ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಹೊಸ ಹೊಸ ಫೀಚರ್ಸ್ ಪರಿಚಯಿಸಿದೆ. ಚಾಟ್ ಲಾಕ್, ವಾಯ್ಸ್ ಸ್ಟೇಟಸ್ ಸೇರಿದಂತೆ ಹಲವು ಫೀಚರ್ಸ್ ಈಗಾಗಲೇ ಲಭ್ಯವಿದೆ. ಇದೀಗ ಬಳಕೆದಾರರಿಗೆ ಮತ್ತೊಂದು ಕೂಡುಗೆ ನೀಡಿದೆ. ಟೆಕ್ಸ್ಟ್ ಮೆಸೆಜೇ, ವಾಯ್ಸ್ ಮೆಸೇಜ್ ರೀತಿ ಇದೀಗ ವಿಡಿಯೋ ಮೆಸೇಜ್ ಕಳುಹಿಸಲು ಸಾಧ್ಯವಿದೆ. ಮೊದಲು ನೀವು ನಿಮ್ಮ ವ್ಯಾಟ್ಸ್ಆ್ಯಪ್ ಅಪ್‌ಡೇಟ್ ಮಾಡಿಕೊಂಡರೆ ಸಾಕು.

ನವದೆಹಲಿ(ಜೂ.16): ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡಲಾಗಿದೆ. ಇದುವರೆಗೆ ಸಂದೇಶವನ್ನು ಬರಹ ಅಥವಾ ವ್ಯಾಯ್ಸ್ ರೂಪದಲ್ಲಿ ಕಳುಹಿಸಲು ಸಾಧ್ಯವಿತ್ತು. ಇದೀಗ ವಿಡಿಯೋ ಸಂದೇಶ ಕಳುಹಿಸಲು ಸಾಧ್ಯವಿದೆ. ಅರೆ ವಿಡಿಯೋ ರವಾನಿಸುವುದು ಈಗಾಗಲೇ ಇದೆಯಲ್ಲ ಎಂದು ಕನ್ಫ್ಯೂಸ್ ಆಗಬೇಡಿ. ಇದು ವಿಡಿಯೋ ಮೆಸೇಜ್. ವಾಯ್ಸ್ ಮೆಸೇಜ್ ರೀತಿ, ನೀವು ಶಾರ್ಟ್ ವಿಡಿಯೋ ಸಂದೇಶವನ್ನು ಕಳುಹಿಸಲು ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಪರಿಚಯಿಸಿದೆ. 

ನೂತನ ಫೀಚರ್ಸ್ ಸದ್ಯ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಇದು ಐಒಎಸ್ ಹಾಗೂ ಆ್ಯಂಡ್ರಾಯ್ಡ್ ವರ್ಶನ್‌ನಲ್ಲಿ ಲಭ್ಯವಿದೆ. ಬಳಕೆದಾರರ ಸಂವಹನ ಮತ್ತಷ್ಟು ಸುಲಭವಾಗಿಸಲು ಹಾಗೂ ಅತ್ಯುತ್ತಮ ಸಂವಹನ ಅನುಭವಕ್ಕಾಗಿ ವ್ಯಾಟ್ಸ್ಆ್ಯಪ್ ಶಾರ್ಟ್ ವಿಡಿಯೋ ಮೆಸೇಜ್ ಫೀಚರ್ ಪರಿಚಯಿಸಿದೆ. ವಿಡಿಯೋ ಮೆಸೇಜ್ 60 ಸೆಕೆಂಡ್‌ಗಿಂತ ಹೆಚ್ಚಿನ ಸಂದೇಶ ರವಾನೆಯಾಗುವುದಿಲ್ಲ. ಹೀಗಾಗಿ ನೀವು ಕಳುಹಿಸುವ ವಿಡಿಯೋ ಸಂದೇಶ 60 ಸೆಕೆಂಡ್ ಒಳಗಿರಬೇಕು.

Whatsapp ಬಳಕೆದಾರರಿಗೆ ಬಂಪರ್ ಫೀಚರ್, HD ಫೋಟೋ ಕಳುಹಿಸಲು ಅವಕಾಶ!

