ತನ್ನದೇ ಸ್ಟೇಟಸ್ ಹಾಕಿದ ವಾಟ್ಸಾಪ್, ಖಾಸಗಿತನ ಕಾಪಾಡುವ ಭರವಸೆ!
ಬಳಕೆದಾರರು ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯ| ತನ್ನದೇ ಸ್ಟೇಟಸ್ ಹಾಕಿದ ವಾಟ್ಸಾಪ್| ಖಾಸಗಿತನ ಕಾಪಾಡುವ ಭರವಸೆ!
ನವದೆಹಲಿ(ಜ.18): ಬಳಕೆದಾರರು ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಇದೀಗ ಸ್ವತಃ ವಾಟ್ಸಾಪ್ ತನ್ನ ಸ್ಟೇಟಸ್ ಹಾಕಿಕೊಂಡಿದೆ. ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಜೊತೆ ಹಂಚಿಕೊಳ್ಳುವ ನೂತನ ನೀತಿಗೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗೆ ಗುರಿಯಾಗಿರುವ ವಾಟ್ಸಪ್ ಸಂಸ್ಥೆ ತನ್ನದೇ ಸ್ಟೇಟಸ್ ಪೋಸ್ಟ್‌ಗಳನ್ನು ಎಲ್ಲರ ಮೊಬೈಲ್‌ನಲ್ಲಿ ಭಾನುವಾರ ಹಂಚಿಕೊಂಡಿದ್ದು, ಬಳಕೆದಾರರ ಖಾಸಗಿತನವನ್ನು ರಕ್ಷಿಸಲು ಬದ್ಧವಾಗಿರುವುದಾಗಿಯೂ ಭರವಸೆ ನೀಡಿದೆ.
ವಾಟ್ಸಪ್ ಯೂಸರ್ ನೇಮ್‌ನಲ್ಲಿ ನಾಲ್ಕು ಸ್ಲೈಡ್‌ನ ಸ್ಟೇಟಸ್ ಮೆಸೇಜ್‌ಗಳನ್ನು ಷೇರ್ ಮಾಡಲಾಗಿದೆ. ಮೊದಲ ಮೇಸೇಜ್‌ನಲ್ಲಿ ‘ನಾವು ನಿಮ್ಮ ಖಾಸಗಿತನವನ್ನು ರಕ್ಷಿಸಲು ಬದ್ಧವಾಗಿದ್ದೇವೆ ಎಂದು ಬರೆಯಲಾಗಿದೆ.
ಇತರ ಮೂರು ಮೆಸೇಜ್‌ಗಳಲ್ಲಿ ‘ವಾಟ್ಸಪ್ ನಿಮ್ಮ ವೈಯಕ್ತಿಕ ಸಂವಹನವನ್ನು ಓದುವುದಿಲ್ಲ ಅಥವಾ ಕೇಳಿಸಿಕೊಳ್ಳುವುದಿಲ್ಲ. ವಾಟ್ಸಪ್ ನಿಮ್ಮ ಸಂಪರ್ಕಗಳನ್ನು ಫೇಸ್‌ಬುಕ್ ಜೊತೆ ಷೇರ್ ಮಾಡುವುದಿಲ್ಲ’ ಎಂದು ತಿಳಿಸಲಾಗಿದೆ.