Asianet Suvarna News Asianet Suvarna News

ಎಕ್ಸ್ ಖಾತೆಗೆ ಫೋಟೋ ಹಾಕಿ ಇದು ಬೋಲ್ಡ್ ಆಗಿದ್ಯಾ ಎಂದ ಹುಡುಗಿ…

ಸಾಮಾಜಿಕ ಜಾಲತಾಣದಲ್ಲಿ ನೀವು ಹಾಕುವ ಫೋಟೋ, ಪೋಸ್ಟ್ ಗಳಿಗೆ ಕಮೆಂಟ್ ಬರೋದು ಸಾಮಾನ್ಯ. ಚೆನ್ನಾಗಿದೆ ಎಂದಾಗ ಖುಷಿಯಾಗುತ್ತೆ. ಅದೇ ಕೆಟ್ಟ ಕಮೆಂಟ್ ಮಾಡಿದಾಗ ಬೇಸರವಾಗುತ್ತೆ. ವಾಟ್ಸ್ ಅಪ್ ಡಿಪಿಗೆ ಸಿಕ್ಕ ಕಮೆಂಟನ್ನು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾಳೆ ಈ ಹುಡುಗಿ.
 

Woman Criticized For Whatsapp Dp Comment Unprofessional roo
Author
First Published Dec 14, 2023, 2:18 PM IST

ಇದು ವಾಟ್ಸ್ ಅಪ್, ಇನ್ಸ್ಟಾ ಯುಗ. ನಮ್ಮದೊಂದು ಚೆಂದದ ಫೋಟೋ ತೆಗೆದು ನಾವು ಡಿಪಿಗೆ ಹಾಕಿಕೊಳ್ತೇವೆ. ಎಲ್ಲ ನಮ್ಮ ಡಿಪಿ ಫೋಟೋಗಳು ಬೇರೆಯವರನ್ನು ಸೆಳೆಯಬೇಕೆಂದೇನಿಲ್ಲ. ನಮಗಿಷ್ಟ ಎನ್ನುವ ಕಾರಣಕ್ಕೆ ನಾನಾ ಸ್ಟೈಲ್ ನಲ್ಲಿ ಫೋಟೋ ಹಾಕಿಕೊಳ್ಳುವವರಿದ್ದಾರೆ. ಕೆಲವರು ತಮ್ಮ ನೆಚ್ಚಿನ ಕಲಾವಿದರು, ಪ್ರಕೃತಿಯ ಫೋಟೋಗಳನ್ನು ಹಾಕಿಕೊಳ್ತಾರೆ. ನಿಮ್ಮ ಇನ್ಸ್ಟಾ ಡಿಪಿಯಲ್ಲಿ ಯಾಕೆ ಆ ಫೋಟೋ ಹಾಕಿಕೊಂಡಿದ್ದೀರಿ ಎಂದು ಪ್ರಶ್ನೆ ಮಾಡುವ ಅಧಿಕಾರ ಬೇರೆಯವರಿಗಿರೋದಿಲ್ಲ. ಇದು ತಿಳಿದಿದ್ದರೂ ಕೆಲವೊಬ್ಬರು ಇಂಥ ವಿಷ್ಯಗಳನ್ನು ತೆಗೆದು ಕಿರಿಕಿರಿಯುಂಟು ಮಾಡ್ತಾರೆ. ಅದ್ಯಾಕೆ ಆ ಫೋಟೋ, ಇದ್ಯಾಕೆ ಈ ಫೋಟೋ ಎಂದು ಪ್ರಶ್ನೆ ಮಾಡ್ತಾರೆ. ಅಪ್ಪಿತಪ್ಪಿ ಬೋಲ್ಡ್ ಫೋಟೋ ಡಿಪಿಗೆ ಹಾಕಿದ್ರೆ ಕಥೆ ಮುಗಿದಂತೆ. ಜನರಿಗೆ ತಮ್ಮ ಜೀವನದಲ್ಲಿ ಏನಾಗ್ತಿದೆ ಎನ್ನುವುದಕ್ಕಿಂತ ಬೇರೆಯವರ ಜೀವನದಲ್ಲಿ ಏನಾಗ್ತಿದೆ ಎಂಬುದನ್ನು ತಿಳಿದುಕೊಳ್ಳುವುದೇ ಮುಖ್ಯವಾಗುತ್ತದೆ. ಯಾವುದೋ ವಿಷ್ಯವನ್ನು ಇನ್ನಾವುದೋ ವಿಷ್ಯಕ್ಕೆ ಥಳುಕು ಹಾಕ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳು ಡಿಪಿ ವಿಷ್ಯಕ್ಕೆ ಚರ್ಚೆಯಲ್ಲಿದ್ದಾಳೆ. ಆಕೆ ಇನ್ಸ್ಟಾಗ್ರಾಮ್ ಗೆ ಹಾಕಿದ ಡಿಪಿ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಇದು ಬೋಲ್ಡ್ ಆಗಿದ್ಯಾ ಎಂದು ಪ್ರಶ್ನೆ ಮಾಡಿದ್ದಾಳೆ.

