ವಾಟ್ಸಾಪ್‌ನಲ್ಲಿ ಹೊಸ ಫೀಚರ್: 2 ಜಿಬಿ ಗಾತ್ರದ ಫೈಲ್ ಕಳುಹಿಸೋದಿನ್ನು ಈಸಿ!
*ಬಳಕೆದಾರರಿಗೆ ನೆರವು ನೀಡುವ ಹೊಸ ಫೀಚರ್ಸ್ ಪರಿಚಯಿಸಲಿದೇ ವಾಟ್ಸಾಪ್
*ಗ್ರೂಪ್ ಪಾರ್ಟಿಸಿಪೆಂಟ್ಸ್ ಹೆಚ್ಚಳ ಸೇರಿದಂತೆ ಅನೇಕ ಹೊಸ ಫೀಚರ್ಸ್ ಇರಲಿವೆ
* ಬಳಕೆದಾರರು ಗರಿಷ್ಠ ಗಾತ್ರದ ಫೋಟೋ, ವಿಡಿಯೋ ಕಳುಹಿಸಬಹುದು, ಸ್ವೀಕರಿಸಬಹುದು
ಮೆಟಾ ಒಡೆತನದ ವಾಟ್ಸಾಪ್ ಆಪ್ ಕಿರು ಸಂದೇಶ ರವಾನೆಯಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದೆ. ಸಂದೇಶದಿಂದ ಹಣ ಕಳುಹಿಸುವ ಮತ್ತು ಸ್ವೀಕರಿಸುವರೆಗಿನ ಎಲ್ಲ ಕಾರ್ಯಗಳನ್ನು ನೀವು ಈ ವಾಟ್ಸಾಪ್ ಮೂಲಕವೇ ಮಾಡಬಹುದು. ವಾಟ್ಸಾಪ್ ಎಂಬುದು ಈಗ ನಮ್ಮ ಬದುಕಿನ ಅವಿಭಾಜ್ಯವೇ ಆಗಿ ಹೋಗಿದೆ. ನಾವೆಲ್ಲರೂ ವಾಟ್ಸಾಪ್ ಮೇಲೆ ಸಾಕಷ್ಟು ಡಿಪೆಂಡ್ ಆಗಿದ್ದೇವೆ. ಹಾಗೆಯೇ, ವಾಟ್ಸಾಪ್ ಕೂಡ ತನ್ನ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಕಾಲ ಕಾಲಕ್ಕೆ ಸಾಷ್ಟು ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗ ಹೊಸ ಫೀಚರ್‌ಗಳ ಪಟ್ಟಿಗೆ ಮತ್ತಷ್ಟು ವಿಶೇಷತೆಗಳನ್ನು ಮುಂದಿನ ಕೆಲವೇ ವಾರಗಳಲ್ಲಿ ಪಡೆಯಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಾಟ್ಸಾಪ್ ತನ್ನ ವಾಟ್ಸ್ ನ್ಯೂ ಕೆಟಗರಿಯಲ್ಲಿ ತಿಳಿಸಿರುವ ಹಾಗೆ, ಮುಂದಿನ ಕೆಲವೇ ವಾರಗಳಲ್ಲಿ ಫೈಲ್ ಸೈಜ್ ಅನ್ನು ಗರಿಷ್ಠ 2 ಜಿಬಿವರೆಗೂ ವಿಸ್ತರಿಸುವುದು ಹಿಡಿದು 512ರವರೆಗೆ ಗ್ರೂಪ್ ಪಾರ್ಟಿಸಿಪೆಂಟ್ಸ್ ಸಂಖ್ಯೆ ಹೆಚ್ಚಿಸಿದೆ. ಈ ಮೂಲಕ ವಾಟ್ಸಾಪ್ ಬಳಕೆದಾರರ ಅನುಭವವನ್ನು ಮತ್ತು ಅತ್ಯಾಧುನಿಕ ಫೀಚರ್ಸ್ ಒದಗಿಸಲು ಮುಂದಾಗಿದೆ.
