Asianet Suvarna News Asianet Suvarna News

ನೇಪಾಳದಲ್ಲಿ ಭೀಕರ ಬಸ್ ಅಪಘಾತ: 14 ಭಾರತೀಯ ಪ್ರಯಾಣಿಕರು ಸಾವು

ನೇಪಾಳದಲ್ಲಿ 40 ಭಾರತೀಯ ಪ್ರಯಾಣಿಕರಿದ್ದ ಬಸ್ಸೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 14 ಜನ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ತನಹಂ ಜಿಲ್ಲೆಯ ಮರ್ಸ್ಯಂಗ್ಡಿ ನದಿಯಲ್ಲಿ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ.

14 killed after An Indian bus with 40 passengers plunged into a river in Nepal akb
Author
First Published Aug 23, 2024, 1:20 PM IST | Last Updated Aug 23, 2024, 1:22 PM IST

ಕಠ್ಮಂಡು: ನೇಪಾಳದಲ್ಲಿ 40 ಭಾರತೀಯ ಪ್ರಯಾಣಿಕರಿದ್ದ ಬಸ್ಸೊಂದು ನದಿಗೆ ಉರುಳಿದೆ. ತನಹಂ ಜಿಲ್ಲೆಯ ಮರ್ಸ್ಯಂಗ್ಡಿ ನದಿಗೆ ಬಸ್ ಬಿದ್ದ ಪರಿಣಾಮ ಕನಿಷ್ಠ 14 ಜನ ಸಾವನ್ನಪ್ಪಿದ್ದಾರೆ ಎಂದು ನೇಪಾಳಿ ಮಾಧ್ಯಮಗಳು ವರದಿ ಮಾಡಿವೆ.  ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿದ್ದು, ಬಸ್‌ನಲ್ಲಿದ್ದವರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ. 

ನೇಪಾಳ ವಿಪತ್ತು ನಿರ್ವಹಣಾ ತರಬೇತಿ ಶಾಲೆಯ ಹಿರಿಯ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಮಾಧವ್ ಪೌದೆಲ್ ನೇತೃತ್ವದಲ್ಲಿ 45 ಜನರಿರುವ ಸಶಸ್ತ್ರ ಪೊಲೀಸ್ ಪಡೆಯ ತಂಡ ಘಟನಾ ಸ್ಥಳಕ್ಕೆ ತೆರಳಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ಬಸ್ ಉತ್ತರ ಪ್ರದೇಶ ಮೂಲದ್ದಾಗಿದ್ದು,  ಪೊಖರದಿಂದ ಕಠ್ಮಂಡುವಿಗೆ ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.   ಯುಪಿ ಎಫ್‌ಟಿ 7623 ಸಂಖ್ಯೆಯನ್ನು ಹೊಂದಿದ್ದ ಬಸ್‌ ನದಿಗೆ ಬಿದ್ದಿದ್ದು, ಈಗ ನದಿ ತೀರದಲ್ಲಿದೆ ಎಂದು ತನಹಂ ಡಿಎಸ್‌ಪಿ ದೀಪ್ಕುಮಾರ್ ರಾಯ ಹೇಳಿದ್ದಾರೆ. 

 

ಇತ್ತ ಉತ್ತರ ಪ್ರದೇಶ ಪರಿಹಾರ ಕಮೀಷನರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬಸ್‌ನಲ್ಲಿ ರಾಜ್ಯದವರು ಯಾರಾದರು ಇದ್ದಾರೆಯೇ ಎಂಬುದನ್ನು ತಿಳಿಯುವುದಕ್ಕೆ ಅಲ್ಲಿನ ಆಡಳಿತವನ್ನು ಸಂಪರ್ಕಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

 

 

Latest Videos
Follow Us:
Download App:
  • android
  • ios