Asianet Suvarna News Asianet Suvarna News

ತಾಜಾ ಉತ್ಪನ್ನ ಮಾರುಕಟ್ಟೆಗೆ ಹೊಸ ವೇಗ: ನಿಂಜಾಕಾರ್ಟ್‌ನಲ್ಲಿ ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ಹೂಡಿಕೆ!

ತಂತ್ರಜ್ಞಾನದ ನಿರಂತರ ಬಳಕೆಯ ಮೂಲಕ ರೈತರಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವಾಗ ಗ್ರಾಹಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಗುಣಮಟ್ಟದ ತಾಜಾ ಉತ್ಪನ್ನಗಳ ಪ್ರವೇಶವನ್ನು ಖಾತರಿಪಡಿಸಿಕೊಳ್ಳಲು ಫ್ಲಿಪ್‌ಕಾರ್ಟ್ ಹಾಗೂ ವಾಲ್‌ಮಾರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ.
 

WalMart and Flipkart Group announce additional investment in NinjaCart ckm
Author
Bengaluru, First Published Oct 12, 2020, 5:39 PM IST

ಬೆಂಗಳೂರು(ಅ.12): ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಸಮೂಹ ಸಂಸ್ಥೆಗಳು ಭಾರತದಲ್ಲಿ ತಾಜಾ ಉತ್ಪನ್ನಗಳ ಮಾರುಕಟ್ಟೆಯಾಗಿರುವ ನಿಂಜಾಮಾರ್ಟ್ ನಲ್ಲಿ ಹೊಸ ಹೂಡಿಕೆಯನ್ನು ಘೋಷಿಸಿವೆ. ನಿಂಜಾಕಾರ್ಟ್ ನ ಮೇಡ್ ಫಾರ್ ಇಂಡಿಯಾ ಬ್ಯುಸಿನೆಸ್ ಟು ಬ್ಯುಸಿನೆಸ್(ಬಿ2ಬಿ) ಸಪ್ಲೈ ಚೇನ್ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಪರಿಹಾರಗಳನ್ನು ನೀಡುವ ಸಂಬಂಧ ಹೂಡಿಕೆಯನ್ನು ಮಾಡಲಾಗುತ್ತಿದೆ.

ಹಬ್ಬದ ಸೀಸನ್‌ನಲ್ಲಿ ವಿದ್ಯಾರ್ಥಿಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಇಂಟರ್ನ್ ಶಿಪ್!.

2019 ರ ಡಿಸೆಂಬರ್ ನಲ್ಲಿ ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ಹೂಡಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಈ ಹೂಡಿಕೆಯನ್ನು ಮಾಡಲಾಗುತ್ತಿದೆ. ತಂತ್ರಜ್ಞಾನದ ನಿರಂತರ ಬಳಕೆಯ ಮೂಲಕ ರೈತರಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವಾಗ ಗ್ರಾಹಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಗುಣಮಟ್ಟದ ತಾಜಾ ಉತ್ಪನ್ನಗಳ ಪ್ರವೇಶವನ್ನು ಖಾತರಿಪಡಿಸಿಕೊಳ್ಳುವಲ್ಲಿ ಕಂಪನಿಗಳು ಗಮನಹರಿಸುತ್ತಲೇ ಬಂದಿವೆ.

ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ಪಾಲುದಾರಿಕೆಯು ನಿಂಜಾಕಾರ್ಟ್ ನ ಬೆಳವಣಿಗೆಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಈ ಎರಡೂ ಸಂಸ್ಥೆಗಳು ನಿಂಜಾಕಾರ್ಟ್ ಮೂಲಕ ಗ್ರಾಹಕ ಶಾಪಿಂಗ್ ಅನುಭವವನ್ನು ಹೆಚ್ಚಿಸಲಿವೆ ಮತ್ತು ಆಫರ್ ಗಳನ್ನು ಸುಧಾರಿಸಲಿವೆ. ಟೈಗರ್ ಗ್ಲೋಬಲ್, ಅಸ್ಸೆಲ್, ಟ್ಯಾಂಗ್ಲಿನ್, ಸ್ಟೆಡ್ ವ್ಯೂ, ಸಿಂಗೆಂಟಾ, ನಂದನ್ ನಿಲೇಕಣಿ ಮತ್ತು ಕ್ವಾಲ್ಕಂ ಸೇರಿದಂತೆ ಹಲವಾರು ವಿಶ್ವದರ್ಜೆಯ ಪ್ರಮುಖ ಹೂಡಿಕೆದಾರರನ್ನು ನಿಂಜಾಕಾರ್ಟ್ ಆಕರ್ಷಿಸುತ್ತಿದೆ.

