Asianet Suvarna News Asianet Suvarna News

ವಾಟ್ಸಾಪ್‌ನಲ್ಲಿ ಬಿಸಿನೆಸ್ ಇನ್ನಷ್ಟು ಸುಲಭ, ಕ್ಲೌಡ್ ಬೇಸ್ಡ್ ಎಪಿಐ ಫೀಚರ ಲಭ್ಯ

* ಕ್ಲೌಡ್  ಬೇಸ್ಡ್ ಎಪಿಐ ಎಲ್ಲ ರೀತಿಯ, ಮಾದರಿಯ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲಿದೆ
* ವಾಟ್ಸಾಪ್ ಬಿಸಿನೆಸ್ ಬಳಕೆದಾರರಿಗೆ ತಮ್ಮ ಉತ್ಪನ್ನಗಳು ಮಾರಾಟಕ್ಕೆ ಇದು ಅವಕಾಶ ಕಲ್ಪಿಸಲಿದೆ
* ಸ್ವಂತ ವೆಬ್‌ಸೈಟ್, ಸರ್ವರ್ ನಿರ್ವಹಣೆಯ ವೆಚ್ಚವನ್ನು ಈ ಫೀಚರ್ ತಗ್ಗಿಸಲಿದೆ.

WhatsApp interdicted cloud Based API for business users
Author
Bengaluru, First Published May 21, 2022, 3:37 PM IST

ಫೇಸ್‌ಬುಕ್ (Facebook) ಒಡೆತನದ ಮೆಟಾ (Meta), ತನ್ನ ಇನ್‌ಸ್ಟಂಟ್ ಮೆಸೆಜಿಂಗ್ ಆಪ್ ವಾಟ್ಸಾಪ್‌ (WhatsApp)ಗೆ ಮತ್ತೊಂದು  ವಿಶೇಷ ಫೀಚರ್ ಸೇರಿಸಿದೆ. ಆದರೆ, ಈ ಫೀಚರ್ ಸಾಮಾನ್ಯ ವಾಟ್ಸಾಪ್‌ ಬಳಕೆದಾರರಿಗೆ ಅಲ್ಲ. ಬದಲಿಗೆ, ವಾಟ್ಸಾಪ್ ಬ್ಯುಸಿನೆಸ್ (WhatsApp Business) ಬಳಕೆದಾರರಿಗೆ ಈ ಫೀಚರ್ ಹೆಚ್ಚು ಅನುಕೂಲ ಕಲ್ಪಿಸಲಿದೆ. ವಾಟ್ಸಾಪ್ ಬ್ಯುಸಿನೆಸ್ ಬಳಕೆದಾರರು ಇನ್ನು ಮುಂದೆ,  ಕ್ಲೌಡ್ ಬೇಸ್ಡ್ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್-ಎಪಿಐ (Application Programming Interface-API)  ಫೀಚರ್ ಅನ್ನು ಬಳಸಬಹುದು. ಆದರೆ, ಈ ಫೀಚರ್ ಪ್ರೀಮಿಯಂ ವಾಟ್ಸಾಪ್ ಬ್ಯುಸಿನೆಸ್ ಬಳಕೆದಾರರಿಗೆ ಲಭ್ಯವಿದೆ ಎಂಬುದನ್ನು ಮರೆಯಬಾರದು. ಈ ಹೊಸ ವೈಶಿಷ್ಟ್ಯ ಬಗ್ಗೆ ವಾಟ್ಸಾಪ್ ತನ್ನ ಬ್ಲಾಗ್‌ನಲ್ಲಿ ಮಾಹಿತಿ ನೀಡಿದ್ದು, ಬಿಸಿನೆಸ್ ಎಂಬುದು ಭೂತಕಾಲದ ಸಂಗತಿ ಎಂದು ಮಾತನಾಡುವ ಸವಾಲುಗಳನ್ನು ನಾವೆಲ್ಲ ಅನುಭವಿಸಿದ್ದೇವೆ. ಅಂದರೆ, ದುರಸ್ತಿಯಲ್ಲಿರುವ ವೆಬ್‌ಸೈಟ್ ಅಥವಾ ಬ್ಲ್ಯಾಕ್ ಬಾಕ್ಸ್ ಮೂಲಕ ಇಮೇಲ್ ಕಳುಹಿಸುವಂಥ ಸವಾಲುಗಳನ್ನು ಎದುರಿಸುದ್ದೇವೆ. ಆದರೆ, ಇನ್ನು ಮುಂದೆ ಅದಕ್ಕೆ ಅವಕಾಶವಿರುವುದಿಲ್ಲ. ಯಾರು ತಮ್ಮ ಬ್ಯುಸಿನೆಸ್ ಅನ್ನು ವೇಗವಾಗಿ, ಅನುಲಕೂಲಕರವಾಗಿ ಮತ್ತು ವಿಶ್ವಾಸಾರ್ಹವಾಗಿ ತಮ್ಮ ಗ್ರಾಹಕರ ಜತೆ ಮಾಡಲು ಮುಂದಾಗುತ್ತಾರೋ ಅವರಿಗೆ ವಾಟ್ಸಾಪ್ ತನ್ನ ಈ ಹೊಸ ಫೀಚರ್ ಮೂಲಕ ನೆರವು ಒದಗಿಸಲಿದೆ ಎಂದು ಹೇಳಿಕೊಂಡಿದೆ.

