ವಾಟ್ಸಾಪ್ ಸ್ಟೇಟಸ್‌ನಲ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿ ಮಾದರಿಯಲ್ಲಿ ಬದಲಾವಣೆ ತರಲು ಮೆಟಾ ಸಜ್ಜಾಗಿದೆ.

ಕ್ಯಾಲಿಫೋರ್ನಿಯಾ (ಜ.21): ಮೆಟಾದ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ನಲ್ಲಿ ಹೊಸ ಅಪ್‌ಡೇಟ್ ಬರ್ತಿದೆ. ವಾಟ್ಸಾಪ್ ಸ್ಟೇಟಸ್ ಅಪ್‌ಡೇಟ್‌ಗಳಲ್ಲಿ ಚಿತ್ರಗಳ ಜೊತೆಗೆ ಸಂಗೀತ/ಟ್ಯೂನ್ ಸೇರಿಸಲು ಸಾಧ್ಯವಾಗುವ ಹೊಸ ವೈಶಿಷ್ಟ್ಯ ಶೀಘ್ರದಲ್ಲೇ ಬರಲಿದೆ. ಇದರ ಪರೀಕ್ಷೆಯನ್ನು ಮೆಟಾ ವಾಟ್ಸಾಪ್ ಬೀಟಾ ಆವೃತ್ತಿಯಲ್ಲಿ ಪ್ರಾರಂಭಿಸಿದೆ ಎಂದು ವಾಬೀಟಾ ಇನ್ಫೋ ವರದಿ ಮಾಡಿದೆ. 

ವಾಟ್ಸಾಪ್ ಸ್ಟೇಟಸ್ ಅಪ್‌ಡೇಟ್‌ಗಳಲ್ಲಿ ಸಂಗೀತ ಸೇರಿಸಲು ಸಾಧ್ಯವಾಗುವ ವೈಶಿಷ್ಟ್ಯ ತಯಾರಾಗುತ್ತಿದೆ. ಪ್ರಸ್ತುತ ಮೆಟಾದ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೈಶಿಷ್ಟ್ಯ ಈಗಾಗಲೇ ಇದೆ. ಇನ್‌ಸ್ಟಾಗ್ರಾಮ್ ಸ್ಟೋರಿ ಮಾದರಿಯ ಇಂಟರ್ಫೇಸ್ ಅನ್ನು ವಾಟ್ಸಾಪ್ ಸ್ಟೇಟಸ್‌ಗೂ ಮೆಟಾ ತರಲಿದೆ. ವಾಟ್ಸಾಪ್‌ನ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಆವೃತ್ತಿಗಳಲ್ಲಿ ಈ ವೈಶಿಷ್ಟ್ಯ ಲಭ್ಯವಾಗಿದೆ. ಈ ವೈಶಿಷ್ಟ್ಯ ಬಂದ ಮೇಲೆ ಸ್ಟೇಟಸ್ ಎಡಿಟರ್‌ನಲ್ಲಿ ಸ್ಟೇಟಸ್ ಜೊತೆಗೆ ಸಂಗೀತ ಸೇರಿಸಬಹುದು. ಇದಕ್ಕಾಗಿ ಮ್ಯೂಸಿಕ್ ಲೈಬ್ರರಿ ಬ್ರೌಸ್ ಮಾಡಲು ಆಯ್ಕೆ ಇರುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿರುವಂತೆಯೇ ಇರುತ್ತದೆ. ಸ್ಟೇಟಸ್‌ಗೆ ಆಯ್ಕೆ ಮಾಡುವ ಸಂಗೀತದ ಕಲಾವಿದ, ಟ್ರೆಂಡಿಂಗ್ ಹಾಡುಗಳ ಮಾಹಿತಿಯೂ ಇರುತ್ತದೆ. 

WhatsApp ನಲ್ಲಿ 4 ಹೊಸ ಫೀಚರ್‌ಗಳು ಬಂದಿವೆ ಗೊತ್ತಾ!

ಇನ್‌ಸ್ಟಾ ಸ್ಟೋರಿಯಂತೆ ಹಾಡಿನಲ್ಲಿ ನಿಮಗೆ ಇಷ್ಟವಾದ ಭಾಗವನ್ನು ಮಾತ್ರ ಆಯ್ಕೆ ಮಾಡಿ ಸ್ಟೇಟಸ್‌ನಲ್ಲಿ ಸೇರಿಸಬಹುದು. ಫೋಟೋ ಜೊತೆಗೆ ಹಾಡು ಸೇರಿಸಿದರೆ ಗರಿಷ್ಠ 15 ಸೆಕೆಂಡುಗಳಷ್ಟು ಸಮಯ ಇರುತ್ತದೆ. ವಿಡಿಯೋ ಸ್ಟೇಟಸ್‌ಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇತ್ತೀಚೆಗೆ ಹಲವು ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸುವ ಮೂಲಕ ವಾಟ್ಸಾಪ್ ಅನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ಮೆಟಾ ಪ್ರಯತ್ನಿಸುತ್ತಿದೆ. 

ವಾಟ್ಸಾಪ್ ಗ್ರೂಪ್‌ಗಳಲ್ಲಿ ಹೆಚ್ಚಾದ ಎಪಿಕೆ ಆ್ಯಪ್‌ಗಳ ಹಾವಳಿ: ಫೇಕ್ ಮೆಸೇಜ್‌ ಮೂಲಕ ವಂಚನೆ!