ಮೇ 24ಕ್ಕೆ Redmi Note 11T Pro+, Redmi Note 11T Pro ಬಿಡುಗಡೆ
*ರೆಡ್‌ಮಿ ಕಂಪನಿಯು ಈ ಎರಡು ಫೋನುಗಳ ಬಿಡುಗಡೆಯ ಬಗ್ಗೆ ಟೀಸರ್ ಹಂಚಿಕೆ
*ಈ ಫೋನುಗಳ ಬೆಲೆ ಎಷ್ಟಿರಬಹುದು ಎಂಬ ಮಾಹಿತಿಯನ್ನು ಕಂಪನಿ ನೀಡಿಲ್ಲ
*ಭಾರತೀಯ ಮಾರುಕಟ್ಟೆಗೆ ರೆಡ್‌ಮಿ ಫೋನ್ ಯಾವಾಗ ಲಾಂಚ್ ಎಂಬ ವಿವರವೂ ಇಲ್ಲ
ಚೀನಾ ಮೂಲದ ರೆಡ್‌ಮಿ ಸ್ಮಾರ್ಟ್‌ಫೋನ್ ಕಂಪನಿಯು ತನ್ನ ಬಜೆಟ್ ಹಾಗೂ ಪ್ರೀಮಿಯಂ ಫೋನುಗಳ ಮೂಲಕ ಭಾರತವೂ ಸೇರಿದಂತೆ ಜಗತ್ತಿನಾದ್ಯಂತದ ಮಾರುಕಟ್ಟೆಯಲ್ಲಿ ತನ್ನದೇ ಆದ ಪಾಲು ಹೊಂದಿದೆ, ಗ್ರಾಹಕರನ್ನು ಪಡೆದುಕೊಂಡಿದೆ. ಕಂಪನಿಯು ಇದೀಗ, ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನುಲಾಂಚ್ ಮಾಡುತ್ತಿದೆ. ರೆಡ್‌ಮಿ ನೋಟ್ ಟ11ಟಿ ಪ್ರೋ ಪ್ಲಸ್ (Redmi Note 11T Pro +) ಮತ್ತು ರೆಡ್‌ಮಿ ನೋಟ್ 11ಟಿ ಪ್ರೋ (Redmi Note 11T Pro) ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಮೇ 24ರಂದು ಲಾಂಚ್ ಮಾಡಲಿದೆ. ಈ ಎರಡೂ ಹೊಸ ಫೋನುಗಳು ಟರ್ಬೊ ಲೇವಲ್ ಪರ್ಫಾರ್ಮೆನ್ಸ್ ಹೊಂದಿರುವ ಮಾಹಿತಿಯನ್ನು ಷೇರ್ ಮಾಡಿಕೊಳ್ಲಲಾಗಿದೆ. Redmi Note 11T Pro+ ಕನಿಷ್ಠ ಎರಡು ವಿಭಿನ್ನ ಬಣ್ಣದ ಆಯ್ಕೆಗಳನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಪೊಕೊ ಬ್ರ್ಯಾಂಡಿಂಗ್‌ನೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ರೆಡ್‌ಮಿ ನೋಟ್ 11 ಟಿ ಪ್ರೊ ಸರಣಿಯನ್ನು ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ.
ಸಿಸ್ಟಮ್ ಬದಲಾವಣೆಯೊಂದಿಗೆ ಬರಲಿದೆ Apple iOS 16?
ಚೀನಾದ ಸೋಷಿಯಲ್ ಮೀಡಿಯಾ ತಾಣವಾಗಿರುವ weiboದಲ್ಲಿರುವ ತನ್ನ ಅಧಿಕೃತ ಖಾತೆಯಲ್ಲಿ ರೆಡ್‌ಮಿ, ರೆಡ್‌ಮಿ ನೋಟ್ 11ಟಿ ಪ್ರೋ ಪ್ಲಸ್ ಮತ್ತು ರೆಡ್‌ಮಿ ನೋಟ್ 11ಟಿ ಪ್ರೋ ಸ್ಮಾರ್ಟ್‌ಫೋನುಗಳನ್ನು ಮಾರ್ಚ್ 24ರಂದು ಬಿಡುಗಡೆ ಮಾಡುವ ಮಾಹಿತಿಯನ್ನು ಖಚಿಪಡಿಸಿದೆ. ಜತೆಗೇ ಈ ತಾಣದಲ್ಲಿ ಫೋನ್ ಬಿಡುಗಡೆಯ ಟೀಸರ್ ಕೂಡ ಷೇರ್ ಮಾಡಲಾಗಿದೆ.