ಮೇ 24ಕ್ಕೆ Redmi Note 11T Pro+, Redmi Note 11T Pro ಬಿಡುಗಡೆ 

ಏನಿದು ಕ್ಲೌಡ್ ಎಪಿಐ?
ವಾಟ್ಸಾಪ್ ಕ್ಲೌಡ್ ಎಪಿಐ (API) ಎಂಬುದು, ವಾಟ್ಸಾಪ್ ಬಿಸಿನೆಸ್ ಆಪ್‌ನ ಕ್ಲೌಡ್ ಬೇಸ್ಡ್ ವರ್ಷನ್ ಟೂಲ್ (Tool) ಎಂದು ಹೇಳಬಹುದು. ಕಂಪನಿ ಹೇಳಿಕೊಂಡಿರುವ ಪ್ರಕಾರ ಈ ಹೊಸ ಟೂಲ್, ವಾಟ್ಸಾಪ್ ಮೂಲಕ ಜಗತ್ತಿನ ಯಾವುದೇ ಪರದೇಶದಿಂದಲೂ, ಯಾವುದೇ ರೀತಿಯ ವ್ಯಾಪಾರಿಗಳು ತಮ್ಮ ಬಿಸಿನೆಸ್ ಮಾಡಲು ಈ ಟೂಲ್ ಅವಕಾಶ ಕಲ್ಪಿಸುತ್ತದೆ. 

"ಕೆಲವೇ ನಿಮಿಷಗಳಲ್ಲಿ, ಯಾವುದೇ ವ್ಯಾಪಾರ ಅಥವಾ ಡೆವಲಪರ್ ನಮ್ಮ ಸೇವೆಯನ್ನು ಸುಲಭವಾಗಿ ಪ್ರವೇಶಿಸಬಹುದು, ಅವರ ಅನುಭವವನ್ನು ಕಸ್ಟಮೈಸ್ ಮಾಡಲು WhatsApp ಮೇಲೆ ನೇರವಾಗಿ ನಿರ್ಮಿಸಬಹುದು ಮತ್ತು Meta ಹೋಸ್ಟ್ ಮಾಡಿದ ನಮ್ಮ ಸುರಕ್ಷಿತ WhatsApp Cloud API ಅನ್ನು ಬಳಸಿಕೊಂಡು ಗ್ರಾಹಕರಿಗೆ ಅವರ ಪ್ರತಿಕ್ರಿಯೆ ಸಮಯವನ್ನು ವೇಗಗೊಳಿಸಬಹುದು. ಮತ್ತು ಇದು ಹೆಚ್ಚಿನ ವ್ಯವಹಾರಗಳು ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವ ಪ್ರಮುಖ ಹೆಜ್ಜೆ ಮತ್ತು ಹೆಚ್ಚಿನ ಜನರು ಅವರು ಬೆಂಬಲಿಸಲು ಬಯಸುವ ವ್ಯವಹಾರಗಳಿಗೆ ಸಂದೇಶವನ್ನು ನೀಡಲು ಸಹಾಯ ಮಾಡುತ್ತದೆ," ಎಂದು ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ (Mark Zukerberg) ಹೇಳಿದ್ದಾರೆ.

