಗ ಈ ಜೀವಿ ಕುರಿತು ಅಧ್ಯಯನ ಆರಂಭಗೊಂಡಿದೆ. ಈ ಜೀವಿಗೆ ಬಥ್ನೋಮಸ್ ರ್ಯಕ್ಸಸ್ ಅನ್ನೋ ಹೆಸರಿಡಲಾಗಿದೆ. ಇದನ್ನು ಸಮುದ್ರದ ಜಿರಳೆ ಎಂದು ಕರೆದಿದ್ದಾರೆ. 

ಹೊಸ ಜೀವಿ ಕುರಿತು ಹೆಚ್ಚಿನ ಅಧ್ಯಯನ ಅಗತ್ಯವಿದೆ. ಸಮುದ್ರದಲ್ಲಿ ಮಾಲಿನ್ಯ, ತಲದಲ್ಲಿ ಶೇಖರಣೆಯಾಗಿರುವ ಪ್ಲಾಸ್ಟಿಕ್‌ನಿಂದ ಹಲವು ಜೀವಿಗಳು ಅಳಿವಿನಂಚಿಗೆ ತಲುಪಿದೆ. ಪರಿಸರ ಅಸಮತೋಲನವಾದಲ್ಲಿ ಘೋರ ಪರಿಣಾಮ ಎದುರಿಸಬೇಕಾದಿತು. ಹೀಗಾಗಿ ವಿಶೇಷ ಜೀವಿಗಳ ಕುರಿತು ಅಧ್ಯಯನ ಜೊತೆಗೆ ಸಮುದ್ರದಲ್ಲಿನ ಜೀವಿಗಳ ರಕ್ಷಣೆಗೆ ಕ್ರಮಗಳು ಅಗತ್ಯ ಎಂದು ಇಂಡೋನೇಷಿಯಾ ವಿಜ್ಞಾನ ಸಂಸ್ಥೆಯ ಕಾಯೊ ರೆಮಡಿ ಹೇಳಿದ್ದಾರೆ.