ಬರೀ ಚಾಟ್ ಮಾಡಿ ಟೈಮ್ ವೇಸ್ಟ್ ಮಾಡ್ಬೇಡಿ, ವಾಟ್ಸ್ ಆ್ಯಪ್‌ನಿಂದ ಗಳಿಸಬಹುದು ಹಣ
ಇದು ಡಿಜಿಟಲ್ ಯುಗ. ಜನರು ಒಂದಲ್ಲ ನಾಲ್ಕು ಕಡೆಯಿಂದ ಹಣಗಳಿಸಲು ದಾರಿಯಿದೆ. ಮನೆಯಲ್ಲಿಯೇ ಬ್ಯುಸಿನೆಸ್ ಮಾಡೋರು, ಅಂಗಡಿಯಲ್ಲಿ ಬಗೆ ಬಗೆ ಉತ್ಪನ್ನಗಳನ್ನು ಮಾರಾಟ ಮಾಡುವವರು ಇಲ್ಲವೆ ಕರಕುಶಲ ವಸ್ತುಗಳನ್ನು ತಯಾರಿಸುವ ಮಹಿಳೆಯರು ಚಾಟಿಂಗ್ ಅಪ್ಲಿಕೇಷನ್ ವಾಟ್ಸ್ ಅಪ್ ಮೂಲಕವೂ ಹಣ ಗಳಿಸಬಹುದು.
ಯಾರ ಕೈನಲ್ಲಿ ಮೊಬೈಲ್ ಇಲ್ಲ ಈಗ ಹೇಳಿ? ಚಿಕ್ಕ ಮಕ್ಕಳಿಗೂ ಮೊಬೈಲ್ ಬಳಕೆ, ವಾಟ್ಸ್ ಅಪ್ ಅಂದ್ರೇನು? ಸ್ಟೇಟಸ್ ಅಂದ್ರೇನು ಎಂಬುದು ಗೊತ್ತು. ವಾಟ್ಸ್ ಅಪ್, ದೂರದಲ್ಲಿರುವ ಸ್ನೇಹಿತರನ್ನು ಹತ್ತಿರ ತರುವ ಕೆಲಸ ಮಾಡ್ತಿದೆ. ವಾಟ್ಸ್ ಟಪ್ ನಲ್ಲಿ ನಾವು ಸಂದೇಶಗಳನ್ನು ರವಾನೆ ಮಾಡ್ತೇವೆ. ಜೊತೆಗೆ ಫೋಟೋಗಳನ್ನು ಹಂಚಿಕೊಳ್ತೇವೆ. ವಿಡಿಯೋ ಕಾಲ್ ಮಾಡಿ ಮಾತನಾಡ್ತೇವೆ. ಆದ್ರೆ ವಾಟ್ಸ್ ಅಪ್ ಬರೀ ಇಷ್ಟಕ್ಕೆ ಸೀಮಿತವಲ್ಲ ಎಂಬುದು ನಿಮಗೆ ಗೊತ್ತಾ? ವಾಟ್ಸ್ ಅಪ್ ಮೂಲಕ ನೀವು ಹಣವನ್ನು ಕೂಡ ಗಳಿಸಬಹುದು. ನಾವಿಂದು ವಾಟ್ಸ್ ಅಪ್ ಮೂಲಕ ಹಣ ಗಳಿಸೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ.
ವಾಟ್ಸ್ ಅಪ್ (Whats Up) ಮೂಲಕ ಹಣ ಗಳಿಸೋದು ಹೇಗೆ? : ವಾಟ್ಸ್ ಅಪ್ ಮೂಲಕ ಆದಾಯ (Income) ಗಳಿಸೋದು ಬಹಳ ಸುಲಭ. ನೀವು ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ ಆದಾಯ ಪಡೆಯಬಹುದು. ಶ್ರೀಮಂತರಾಗಲು, ಖಜಾನೆ ತುಂಬಿಸಲು ಯಾವುದೇ ಶಾರ್ಟ್ ಕಟ್ ಇಲ್ಲ. ಆನ್ಲೈನ್ ಆಗಿರಲಿ ಇಲ್ಲ ಆಫ್ಲೈನ್ ಆಗಿರಲಿ ನೀವು ಕಷ್ಟಪಡದೆ ಹಣ (Money) ಸಂಪಾದನೆ ಬರಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿರಬೇಕು.
BUSINESS IDEAS : ಹೂವಿನ ವ್ಯಾಪಾರ ಶುರು ಮಾಡಿ ಹೂವಿನಂತೆಯೇ ಅರಳಬಹುದು ಜೀವನ!
ವಾಟ್ಸ್ ಅಪ್ ತನ್ನ ಇನ್ನೊಂದು ಅಪ್ಲಿಕೇಷನ್ ವಾಟ್ಸ್ ಅಪ್ ಬ್ಯುಸಿನೆಸ್ ಶುರು ಮಾಡಿದೆ. ಈ ವಾಟ್ಸ್ ಅಪ್ ಬ್ಯುಸಿನೆಸ (Business) ನ್ನು ವ್ಯಾಪಾರ ಮಾಡುವವರಿಗಾಗಿಯೇ ಡಿಸೈನ್ ಮಾಡಲಾಗಿದೆ. ಈ ಅಪ್ಲಿಕೇಷನ್ ನಲ್ಲಿ ನಿಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದು. ಇಲ್ಲವೆ ಜನರಿಗೆ ನಿಮ್ಮ ವೆಬ್ಸೈಟ್ ಬಗ್ಗೆ ಮಾಹಿತಿ ನೀಡಿ ಅವರು ವೆಬ್ಸೈಟ್ ಗೆ ಭೇಟಿ ನೀಡುವಂತೆ ನೀವು ಮಾಡಬಹುದು.