ಈ ವಾಟ್ಸಾಪ್ ಬ್ಯುಸಿನೆಸ್‌ನ ಹೊಸ ಫೀಚರ್, ಸರ್ವರ್  ನಿರ್ವಹಣೆಯ ದುಬಾರಿ ವೆಚ್ಚವನ್ನು ತಗ್ಗಿಸುತ್ತದೆ ಮತ್ತು ಹೊಸ ಫೀಚರ್‌ಗಳಿಗೆ ತಕ್ಷಣವೇ ಅಕ್ಸೆಸ್ ಪಡೆಯುಲು ನೆರವು ನೀಡುತ್ತದೆ. ತಮ್ಮ ಆನ್‌ಲೈನ್ ಅಸ್ತಿತ್ವದ ಮೂಲಕ ವ್ಯಾಪಾರಿಗಳಿಗೆ ಹೊಸ ಗ್ರಾಹಕರನ್ನು ಸೆಳೆಯಲು ಕ್ಲಿಕ್ ಟು ಚಾಟ್ ಲಿಂಕ್ಸ್ ಕಸ್ಟ್‌ಮೈಸ್ ಮಾಡಲು ಅವಕಾಶ ಕಲ್ಪಿಸುತ್ತದೆ. ಇದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳು ತಮ್ಮ  ಬಿಸಿನೆಸ್ ಸುಧಾರಿಸಲು ಪ್ರತ್ಯೇಕವಾದ ವೆಬ್‌ಸೈಟ್ ಮೊರೆ ಹೋಗಬೇಕಿಲ್ಲ. ಬದಲಿಗೆ ಈ  ವಾಟ್ಸಾಪ್ ಬ್ಯುಸಿನೆಸ್ ಬಳಸಿಕೊಳ್ಳಬಹುದು.

ಸೆಪ್ಟೆಂಬರ್ 13ಕ್ಕೆ Apple iPhone 14 ಫೋನ್ ಲಾಂಚ್?

ಬಳಕೆದಾರರು ತಮ್ಮ ಇಷ್ಟದ  ಬ್ಯುಸಿನೆಸ್ ಬಗ್ಗೆ ವಾಟ್ಸಾಪ್‌ನಲ್ಲಿ ಹೆಚ್ಚಿನ ರೀತಿಯಲ್ಲಿ ಸಂಪರ್ಕದಲ್ಲಿರು ಸಾಧ್ಯವಾಗಲಿದೆ. ಹಾಗೆಯೇ ಖಾಸಗಿತನವನ್ನು ಗಮನದಲ್ಲಿಟ್ಟುಕೊಂಡು ಈ ಫೀಚರ್ ಸಿದ್ಧಪಡಿಸಲಾಗಿದೆ. ಗ್ರಾಹಕರಿಂದ ವಿನಂತಿ ಬರದ ಹೊರತು, ಯಾವುದೇ ರೀತಿಯ ಮಾಹಿತಿಯನ್ನು ಅಥವಾ ಚಾಟ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅನಗತ್ಯ ಕಿರಿಕಿರಿ ಕೂಡ ತಪ್ಪಿಸಬಹುದಾಗಿದೆ. 

Follow Us:
Download App:
  • android
  • ios