ವಾಯ್ಸ್ ಮೆಸೇಜ್ ಮೈಕ್ರೋಫೋನ್ ಬಟನ್ ಒತ್ತಿ ಹಿಡಿದರೆ ಎರಡು ಆಯ್ಕೆ ಲಭ್ಯವಾಗಲಿದೆ. ಒಂದು ವಾಯ್ಸ್ ಮೆಸೇಜ್ ಮತ್ತೊಂದು ವಿಡಿಯೋ ಮೆಸೇಜ್. ಈ ವಿಡಿಯೋ ಮೆಸೇಜ್ ಮೂಲಕ 60 ಸೆಕೆಂಡ್ ಒಳಗಿನ ವಿಡಿಯೋ ಸಂದೇಶ ರೆಕಾರ್ಡ್ ಮಾಡಿ ಕಳುಹಿಸಬಹುದು. ಇನ್ನು ವಿಡಿಯೋ ಮೆಸೇಜ್ ಸ್ವೀಕರಿಸುವ ವ್ಯಕ್ತಿ ವಿಡಿಯೋ ಮೇಲೆ ಟ್ಯಾಪ್ ಮಾಡಿದರೆ ಸಾಕು, ನಿಮ್ಮ ವಿಡಿಯೋ ಸಂದೇಶ ಪ್ಲೇ ಆಗಲಿದೆ. 

ಈ ವಿಡಿಯೋ ಸಂದೇಶಗಳನ್ನು ಫಾರ್ವಡ್ ಮಾಡಲು ಸಾಧ್ಯವಿಲ್ಲ. ಆದರೆ ಸ್ವೀಕರಿಸಿದ ವಿಡಿಯೋ ಸಂದೇಶವನ್ನು ತಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು. ಇದಕ್ಕೆ ವಿಡಿಯೋ ಸಂದೇಶ ಕಳುಹಿಸುವ ವ್ಯಕ್ತಿ ವೀವ್ ಒನ್ಸ್ ಆಯ್ಕೆ ಮಾಡಿಕೊಂಡರೆ ಸಾಧ್ಯವಿಲ್ಲ. 

ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್, ಹೊಸ ಫೀಚರ್ ಈಗ ಎಲ್ಲಾ ಬಳಕೆದಾರರಿಗೆ ಲಭ್ಯ!

 ಚಾಟಿಂಗ್‌ ರಹಸ್ಯವಾಗಿಡಲು ವಾಟ್ಸಪ್‌ನಿಂದ ಚಾಟ್‌ ಲಾಕ್‌
ಪರಸ್ಪರ ರವಾನಿಸಿದ ಸಂದೇಶಗಳನ್ನು ಯಾರ ಕಣ್ಣಿಗೂ ಬೀಳದಂತೆ ರಹಸ್ಯವಾಗಿ ಕಾಪಾಡುವ ಹೊಸ ಫೀಚರ್‌ ಒಂದನ್ನು ವಾಟ್ಸಪ್‌ ಅನಾವರಣಗೊಳಿಸಿದೆ. ಹೀಗಾಗಿ ಒಂದು ವೇಳೆ ಮೊಬೈಲ್‌ನಲ್ಲಿ ವಾಟ್ಸಪ್‌ ಆ್ಯಪ್‌ ಅನ್ನು ಯಾರೇ ವೀಕ್ಷಿಸಿದರೂ, ಚಾಟ್‌ ಲಾಕ್‌ ಆಗಿರುವ ಸಂದೇಶಗಳನ್ನು ಯಾರೂ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಈ ಫೀಚರ್‌ ಆಯ್ಕೆ ಮಾಡಿಕೊಂಡರೆ ಸಂದೇಶ ಬಂದಾಗ ನೋಟಿಫಿಕೇಷನ್‌ನಲ್ಲೂ ಅದು ಕಾಣದು. ಇದು ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾ ಬಿಡುಗಡೆ ಮಾಡಿರುವ ಹೊಸ ಫೀಚರ್‌. ಈ ಆಪ್ಷನ್‌ ಅನ್ನು ಬಳಸಿಕೊಂಡರೆ ನಾವು ಇನ್ಯಾವುದೇ ವಾಟ್ಸಪ್‌ ಬಳಕೆದಾರರೊಂದಿಗೆ ನಡೆಸಿದ ಚಾಟ್‌ ಸಂಪೂರ್ಣ ರಹಸ್ಯವಾಗಿರುತ್ತದೆ. ಹೀಗೆ ವಿನಿಮಯ ಮಾಡಿಕೊಂಡ ಸಂದೇಶಗಳು ಬೇರೊಂದು ಫೋಲ್ಡರ್‌ನಲ್ಲಿ ಸಂಗ್ರಹವಾಗುವ ಕಾರಣ ಅದು ಯಾರಿಗೂ ಕಾಣಿಸದು. ಫಿಂಗರ್‌ಪ್ರಿಂಟ್‌ ಅಥವಾ ಪಾಸ್‌ವರ್ಡ್‌ ಬಳಸಿಕೊಂಡು ಈ ಚಾಟ್‌ ಲಾಕ್‌ ಓಪನ್‌ ಮತ್ತು ಲಾಕ್‌ ಮಾಡಬಹುದು. ಇದರಿಂದ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಇನ್ನಷ್ಟುರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.