ವಾಟ್ಸಾಪ್ (Whatsapp) ಕಳೆದ ಕೆಲವು ತಿಂಗಳಿನಿಂದ ಇಮೋಜಿ ರಿಯಾಕ್ಷನ್, ವಾಯ್ಸ್ ಕಾಲ್ ಗ್ರೂಪ್ ಮೇಂಬರ್ಸ್ ಸಂಖ್ಯೆ ಹೆಚ್ಚಳ ಸೇರಿದಂತೆ ಇನ್ನಿತರ ಫೀಚರ್ಸ್ ಸೇರಿಸುತ್ತಲೇ ಬಂದಿದೆ. ಈಗ ವಾಟ್ಸಾಪ್ ಒಡೆತನದ ಮೆಟಾ (Meta) ಫೈಲ್ ಗಾತ್ರವನ್ನು ಹೆಚ್ಚಿಸಲು ಹೊರಟಿದೆ ಮತ್ತು ಶೀಘ್ರವೇ ಈ ಫೀಚರ್ ಅನ್ನು ನೀವು ವಾಟ್ಸಾಪ್‌ನಲ್ಲಿ ಕಾಣಬಹುದು. ಒಂದೊಮ್ಮೆ ಈ ಫೀಚರ್ ಆಕ್ಟಿವೇಟ್ ಆದರೆ ಬಳಕೆದಾರರು ಭಾರಿ ಗಾತ್ರದ ಫೈಲ್‌ಗಳನ್ನು ಆರಾಮವಾಗಿ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಇದರಿಂದ ಬಿಸಿನೆಸ್ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಭಾರಿ ನೀವು ದೊರೆಯಲಿದೆ.
50 MP ಟ್ರಿಪಲ್ ಕ್ಯಾಮೆರಾ ಇರುವ Moto G32 ಫೋನ್ ಲಾಂಚ್
ಕೆಲವು ಮೂಲಗಳ ಪ್ರಕಾರ, ವಾಟ್ಸಾಪ್‌ನಲ್ಲಿ ಫೈಲ್ ಸೈಜ್ ಹೆಚ್ಚಿಸುವ ಫೀಚರ್ಸ್ ಹಂತಹಂತವಾಗಿ ಅಪ್‌ಡೇಟ್ ಆಗಲಿದೆ ಎನ್ನಲಾಗಿದೆ. ಸದ್ಯಕ್ಕೆ ವಾಟ್ಸಾಪ್‌ನಲ್ಲಿ ಒಂದು ಜಿಬಿ ಫೈಲ್ ಅನ್ನು ಕಳುಹಿಸಬಹುದು. ಇದಕ್ಕಾಗಿ ಬಳಕೆದಾರರು ತಮ್ಮ ವಾಟ್ಸಾಪ್ ಅಪ್‌ಡೇಟ್ ಮಾಡಿಕೊಂಡಿರಬೇಕು. ಈ ಮೊದಲು ವಾಟ್ಸಾಪ್‌ನಲ್ಲಿ ಕೇವಲ 100 ಎಂಬಿ ಫೈಲ್ ಮಾತ್ರ ಕಳುಹಿಸಲು ಸಾಧ್ಯವಾಗುತ್ತಿತ್ತು. ಈ ಸಾಮರ್ಥ್ಯ ಜಿಬಿಯಲ್ಲಿ ಬಳಕೆದಾರರು ಕಡಿಮೆ ರೆಸೂಲುಷನ್ ಇರುವ ವಿಡಿಯೋ ಫೋಟೋ ಮತ್ತು ಶಾರ್ಟ್ ವಿಡಿಯೋ ಮಾತ್ರವೇ ಕಳುಹಿಸಲು ಸಾಧ್ಯವಾಗುತ್ತಿತ್ತು. ಆದರೆ, ವಾಟ್ಸಾಪ್ ನಿಧಾನವಾಗಿ ಈ ಫೈಲ್ ಗಾತ್ರದ ಸಾಮರ್ಥ್ಯವನ್ನು ಹೆಚ್ಚಿಸುತ್ತಾ ಬಂದಿದೆ. ಇನ್ನು ಶೀಘ್ರವೇ ಬಳಕೆದಾರರು ವಾಟ್ಸಾಪ್ ಮೂಲಕವೇ 2 ಜಿಬಿವರೆಗಿನ ಫೈಲ್ ಅನ್ನು ಸರಾಗ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.
