Whatsapp ಬಳಕೆದಾರರಿಗೆ ಮತ್ತೊಂದು ಬಂಪರ್ ಫೀಚರ್, ಕಾಲ್ ಶೆಡ್ಯೂಲ್ ಆಯ್ಕೆ ಲಭ್ಯ!

Whatsapp ಕಾಲ ಕಾಲಕ್ಕೆ ತಕ್ಕಂತೆ ಫೀಚರ್ಸ್ ಅಪ್‌ಡೇಟ್ ಮಾಡುತ್ತಲೇ ಬಂದಿದೆ. ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಲೇ ಬಂದಿದೆ. ಇದೀಗ ಬಳಕೆದಾರರಿಗೆ ಬಂಪರ್ ಫೀಚರ್ಸ್ ನೀಡಿದೆ. ಇನ್ಮುಂದೆ ವ್ಯಾಟ್ಸ್ಆ್ಯಪ್ ಮೂಲಕ ಕರೆಗಳನ್ನು ಯಾವಾಗ ಬೇಕೋ ಆ ಸಮಯಕ್ಕೆ ಶೆಡ್ಯೂಲ್ ಮಾಡಲು ಸಾಧ್ಯವಿದೆ. ಈ ಫೀಚರ್ಸ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 
 

Whatsapp Set to introduce schedule call features for meeting and other purpose soon ckm

ನವದೆಹಲಿ(ಮಾ.01): ಮೆಸೇಜಿಂಗ್ ಆ್ಯಪ್ಲಿಕೇಶನ್ ಪೈಕಿ ಭಾರತದಲ್ಲಿ ಹಾಗೂ ವಿಶ್ವದಲ್ಲಿ Whatsapp ಅತೀ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಇತ್ತ Whatsapp ಕೂಡ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಹೊಸ ಫೀಚರ್ಸ್ ನೀಡುತ್ತಾ ಬಂದಿದೆ. ಇದರ ಜೊತೆಗೆ ಉತ್ತಮ ಸೇವೆಯನ್ನೂ ನೀಡಿದೆ. ಇದೀಗ Whatsapp ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ನೂತನ ಫೀಚರ್ಸ್ ಮೂಲಕ Whatsapp ಬಳಕೆದಾರರು ಕರೆಗಳನ್ನು ಶೆಡ್ಯೂಲ್ ಮಾಡಬಹುದು. ಆಂದರೆ ಗ್ರೂಪ್ ಕರೆ ಮಾಡಲು, ಮೀಟಿಂಗ್ ಮಾಡಲು, ರಿಮೈಂಡರ್ ಇಡಬೇಕಿಲ್ಲ. ಯಾವ ಸಮಯಕ್ಕೆ ಕರೆ ಮಾಡಬೇಕು ಅನ್ನೋದನ್ನು ಶೆಡ್ಯೂಲ್ ಮಾಡಿಕೊಳ್ಳಬಹುದು. ತಕ್ಕ ಸಮಯಕ್ಕೆ ಕರೆ ಕನೆಕ್ಟ್ ಆಗಲಿದೆ. ನೂತನ ಫೀಚರ್ಸ್ ಕೋಟ್ಯಾಂತರ ಬಳಕೆದಾರರಿಗೆ ಪ್ರಯೋಜನ ನೀಡಲಿದೆ.