ವಾಟ್ಸ್ ಅಪ್ ಬ್ಯುಸಿನೆಸ್ ನಲ್ಲಿ ಯಾವುದನ್ನು ಮಾರಾಟ ಮಾಡಬಾರದು ? : ವಾಟ್ಸ್ ಅಪ್ ಬ್ಯುಸಿನೆಸ್ ಅಪ್ಲಿಕೇಶನ್ ನಲ್ಲಿ ನಿಮ್ಮ ಉತ್ಪನ್ನ ಮಾರಾಟ ಮಾಡಬಹುದು. ಆದ್ರೆ ನೀವು ಕಾನೂನು ಬಾಹಿರವಾದ ಯಾವುದೇ ವಸ್ತುವನ್ನು ಮಾರಾಟ ಮಾಡುವಂತಿಲ್ಲ. ಡ್ರಗ್ಸ್, ತಂಬಾಕು, ಆಲ್ಕೋಹಾಲ್, ಶಸ್ತ್ರಾಸ್ತ್ರಗಳು, ಪ್ರಾಣಿಗಳು ಮತ್ತು ವೈದ್ಯಕೀಯ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಇದು ನಿಮ್ಮನ್ನು ಸಂಕಷ್ಟಕ್ಕೆ ನೂಕಬಹುದು. ಅಲ್ಲದೆ ನಿಮ್ಮ ವಾಟ್ಸ್ ಅಪ್ ಬ್ಯುಸಿನೆಸ್ ಅಕೌಂಟ್ ಬಂದ್ ಆಗುವ ಸಾಧ್ಯತೆಯಿರುತ್ತದೆ. ಕಾನೂನು ಬದ್ಧವಾಗಿಯೇ ನೀವು ವಾಟ್ಸ್ ಅಪ್ ಮೂಲಕ ಬ್ಯುಸಿನೆಸ್ ಮಾಡಬಹುದು.
ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡೋದು ಹೇಗೆ? ಇದ್ರಿಂದ ಏನ್ ಲಾಭ?
ವಾಟ್ಸ್ ಅಪ್ ಬ್ಯುಸಿನೆಸ್ ಮೂಲಕ ಗಳಿಕೆ : ಮೊದಲನೇಯದಾಗಿ ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಪ್ಲೇ ಸ್ಟೋರ್ ನಿಂದ ವಾಟ್ಸ್ ಅಪ್ ಬ್ಯುಸಿನೆಸ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ. ನಂತ್ರ ಬ್ಯುಸಿನೆಸ್ ಪ್ರೊಫೈಲ್ ಡೌನ್ಲೋಡ್ ಮಾಡಿ. ಇದ್ರ ನಂತ್ರ ಫೋನ್ ನಂಬರ್ ಹಾಕಿ ವೆರಿಫೈ ಮಾಡಿಕೊಳ್ಳಿ. ನಂತ್ರ ಬ್ಯುಸಿನೆಸ್ ಹೆಸರನ್ನು ಎಂಟ್ರಿ ಮಾಡಿ. ಇದ್ರ ನಂತ್ರ ನೀವು ಬ್ಯುಸಿನೆಸ್ ಕೆಟಗರಿ ಆಯ್ಕೆ ಮಾಡಿ ಅದ್ರಲ್ಲಿ ಇಮೇಲ್ ಅಡ್ರೆಸ್, ವೆಬ್ಸೈಟ್ ಅಡ್ರೆಸ್ ಹಾಗೂ ಬೇರೆ ಮಾಹಿತಿಯನ್ನು ನೀಡಿ. ಕೆಲ ವಿಷ್ಯವನ್ನು ನೀವು ಕಸ್ಟಮೈಸ್ ಮಾಡಬಹುದು. ನಂತ್ರ ನಿಮ್ಮ ಖಾತೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳಬೇಕು. ನಿಮ್ಮ ಉತ್ಪನ್ನ ಗ್ರಾಹಕರಿಗೆ ಇಷ್ಟವಾದ್ರೆ ಅವರು ಅದನ್ನು ಖರೀದಿ ಮಾಡ್ತಾರೆ. ಇದ್ರಿಂದ ನೀವು ಸಣ್ಣ ಪ್ರಮಾಣದಲ್ಲಿ ಆದಾಯ ಗಳಿಸಬಹುದಾಗಿದೆ. ವಾಟ್ಸ್ ಅಪ್ ನಲ್ಲಿ ನೀವು ವ್ಯವಹಾರ ನಡೆಸುತ್ತಿದ್ದರೆ ವಾಟ್ಸ್ ಅಪ್ ಈ ಜವಾಬ್ದಾರಿಯನ್ನು ಹೊರುವುದಿಲ್ಲ. ಅಂದ್ರೆ ನೀವು ವಾಟ್ಸ್ ಅಪ್ ಮೂಲಕ ಯಾವುದೇ ವಸ್ತುವನ್ನು ಮಾರಾಟ ಮಾಡಿದ್ರೂ ಗ್ರಾಹಕರಿಂದ ಹಣ ವಸೂಲಿ ಮಾಡಬೇಕು. ಇದಕ್ಕೂ ವಾಟ್ಸ್ ಅಪ್ ಗೂ ಸಂಬಂಧವಿರುವುದಿಲ್ಲ.