ಬಿಲಿಯನ್‌ ಡೇಸ್‌ನಲ್ಲಿ ಮೋಟಾರೋಲಾ ಸ್ಮಾರ್ಟ್ ಫೋನ್‌ ಉಪಕರಣ ಬಿಡುಗಡೆ!

 ಕೋವಿಡ್ ಲಾಕ್ ಡೌನ್ ಗಳ ಸಂದರ್ಭದಲ್ಲಿ ನಿಂಜಾಕಾರ್ಟ್ ಫ್ಲಿಪ್ ಕಾರ್ಟ್ ನೊಂದಿಗೆ ಸೇರಿ ಫಾರ್ಮ್ ಟು ಫೋರ್ಕ್, ಡೆಲಿವರಿ ಆ್ಯಪ್ ಗಳ ಮೂಲಕ ಆಹಾರ ವಿತರಣೆ, ಅಪಾರ್ಟ್ ಮೆಂಟ್ ವಿತರಣೆ, ಹಾರ್ವೆಸ್ಟ್ ದಿ ಫಾರ್ಮ್ಸ್ ಸೇರಿದಂತೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರಿಗೆ ಅತ್ಯಂತ ತ್ವರಿತವಾಗಿ ಗುಣಮಟ್ಟದ ಸೇವೆಗಳನ್ನು ಒದಗಿಸಿದೆ. ಒಂದು ವಾರದಲ್ಲಿ ಗ್ರಾಹಕರು ಮತ್ತು ರೈತರಿಗೆ ನೆರವಾಗಿದೆ. ಇದಲ್ಲದೇ, ಉದ್ಯಮವಾಗಿ ಮೊದಲ ಬಾರಿಗೆ ನಿಂಜಾಕಾರ್ಟ್ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಭದ್ರತೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ `ಫುಡ್ ಪ್ರಿಂಟ್’ ಎಂಬ ಉಪಕ್ರಮವನ್ನು ಆರಂಭ ಮಾಡಿತ್ತು.

ಎರಡನೇ ಸುತ್ತಿನಲ್ಲಿ ವಾಲ್ ಮಾರ್ಡ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ಭಾರತದಲ್ಲಿ ಕೃಷಿ ಮತ್ತು ಆಹಾರ ಪೂರೈಕೆ ಚೇನ್ ಆಗಿರುವ ನಿಂಜಾಕಾರ್ಟ್ ನಲ್ಲಿ ಹೂಡಿಕೆಯನ್ನು ಮುಂದುವರಿಸುವ ಬದ್ಧತೆಯನ್ನು ತೋರಿಸಿದೆ. ಇದಲ್ಲದೇ, ನಿಂಜಾಕಾರ್ಟ್ ನ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ತಾಜಾವಾದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವ ದಿಸೆಯಲ್ಲಿ ಮೌಲ್ಯವರ್ಧನೆ ಮಾಡಿದೆ.

ಫ್ಲಿಪ್ ಕಾರ್ಟ್ ತನ್ನ ಸೂಪರ್ ಮಾರ್ಟ್ (ದಿನಸಿ) ಮತ್ತು ಫ್ಲಿಪ್ ಕಾರ್ಟ್ ಕ್ವಿಕ್ (ಹೈಪರ್ ಲೋಕಲ್ ಬ್ಯುಸಿನೆಸ್) ಬೆಳವಣಿಗೆ ಕಾಣುತ್ತಿದ್ದು, ನಿಂಜಾಕಾರ್ಟ್ ದೇಶಾದ್ಯಂತ ತನ್ನ ಗ್ರಾಹಕರಿಗೆ ತಾಜಾ ಉತ್ಪನ್ನಗಳನ್ನು ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ. ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ತನ್ನ ಇ-ಗ್ರಾಸರಿಯನ್ನು ಹೆಚ್ಚಳ ಮಾಡುತ್ತಿದೆ.