ಮೆಟಾ ಒಡೆತನದ ವಾಟ್ಸಾಪ್ ಕೇವಲ ಫೈಲ್ ಗಾತ್ರವನ್ನ ಹೆಚ್ಚಿಸುವ ಫೀಚರ್ಸ್ ಮಾತ್ರವಲ್ಲೇದ ಇನ್ನೂ ಅನೇಕ ಹೊಸ ಫೀಚರ್ಸ್ ಆಡ್ ಮಾಡುತ್ತಿದೆ. ಗ್ರಾಹಕರು ಶೀಘ್ರವೇ ತಮ್ಮ ಗ್ರೂಪ್ ಪಾರ್ಟಿಸಿಪೆಂಟ್ಸ್ ಸಂಖ್ಯೆಯನ್ನು 512ಕ್ಕೆ ಹೆಚ್ಚಿಸಿಕೊಳ್ಳಬಹುದು, ಗ್ರೂಪ್ ಕಾಲ್‌ನಲ್ಲಿದ್ದಾಗ ನೀವ ಉಳಿದವರು ಅಥವಾ ಸಂದೇಶಗಳನ್ನು ಟೇಲ್ ಅನ್ನು ದೀರ್ಘವಾಗಿ ಪ್ರೆಸ್ ಮಾಡುವ ಮೂಲಕ ಮ್ಯೂಟ್ ಮಾಡಬಹುದು. ಹೀಗೆ ಇನ್ನೂ ಅನೇಕ ಹೊಸ ಫೀಚರ್ಸ್ ಅನ್ನು ವಾಟ್ಸಾಪ್ ಶೀಘ್ರವೇ ಪರಿಚಯಿಸಲಿದೆ.
ಲೋಕಸಭೆಯಿಂದ ಡೇಟಾ ಪ್ರೊಟೆಕ್ಷನ್ ಬಿಲ್ ವಾಪಸ್ ಪಡೆದ ಸರ್ಕಾರ
ಜಗತ್ತಿನಲ್ಲೇ ಅತಿ ಹೆಚ್ಚು ಜನರು ಬಳಸುವ ಆಪ್ ಎನಿಸಿಕೊಂಡಿರುವ ವಾಟ್ಸಾಪ್ ಅನ್ನು ಫೆಸ್‌ಬುಕ್ (FACEBOOK) ಒಡೆತನದ ಮೆಟಾ ಕಂಪನಿ ಹೊಂದಿದೆ. ಈ ಹೊಸ ಫೀಚರ್ಸ್ ಯಾವಾಗ ಬಳಕೆ ಸಿಗಲಿವೆ ಎಂಬುದನ್ನು ಖಚಿತಪಡಿಸಿಲ್ಲವಾದರೂ ಶೀಘ್ರವೇ ಜನರ ಬಳಕೆ ದೊರೆಯಲಿವೆ ಎಂದು ಹೇಳಬಹುದು. ಒಂದೊಮ್ಮೆ ಈ ಹೊಸ ಫೀಚರ್ಸ್ ಬಳಕೆದಾರರಿಗೆ ಬಳಸಲು ದೊರೆತರೆ ಅವರಿಗೆ ಸಾಕಷ್ಟು ನೆರವು ದೊರೆಯಲಿದೆ ಎಂದು ಹೇಳಬಹುದು.