ಡಿಪಿ (DP) ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಹುಡುಗಿ ಹೆಸರು ಸುರಭಿ ಜೈನ್. ಒಂದು ಅಪ್ಲಿಕೇಶನ್ (Application) ಸಂಸ್ಥಾಪಕಿ. ಆಕೆ ಇನ್ಸ್ಟಾ ಫೋಟೋ (Photo ) ನೋಡಿದ ಆಕೆಯದೇ ಫೀಲ್ಡ್ ನಲ್ಲಿರುವ ವ್ಯಕ್ತಿಯೊಬ್ಬ ಸಂದೇಶ ಕಳುಹಿಸಿದ್ದಾನೆ. 

ಅಪರೂಪದ ಅಸ್ಥಿಪಂಜರ ಅಸ್ವಸ್ಥತೆಯಿಂದ ಬಳಲೋ ಕುಟುಂಬಕ್ಕೆ ಬೇಕಾಗಿದೆ ಮುಕ್ತಿ!

ಈತರಹದ ಡಿಪಿಯನ್ನು ಹಾಕ್ಬಾರದು ಎಂದಿದ್ದಾನೆ. ಅದೂ ರಾತ್ರಿ 1.30ರ ಸುಮಾರಿಗೆ ಈ ಮೆಸ್ಸೇಜ್ ಕಳುಹಿಸಿದ್ದಾನೆ. ಅದನ್ನು ನೋಡಿದ ಸುರಭಿ, ಇದರ ಅರ್ಥವೇನು? ಅದೊಂದು ಪಾಸ್ ಪೋರ್ಟ್ ಸೈಜ್ ಫೋಟೋ ಎಂದು ಹೇಳಿದ್ದಾಳೆ. ಅದಕ್ಕೆ ಉತ್ತರಿಸಿದ ವ್ಯಕ್ತಿ, ಹೇರ್ ಕಲರ್ ಸೇರಿದಂತೆ ಫೋಟೋ ವೃತ್ತಿಪರವಲ್ಲ ಎಂದಿದ್ದಾನೆ. ಆತನ ಉತ್ತರ ಕೇಳಿ ಸುರಭಿ ಅಚ್ಚರಿಗೊಳಗಾಗಿದ್ದಾಳೆ. ಇದೇ ಕಾರಣಕ್ಕೆ ತನ್ನ ಡಿಪಿ ಫೋಟೋವನ್ನು ಎಕ್ಸ್ ಖಾತೆಗೆ ಪೋಸ್ಟ್ ಮಾಡಿ, ಇದು ತುಂಬಾ ಬೋಲ್ಡ್ ಆಗಿದೆಯಾ ಎಂದು ಪ್ರಶ್ನೆ ಮಾಡಿದ್ದಾಳೆ. ಈಗಿನ ಸಂಸ್ಥಾಪಕರು ಈ ರೀತಿ ಇರಬೇಕು ಅಲ್ಲವೆ ಎಂದು ಕೇಳಿದ್ದಾಳೆ. ಯಥಾಸ್ಥಿತಿಗೆ ಸವಾಲು ಹಾಕುವುದು ಮತ್ತು ಸಾಮಾನ್ಯದಿಂದ ಮುಕ್ತವಾಗುವುದು ಮುಂದಿನ ದಾರಿ. ಇದು ಕೇವಲ ದಿಟ್ಟ ವ್ಯಾಪಾರ ನಿರ್ಧಾರಗಳನ್ನು ಮಾಡುವುದರ ಬಗ್ಗೆ ಅಲ್ಲ, ಆದರೆ ನಮ್ಮ ವೈಯಕ್ತಿಕ ಅಭಿವ್ಯಕ್ತಿಗಳಲ್ಲಿ ಆ ಧೈರ್ಯ ಮತ್ತು ಪ್ರತ್ಯೇಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸುರಭಿ ಬರೆದಿದ್ದಾರೆ.