ಅಧಿಕೃತ ಬಿಡುಗಡೆಗೆ ಮುಂಚಿತವಾಗಿ Xiaomi ಚೀನಾದಲ್ಲಿ Redmi Note 11T Pro+ ಮತ್ತು Redmi Note 11T Pro ಸ್ಮಾರ್ಟ್‌ಫೋನ್‌ಗಳಿಗಾಗಿ ಬುಕ್ಕಿಂಗ್ ಆರಂಭಿಸಿದೆ. Redmi Note 11T ಪ್ರೊ ಮಾದರಿಗಳು ಸಾಮಾನ್ಯ Redmi Note 11T ಜೊತೆಗೆ ಸಾಮ್ಯತೆಯನ್ನು ಹೊಂದಿರಬಹುದಾಗಿದೆ ಎಂದು ಹೇಳಾಗುತ್ತಿದೆ. ಆದಾಗ್ಯೂ, ಇದು ನವೆಂಬರ್‌ನಲ್ಲಿ ಭಾರತದಲ್ಲಿ ಪ್ರಾರಂಭವಾದ Redmi Note 11T 5G ಗಿಂತ ಭಿನ್ನವಾಗಿರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ರೆಡ್‌ಮಿ ನೋಟ್ 11ಟಿ ಪ್ರೋ ಪ್ಲಸ್ (Redmi Note 11T Pro+) ಮತ್ತು ರೆಡ್‌ಮಿ ನೋಟ್ 11ಟಿ ಪ್ರೋ( Redmi Note 11T Pro) ಸ್ಮಾರ್ಟ್‌ಫೋನುಗಳು ಕಳೆದ ತಿಂಗಳು ಚೀನಾದ TENAA ನಲ್ಲಿ ಕಾಣಿಸಿಕೊಂಡ ಮಾದರಿಗಳಾಗಿವೆ ಎಂದು ನಿರೀಕ್ಷಿಸಲಾಗಿದೆ. ಫೋನ್‌ಗಳನ್ನು ಈ ಹಿಂದೆ Redmi Note 12 Pro ಮಾಡೆಲ್‌ಗಳೆಂದು ಊಹಿಸಲಾಗಿತ್ತು. TENAA ಪಟ್ಟಿಗಳು Redmi Note 11T Pro+, ಮಾದರಿ ಸಂಖ್ಯೆ 22041216UC ನೊಂದಿಗೆ ಕಾಣಿಸಿಕೊಂಡಿದ್ದು, 4,300mAh ಬ್ಯಾಟರಿಯೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಮಾಡೆಲ್ ಸಂಖ್ಯೆ 22041216C ನೊಂದಿಗೆ ಕಾಣಿಸಿಕೊಂಡ Redmi Note 11T Pro, ದೊಡ್ಡ 4,980mAh ಬ್ಯಾಟರಿಯನ್ನು ಒಯ್ಯುತ್ತದೆ ಎಂದು ಪಟ್ಟಿಯು ಸೂಚಿಸಿದೆ.
ಏನಿದು ಸ್ಪ್ಯಾಮ್ ಬಾಟ್? ಟ್ವಿಟರ್ ಖರೀದಿಗೆ ಮಸ್ಕ್‌ಗೆ ಅಡ್ಡಿಯಾಗಿದ್ದೇಕೆ?
ಮೇ 24ರಂದು ಬಿಡುಗಡೆಗೆ ಸಿದ್ಧವಾಗಿರುವ ಈ ಎರಡೂ ಫೋನುಗಳು ಪೂರ್ಣ-HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ಆಂಡ್ರಾಯ್ಡ್ 12 ಮಜತೆಗೆ ಎಂಐಯುಐ 13 ಒಎಸ್ ಅನ್ನು ಈ ಫೋನುಗಳು ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. Xiaomi Redmi Note 11T Pro+ ಮತ್ತು Redmi Note 11T Pro ಎರಡರಲ್ಲೂ MediaTek ಡೈಮೆನ್ಸಿಟಿ ಚಿಪ್‌ಗಳನ್ನು ಬಳಸುತ್ತದೆ ಎಂದು ವದಂತಿಗಳಿವೆ. ಆದರೆ, ಈ ಎರಡೂ ಫೋನುಗಳು ಹೊಂದಿರಬಹುದಾದ ಫೀಚರ್ಸ್ ಬಗ್ಗೆ ಕಂಪನಿಯು ಎಲ್ಲೂ ಅಧಿಕೃತವಾಗಿ ಹೇಳಿಲ್ಲ. ಮೇ 24ರಂದು ಈ ಊಹಾಪೋಹಗಳಿಗೆ ತೆರೆ ಬೀಳಬಹುದು.