WABetainfo ಪ್ರಕಾರ ವ್ಯಾಟ್ಸಾಪ್ ಹೊಸ ಫೀಚರ್ಸ್ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದೆ. ಸದ್ಯ ಶೆಡ್ಯೂಲ್ ಕರೆ ಪ್ರಾಯೋಗಿಕ ಹಂತದಲ್ಲಿದೆ. ಯಶಸ್ವಿ ಪ್ರಯೋಗದ ಬಳಿಕ ಇದೀಗ Whatsapp ಬಳಕೆದಾರರಿಗೆ ಪರಿಚಯಿಸಲು ಸಜ್ಜಾಗಿದೆ. ಕಾಲ್ , ವಿಡಿಯೋ ಕಾಲ್ ಆಯ್ಕೆಗಳಿಗೂ ಶೆಡ್ಯೂಲ್ ಕರೆ ಬಳಕೆ ಮಾಡಬಹುದು. ಗ್ರೂಪ್ ಕಾಲ್, ಕೇಚೇರಿಗಳಲ್ಲಿ ಸಹದ್ಯೋಗಿಗಳ ಜೊತೆ ಮೀಟಿಂಗ್, ಪ್ರಮುಖ ಕರೆಗಳನ್ನು ಕೆಲಸದ ಒತ್ತಡದಲ್ಲಿ ಮರೆಯುವ ಸಾಧ್ಯತೆಗಳಿವೆ. ಹೀಗಾಗಿ ಕರೆಗಳನ್ನು ಯಾವ ಸಮಯಕ್ಕೆ, ಯಾವ ದಿನಾಂಕ ಮಾಡಬೇಕು ಅನ್ನೋದನ್ನು ಶೆಡ್ಯೂಲ್ ಮಾಡಬಹುದು.

ಡಿಸೆಂಬರ್‌ನಲ್ಲಿ ಭಾರತದ 36.77 ಲಕ್ಷ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್!

ಶೆಡ್ಯೂಲ್ ಮಾಡಿದ ಬೆನ್ನಲ್ಲೇ ಯಾರಿಗ ಕರೆ ಮಾಡಬೇಕು, ಯಾರನ್ನು ಶೆಡ್ಯೂಲ್ ಕರೆಯಲ್ಲಿ ಸೇರಿಸಿದ್ದೀರಿ ಅವರಿಗೂಒಂದು ನೋಟಿಫಿಕೇಶನ್ ಹೋಗಲಿದೆ. ನಿಗದಿ ಪಡಿಸಿದ ಸಮಯದಲ್ಲಿ ಕರೆ ಕನೆಕ್ಟ್ ಆಗಲಿದೆ. ಬ್ಯೂಸಿನೆಸ್ ಕಾರ್ಯದಲ್ಲಿ ತೊಡಗಿರುವವರಿಗೆ ಈ ಶೆಡ್ಯೂಲ್ ಕಾಲ್ ಹೆಚ್ಚಿನ ಪ್ರಯೋಜನ ನೀಡಲಿದೆ. ಗ್ರೂಪ್ ವಿಡಿಯೋ ಕಾಲ್ ಅಥವಾ ಕೇವಲ ಧ್ವನಿ ಮೂಲಕ ಗ್ರೂಪ್ ಕಾಲ್ ಮಾಡಲು ಕ್ಲಿಕ್ ಮಾಡಿದಾಗ, ಶೆಡ್ಯೂಲ್ ಕಾಲ್ ಆಯ್ಕೆ ತೋರಿಸಲಿದೆ. ಶೆಡ್ಯೂಲ್ ಆಯ್ಕೆ ಒತ್ತಿದರೆ, ದಿನಾಂಕ, ಸಮಯ ಸೇರಿದಂತೆ ನಿಗದಿಪಡಿಸಿದರೆ ಮುಗೀತು.

ಬೇಟಾ ಟೆಸ್ಟಿಂಗ್‌ನಲ್ಲಿ ಈ ಫೀಚರ್ಸ್ ಲಭ್ಯವಿದೆ. ಐಫೋನ್ ಬಳಕೆಗಾರರು ಆ್ಯಪಲ್ ಟೆಸ್ಟ್ ಫ್ಲೈಟ್ ಪೋಗ್ರಾಮ್ ಮೂಲಕ ಈ ಫೀಚರ್ಸ್ ಅನುಭಿಸಬಹದು. ಆದರೆ ಐಫೋನ್ ಬಳಕೆದಾರರು ತಮ್ಮ ವ್ಯಾಟ್ಸ್ಆ್ಯಪ್ ಅಪ್‌ಡೇಟ್ ಮಾಡಬೇಕಿದೆ. ಇನ್ನು ಆ್ಯಡ್ರಾಯ್ಡ್ ಫೋನ್ ಬಳಕೆದಾರರಿಗೆ ಶೀಘ್ರದಲ್ಲೇ ಈ ಫೀಚರ್ಸ್ ಲಭ್ಯವಾಗಲಿದೆ. 

