ಕೊರೋನಾ ಮೂಲ ಪತ್ತೆಗೆ ಚೀನಾಕ್ಕೆ ಬಂದ ತಜ್ಞರು | ಹೊರಟ ಇಬ್ಬರಿಗೆ ಸೋಂಕು
ಬೀಜಿಂಗ್/ವುಹಾನ್(ಜ.15): ಕೊರೋನಾ ವೈರಸ್ ಇಡೀ ವಿಶ್ವವನ್ನೇ ಬಾಧಿಸುತ್ತಾ ಒಂದು ವರ್ಷ ಕಳೆದರೂ ಅದರ ಮೂಲ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಮೂಲ ಪತ್ತೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ವಿಜ್ಞಾನಿಗಳ ತಂಡ ಗುರುವಾರ ಚೀನಾದ ವುಹಾನ್‌ಗೆ ಧಾವಿಸಿದೆ.
ತಂಡದ 15 ಜನರ ಪೈಕಿ, ಇಬ್ಬರಿಗೆ ಸಿಂಗಾಪುರದಿಂದ ಹೊರಡುವ ಮೊದಲು ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 13 ತಜ್ಞರು ಮಾತ್ರವೇ ಆಗಮಿಸಿದ್ದಾರೆ. ಜೊತೆಗೆ ಕೋವಿಡ್ ನಿಯಮಗಳ ಹಿನ್ನೆಲೆಯಲ್ಲಿ ಇವರನ್ನೆಲ್ಲಾ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸುವ ಸಾಧ್ಯತೆ ಎಂದು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ವ್ಯಾಕ್ಸಿನೇಷನ್‌ಗೆ ಅನುಸರಿಸಬೇಕಾದ ನಿಯಮವೇನು? ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ!
ಕಳೆದ ವರ್ಷ ಚೀನಾದ ಕೇಂದ್ರ ನಗರ ವುಹಾನ್‌ನ ಮಾಂಸ ಮಾರುಕಟ್ಟೆಯಲ್ಲಿ ಕೊರೋನಾ ವೈರಸ್ ಮೊಟ್ಟಮೊದಲ ಬಾರಿಗೆ ಪತ್ತೆಯಾಗಿತ್ತು. ಆಗಿನಿಂದಲೂ ಮಾರ್ಕೆಟ್ ಅನ್ನು ಮುಚ್ಚಲಾಗಿದೆ.
ಚೀನಾದಲ್ಲಿ ಮೊದಲು ಕೊರೋನಾ ಕಾಣಿಸಿಕೊಂಡ ವುಹಾನ್ ಪ್ರಾಂತ್ಯಕ್ಕೇ ಈ ತಂಡ ಸಿಂಗಾಪುರದಿಂದ ನೇರವಾಗಿ ತೆರಳಲಿದೆ. ಸೋಂಕು ವಿಶ್ವವ್ಯಾಪಿಯಾದರೂ ಕೊರೋನಾ ಮೂಲವನ್ನು ಡಬ್ಲ್ಯುಎಚ್‌ಒ ಶೋಧಿಸಿಲ್ಲ. ಚೀನಾ ಪರ ನಿಲವನ್ನು ಈ ಅಂತಾರಾಷ್ಟ್ರೀಯ ಸಂಸ್ಥೆ ತಳೆದಿದೆ ಎಂಬ ಟೀಕೆಗಳು ವ್ಯಕ್ತವಾಗಿತ್ತು.