ನನ್ನ ಕೂದಲನ್ನು ಬಣ್ಣ ಮಾಡುವುದು ಸರಳವಾದ ವೈಯಕ್ತಿಕ ಆಯ್ಕೆಯಾಗಿರಬಹುದು. ಆದರೆ ಅದು ದೊಡ್ಡದನ್ನು ಪ್ರತಿನಿಧಿಸುತ್ತದೆ. ಭಯವಿಲ್ಲದ ಮನೋಭಾವ ಮತ್ತು ಹೊಸದನ್ನು ಪ್ರಯತ್ನಿಸುವ ಇಚ್ಛೆಯನ್ನು ತೋರಿಸುತ್ತದೆ ಎಂದು ಸುರಭಿ ತಮ್ಮ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಪಾಸಿಟಿವ್ ವೈಬ್ಸ್, ಸರಳತೆ...ಮತ್ತಷ್ಟು, ಇನ್ಪೋಸಿಸ್ ಸುಧಾ ಮೂರ್ತಿ ಹೇಳೋ ಜೀವನ ಪಾಠ!

ಸುರಭಿಯ ಈ ಪೋಸ್ಟ್ ಗೆ 90.7 ಸಾವಿರಕ್ಕಿಂತಲೂ ಹೆಚ್ಚು ವೀವ್ಸ್ ಸಿಕ್ಕಿದೆ. ಅನೇಕರು ಇದ್ರ ಬಗ್ಗೆ ಕಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ರಾತ್ರಿ 1 ಗಂಟೆಗೆ ಬೇರೆಯವರ ಡಿಪಿ ಏಕೆ ನೋಡ್ತಿದ್ದ ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. ಇನ್ನೊಬ್ಬರು, ವೃತ್ತಿಪರ ಮತ್ತು ವೃತ್ತಿಪರವಲ್ಲದ ವಿಷಯಗಳ ಸಮಸ್ಯೆಯೆಂದರೆ ಜನರು ಕೆಲಸದ ಮೇಲೆ ಹೆಚ್ಚು ಗಮನಹರಿಸದೆ ಕೇವಲ ಅಡೆತಡೆಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ ಎಂದಿದ್ದಾರೆ. ಜಗತ್ತಿನಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ. ಇಂಥ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಇನ್ನೊಬ್ಬರು ಧೈರ್ಯ ಹೇಳಿದ್ದಾರೆ. ಬಣ್ಣ ಸ್ಪಷ್ಟವಾಗಿ ಕನಸು ಕಾಣಲು ಸಹಾಯ ಮಾಡುತ್ತದೆ ಅಂತಾ ಅವರಿಗೆ ಹೇಳಿ ಎಂದು ಇನ್ನೊಬ್ಬರು ಬರೆದಿದ್ದಾರೆ. 

Follow Us:
Download App:
  • android
  • ios