ಬರೀ ಚಾಟ್ ಮಾಡಿ ಟೈಮ್ ವೇಸ್ಟ್ ಮಾಡ್ಬೇಡಿ, ವಾಟ್ಸ್ ಆ್ಯಪ್‌ನಿಂದ ಗಳಿಸಬಹುದು ಹಣ

ಶೆಡ್ಯೂಲ್ ಕಾಲ್ ಫೀಚರ್ಸ್‌ನಲ್ಲಿ, ಕೇವಲ ಕರೆ ಮಾತ್ರವಲ್ಲ, ಉದಾಹರಣೆಗೆ ನೀವು ಮೀಟಿಂಗ್ ಕಾಲ್ ಶೆಡ್ಯೂಲ್ ಮಾಡಿದರೆ, ಯಾವ ಕಾರಣಕ್ಕಾಗಿ ಈ ಕರೆ ಮಾಡುತ್ತೀದ್ದೀರಿ ಅನ್ನೋದನ್ನು ಉಲ್ಲೇಖಿಸಿದರೆ, ಯಾರನ್ನು ಶೆಡ್ಯೂಲ್ ಮಾಡಿದ್ದೀರಿ ಅವರಿಗೂ ಮಾಹಿತಿ ಸಿಗಲಿದೆ. 

ನಿಮಗೆ ನೀವೇ ಸಂದೇಶ ಕಳಿಸುವ ಫೀಚರ್
ವಾಟ್ಸಾಪ್‌ನಲ್ಲಿ ನೀವು ಇನ್ನೊಬ್ಬರಿಗೆ ಸಂದೇಶ ಕಳಿಸುವುದು ಮಾಮೂಲಿ. ಆದರೆ ನಿಮಗೆ ನೀವೇ ಇನ್ನು ಸಂದೇಶ ಕಳಿಸಿಕೊಳ್ಳಬಹುದು. ಈ ಫೀಚರ್ಸ್ ವ್ಯಾಟ್ಸಆ್ಯಪ್ ಇತ್ತೀಚೆಗೆ ಆರಂಭಿಸಿದೆ. ಇದಕ್ಕೆಂದೇ ‘ಮೆಸೇಜ್‌ ಯುವರ್‌ಸೆಲ್ಫ್’ ಆಪ್ಷನ್‌ ಅನ್ನು ವಾಟ್ಸಾಪ್‌ ಈಗ ಆರಂಭಿಸಿದೆ.ಈ ವಿಧಾನ ಬಳಸಿ ಫೋಟೋಗಳು, ವಿಡಿಯೋಗಳು, ದತ್ತಾಂಶಗಳು, ನೋಟ್ಸ್‌ಗಳು, ರಿಮೈಂಡ್‌ಗಳು, ಶಾಪಿಂಗ್‌ ಲಿಸ್ಟ್‌ ಇತ್ಯಾದಿಗಳನ್ನು ನಮಗೆ ನಾವೇ ಕಳಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಇವನ್ನು ನಾವು ಬೇಕಾದಾಗ ತೆರೆದು ನೋಡಿಕೊಳ್ಳಬಹುದು. ತನ್ನಿಂತಾನೇ ಜ್ಞಾಪಕ ಆಗದಿದ್ದರೂ ಇದರೊಳಗೆ ನಾವು ಕಳಿಸಿರುವ ಸಂದೇಶಗಳನ್ನು ನೋಡಿಕೊಂಡು ಅದರಲ್ಲಿನ ಅಂಶಗಳನ್ನು ಜ್ಞಾಪಿಸಿಕೊಳ್ಳಬಹುದಾಗಿದೆ.

Latest Videos
Follow Us:
Download App:
  • android
  • ios