Asianet Suvarna News Asianet Suvarna News

ಇನ್ನು ವಾಟ್ಸಪ್‌ನಲ್ಲೂ ಲಸಿಕೆ, ಕೇಂದ್ರದ ಮಾಹಿತಿ ಸಿಗುತ್ತೆ!

ಇನ್ನು ವಾಟ್ಸಪ್‌ನಲ್ಲೂ ಲಸಿಕೆ, ಕೊರೋನಾ ಕೇಂದ್ರದ ಮಾಹಿತಿ| ಸೇವೆಯನ್ನು ಪಡೆಯಲು ಗ್ರಾಹಕರು 9013-151-515 ಸಂಖ್ಯೆಯನ್ನು ತಮ್ಮ ಮೊಬೈಲ್‌ನಲ್ಲಿ ಸೇವ್‌ ಮಾಡಿ| ಕೊರೋನಾ ಪರೀಕ್ಷಾ ಕೇಂದ್ರ, ಲಸಿಕಾ ಕೇಂದ್ರ ಸೇರಿದಂತೆ ಇನ್ನಿತರ ಉಪಯುಕ್ತ ಮಾಹಿತಿ

You can now find nearest COVID 19 vaccine center via WhatsApp Here is how pod
Author
banga, First Published May 4, 2021, 7:56 AM IST

ನವದೆಹಲಿ(ಮೇ.04): ಹತ್ತಿರದ ಕೊರೋನಾ ಪರೀಕ್ಷಾ ಕೇಂದ್ರಗಳು ಮತ್ತು ಲಸಿಕಾ ಕೇಂದ್ರಗಳ ಪತ್ತೆಗೆ ಸಹಕರಿಸುವಂತಹ ಸೇವೆಯನ್ನು ವಾಟ್ಸಾಪ್‌ ಆರಂಭಿಸಿದೆ. ಈ ಸೇವೆಯನ್ನು ಪಡೆಯಲು ಗ್ರಾಹಕರು 9013-151-515 ಸಂಖ್ಯೆಯನ್ನು ತಮ್ಮ ಮೊಬೈಲ್‌ನಲ್ಲಿ ಸೇವ್‌ ಮಾಡಿಟ್ಟುಕೊಳ್ಳಬೇಕು. ಬಳಿಕ ಈ ಮೊಬೈಲ್‌ ಸಂಖ್ಯೆಯೊಂದಿಗೆ ಚಾಟ್‌ ಮಾಡಿದ್ದಲ್ಲಿ ಕೊರೋನಾ ಪರೀಕ್ಷಾ ಕೇಂದ್ರ, ಲಸಿಕಾ ಕೇಂದ್ರ ಸೇರಿದಂತೆ ಇನ್ನಿತರ ಉಪಯುಕ್ತ ಮಾಹಿತಿಗಳು ಪರದೆ ಮೇಲೆ ತೆರೆದುಕೊಳ್ಳಲಿವೆ.

"

ಈ ಸೇವೆ ಪಡೆಯುವುದು ಹೇಗೆ?

* ಮೊದಲಿಗೆ 9013-151-515 ಸಂಖ್ಯೆಯನ್ನು ಸೇವ್‌ ಮಾಡಿಕೊಳ್ಳಿ

* ಬಳಿಕ ಈ ಸಂಖ್ಯೆಗೆ namaste(ನಮಸ್ತೆ) ಎಂಬ ಸಂದೇಶ ರವಾನಿಸಿ

* ನಂತರ ಕೋವಿಡ್‌ ಹೆಲ್ಪ್‌ಡೆಸ್ಕ್‌ ತೆರೆದುಕೊಳ್ಳಲಿದೆ

* ನೀವು ಇರುವ ಪ್ರದೇಶದ ಪಿನ್‌ಕೋಡ್‌ ನಮೂದಿಸಿ

* ಆಗ ಸುತ್ತಮುತ್ತಲಿನ ಕೊರೋನಾ ಪರೀಕ್ಷಾ ಕೇಂದ್ರ, ಲಸಿಕಾ ಕೇಂದ್ರಗಳ ಮಾಹಿತಿ ತೆರೆದುಕೊಳ್ಳಲಿದೆ

* ನಿಮ್ಮ ಏರಿಯಾ ಸುತ್ತಮುತ್ತ ಕೇಂದ್ರಗಳ ಮಾಹಿತಿ ತೋರಿಸದಿದ್ದರೆ, ನಿಮಗೆ ಹತ್ತಿರದ ಏರಿಯಾ ಪಿನ್‌ಕೋಡ್‌ ಹಾಕಿ

* ಆಗ ಸುತ್ತಮುತ್ತಲಿನ ಕೊರೋನಾ ಪರೀಕ್ಷಾ ಕೇಂದ್ರಗಳು ಮತ್ತು ಲಸಿಕಾ ಕೇಂದ್ರಗಳ ಮಾಹಿತಿ ಲಭ್ಯವಾಗಲಿದೆ.

* ಕೋವಿನ್‌ ಆ್ಯಪ್‌ಗೆ ನೋಂದಣಿಯಾಗಲು ಇದು ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios