Asianet Suvarna News Asianet Suvarna News

WhatsApp New Features: iPhone ಬಳಕೆದಾರರಿಗೆ ಮೇಸೆಜ್ ರೆಕಾರ್ಡಿಂಗ್ Pause, Focus Mode ವೈಶಿಷ್ಟ್ಯ!

ರೆಕಾರ್ಡಿಂಗ್ ಮಾಡುವಾಗ ಧ್ವನಿ ಮೇಸೆಜ್‌ಗಳನ್ನು ಪಾಸ್‌ ಮಾಡುವ ಮತ್ತು ರೆಸ್ಯೂಮ್ ವೈಶಿಷ್ಟ್ಯವನ್ನು ಅಂತಿಮವಾಗಿ ವಾಟ್ಸಾಪ್‌ ಹೊರತಂದಿದೆ. ಸದ್ಯಕ್ಕೆ ಈ ವೈಶಿಷ್ಟ್ಯವನ್ನು ಐಒಎಸ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ

WhatsApp New Features iPhone users can pause voice message recording new focus mode mnj
Author
Bengaluru, First Published Jan 26, 2022, 1:41 PM IST

Tech Desk: ಹಲವಾರು ಪರೀಕ್ಷೆಗಳು ಮತ್ತು ಪ್ರಯೋಗಗಳ ನಂತರ ವಾಟ್ಸಾಪ್ ಅಂತಿಮವಾಗಿ ವಾಯ್ಸ್‌ ಮೇಸೆಜ್ ರೆಕಾರ್ಡಿಂಗ್ ಮಾಡುವಾಗ ಪಾಸ್‌ ಮಾಡುವ ಮತ್ತು ರೆಸ್ಯೂಮ್ ವೈಶಿಷ್ಟ್ಯವ್ನು ಹೊರತಂದಿದೆ. ಈ ವೈಶಿಷ್ಟ್ಯವನ್ನು ಐಒಎಸ್ ಬಳಕೆದಾರರಿಗೆ ಮಾತ್ರ  ಸದ್ಯಕ್ಕೆ ಬಿಡುಗಡೆ ಮಾಡಲಾಗಿದೆ. ವಾಟ್ಸಾಪ್ ಈ ಹಿಂದೆ ಧ್ವನಿ ಸಂದೇಶದ ಪೂರ್ವವೀಕ್ಷಣೆ‌ (Preview) ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತ್ತು. ಇದು ಬಳಕೆದಾರರು ತಮ್ಮ ಸಂಪರ್ಕಗಳಿಗೆ ವಾಯ್ಸ್‌ ಮೇಸೆಜ್ ಕಳುಹಿಸುವ ಮೊದಲು ಅವರ ಧ್ವನಿ ಸಂದೇಶಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ.

ಧ್ವನಿ ಸಂದೇಶದ ವೈಶಿಷ್ಟ್ಯದ ಹೊರತಾಗಿ, ಐಓಎಸ್ ಬಳಕೆದಾರರು ಹೊಸ ಫೋಕಸ್ ಮೋಡನ್ನು ಸಹ ಪಡೆಯಲಿದ್ದಾರೆ. ಆದರೆ ಇದು iOS 15 ಬಳಕೆದಾರರಿಗೆ ಮಾತ್ರ ದೊರೆಯಲಿದೆ. ಈ ವೈಶಿಷ್ಟ್ಯವು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರಲಿದೆ.  ವಾಟ್ಸಾಪ್‌ ಕಳೆದ ಕೆಲವು ತಿಂಗಳುಗಳಿಂದ ಸಮರೋಪಾದಿಯಲ್ಲಿ ಹಲವು ವೈಶಿಷ್ಟ್ಯಗಳನ್ನು ಹೊರತರುತ್ತಿದೆ. 

ಇದನ್ನೂ ಓದಿ: WhatsApp Features: ಮೇಸೆಜ್‌ ನೋಟಿಫಿಕೇಶನ್‌ ಜತೆ ಪ್ರೊಫೈಲ್ ಫೋಟೋ ತೋರಿಸಲಿರುವ ವಾಟ್ಸಾಪ್‌!

ವಾಟ್ಸಾಪ್‌ ಅಪಡೇಟ್‌ ಅಗತ್ಯ: ಐಓಎಸ್‌ನಲ್ಲಿ ವಾಟ್ಸಾಪ್ ಆವೃತ್ತಿ 22.7.75 ನಲ್ಲಿ ಹೊಸ ಪಾಸ್‌  ಮತ್ತು ರೆಸ್ಯುಮ್ ಧ್ವನಿ ರೆಕಾರ್ಡಿಂಗ್ ವೈಶಿಷ್ಟ್ಯ ಲಭ್ಯವಿದೆ. ಹೊಸ ವೈಶಿಷ್ಟ್ಯವನ್ನು ಪಡೆಯಲು  ಆಪ್ ಸ್ಟೋರ್‌ನಲ್ಲಿ  ಅಪ್ಲಿಕೇಶನನ್ನು ವಾಟ್ಸಾಪ್ ಆವೃತ್ತಿ 22.7.75ಗೆ ನವೀಕರಿಸಬೇಕಾಗುತ್ತದೆ.‌ ಅಪಡೇಟ್‌ ನಂತರ ಧ್ವನಿ ಸಂದೇಶಗಳನ್ನು ರೆಕಾರ್ಡ್ ಮಾಡುವಾಗ ಪಾಸ್‌ ಮಾಡಬಹುದು ಮತ್ತು ರೆಸ್ಯೂಮ್‌ ಮಾಡಬಹುದು. ರೆಕಾರ್ಡಿಂಗ್ ಅನ್ನು ಲಾಕ್ ಮಾಡಲು ಮೇಲಕ್ಕೆ ಸ್ವೈಪ್ ಮಾಡುವ ಮೂಲಕ ಇದನ್ನು ಬಳಸಬಹುದು, ತದನಂತರ "Pause" ಮತ್ತು "Resume" ಬಟನ್‌ಗಳನ್ನು ಟ್ಯಾಪ್ ಮಾಡಿ,"ಎಂದು ಆಪ್ ಸ್ಟೋರ್‌ನಲ್ಲಿನ ಅಪ್ಲಿಕೇಶನ್ ವಿವರಣೆಯಲ್ಲಿ ಹೇಳಲಾಗಿದೆ.

ಹೊಸ ವಾಟ್ಸಾಪ್ ಧ್ವನಿ ಸಂದೇಶದ ವೈಶಿಷ್ಟ್ಯವನ್ನು ಬಳಸಲು ನೀವು ಸ್ವೈಪ್ ಮಾಡಿ ಮತ್ತು ನಿಮ್ಮ ಧ್ವನಿ ರೆಕಾರ್ಡಿಂಗ್ ಅನ್ನು ಲಾಕ್ ಮಾಡಬೇಕಾಗುತ್ತದೆ, ನಂತರ ನೀವು ಪಾಸ್ ಮತ್ತು ರೆಸ್ಯೂಮ್‌ ಬಟನ್‌ಗಳನ್ನು ಟ್ಯಾಪ್ ಮಾಡಬಹುದು. ವಾಟ್ಸಾಪ್ ಅಕ್ಟೋಬರ್‌ನಲ್ಲಿ‌ ಈ ವೈಶಿಷ್ಟ್ಯವನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. Wabetainfo ಈ ಬಗ್ಗೆ ಬಿಡುಗಡೆಗೆ ಮುನ್ನವೆ  ವೈಶಿಷ್ಟ್ಯದ ಕುರಿತು ಮೊದಲು ವರದಿ ಮಾಡಿತ್ತು. ಈ ವೈಶಿಷ್ಟ್ಯವು ಪ್ರಸ್ತುತ ಐಫೋನ್ ಬಳಕೆದಾರರಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರು ಇದನ್ನು ಪಡೆಯಬಹುದು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: WhatsApp Groupನಿಂದ ತೆಗೆದಿದ್ದಕ್ಕೆ ಕೋರ್ಟ್‌ಗೆ ಅರ್ಜಿ: ನಷ್ಟಪರಿಹಾರ ನೀಡಲು ಮನವಿ!

ಹೊಸ ಫೋಕಸ್ ಮೋಡ್: ವಾಟ್ಸಾಪ್‌ನಲ್ಲಿ ಐಫೋನ್ ಬಳಕೆದಾರರು ಸ್ವೀಕರಿಸಿದ ಮತ್ತೊಂದು ವೈಶಿಷ್ಟ್ಯವೆಂದರೆ ಹೊಸ ಫೋಕಸ್ ಮೋಡ್. ಈ ವೈಶಿಷ್ಟ್ಯವು ಬಳಕೆದಾರರಿಗೆ ಆಯ್ದ ಸಂಪರ್ಕಗಳಿಂದ ಮಾತ್ರ ಸಂದೇಶಗಳನ್ನು ಸ್ವೀಕರಿಸಲು ಅನುಮತಿಸುತ್ತದೆ. ನೀವು ಫೋಕಸ್ ಮೋಡನ್ನು ಆನ್ ಮಾಡಿದರೆ, ನೀವು do not disturb mode ಆನ್ ಮಾಡಿದಾಗ ಮಾತ್ರ ನೀವು ಆಯ್ಕೆ ಮಾಡಿದ ಸಂಪರ್ಕಗಳಿಂದ ಸಂದೇಶಗಳನ್ನು ಪಡೆಯುತ್ತೀರಿ. ಈ ವೈಶಿಷ್ಟ್ಯವು ಕೂಡ iOS 15 ಜೊತೆಗೆ ಮಾತ್ರ ಬರುತ್ತದೆ, ಆದ್ದರಿಂದ ಹೊಸ ವೈಶಿಷ್ಟ್ಯವನ್ನು ಪಡೆಯಲು  ಐಫೋನ್  ಅಪ್‌ಡೇಟ್ ಮಾಡುವುದು ಅಗತ್ಯವಾಗಿದೆ.

ಇನ್ನೊಂದು ವರದಯಲ್ಲಿ, ಐಓಎಸ್‌ಗಾಗಿ ವಾಟ್ಸಾಪ್ ಬೀಟಾ ಮುಂಬರುವ ವೈಶಿಷ್ಟ್ಯದ ಕುರಿತ ತಿಳಿದುಬಂದಿದೆ. ಇದು iOS ಬಳಕೆದಾರರಿಗೆ Android ಸಾಧನದಿಂದ ಚಾಟ್ ಅನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡುತ್ತದೆ. Wabetainfo ನ ಸ್ಕ್ರೀನ್‌ಶಾಟ್ WhatsApp ಅನ್ನು Android ಸಾಧನದಿಂದ ಚಾಟ್ ಇತಿಹಾಸವನ್ನು ಆಮದು ಮಾಡಿಕೊಳ್ಳಲು ಬಳಕೆದಾರರ ಅನುಮತಿಯನ್ನು ಕೇಳುತ್ತಿದೆ ಎಂದು ತೋರಿಸಿದೆ. 

Follow Us:
Download App:
  • android
  • ios