ನಿಂಜಾಕಾರ್ಟ್ ಹಲವಾರು ದೇಶೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಿದೆ. ಭಾರತದ ಅತಿ ಕಡಿಮೆ ಕಟ್ಟ ಕಡೆಯ ಜಾಲವನ್ನು ಡೇಟಾ ವಿಜ್ಞಾನದ ಮೂಲಕ ಆವಿಷ್ಕಾರಕ ಜಾಲದ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಇದರ ನೆರವಿನಿಂದ 12 ಗಂಟೆಯೊಳಗೆ ರೈತರಿಂದ ಸ್ಟೋರ್ ಗೆ ತಾಜಾ ಉತ್ಪನ್ನಗಳು ತಲುಪಲು ಸಾಧ್ಯವಾಗುತ್ತಿದೆ. ಈ ಮೂಲಕ ಉತ್ಪನ್ನಗಳ ತಾಜಾತನ ಉಳಿಯಲಿದೆ ಮತ್ತು ಬೇಗ ಕೆಟ್ಟು ಹೋಗುವಂತ ಉತ್ಪನ್ನಗಳ ಉಷ್ಣಾಂಶವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಕಳೆದ ಹಲವು ತಿಂಗಳಲ್ಲಿ ಭಾರತೀಯ ಇ-ಗ್ರಾಸರಿ ಮಾರುಕಟ್ಟೆ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಆನ್ ಲೈನ್ ಮೂಲಕ ಗ್ರಾಸರಿ ಮತ್ತು ತಾಜಾ ಉತ್ಪನ್ನಗಳನ್ನು ಆರ್ಡರ್ ಮಾಡುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಫ್ಲಿಪ್ ಕಾರ್ಟ್ ಗ್ರೂಪ್ ನಲ್ಲಿ ನಾವು ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ಮತ್ತು ಆವಿಷ್ಕಾರಕ ಮಾರ್ಗಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುವುದನ್ನು ಮುಂದುವರಿಸಿದ್ದೇವೆ. ಈ ಮೂಲಕ ಸೂಪರ್ ಮಾರ್ಟ್ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಇತ್ತೀಚೆಗೆ ನಾವು ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಆರಂಭ ಮಾಡಿದ್ದು, ಈ ಸೂಪರ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಕ್ವಿಕ್ ಮೂಲಕ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದ್ದೇವೆ. ನಾವು ನಮ್ಮ ಗ್ರಾಹಕರಿಗೆ ಅತ್ಯುತ್ಕೃಷ್ಠವಾದ ಉತ್ಪನ್ನಗಳನ್ನು ಪೂರೈಸುವ ನಿಟ್ಟಿನಲ್ಲಿ ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಪೂರಕವಾದ ಹೂಡಿಕೆಯನ್ನು ಮುಂದುವರಿಸುತ್ತೇವೆ. ಈ ಮೂಲಕ ಸ್ಥಳೀಯ ರೈತರ ಜೀವನೋಪಾಯ ಸುಧಾರಣೆ ಮತ್ತು ಸುಸ್ಥಿರವಾದ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲಲಿದ್ದೇವೆ. ಅದೇ ರೀತಿ, ಬೆಳೆಗಾರರು ಮತ್ತು ಪೂರೈಕೆ ಚೇನ್ ನ ಪರಿಸರವ್ಯವಸ್ಥೆಯ ಬೆಳವಣಿಗೆಗೆ ನೆರವಾಗುತ್ತಿದ್ದೇವೆ. ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಮತ್ತು ಅವರ ಬದಲಾಗುತ್ತಿರುವ ನಡವಳಿಕೆಗಳಿಗೆ ತಕ್ಕಂತೆ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವತ್ತ  ನಿಂಜಾಕಾರ್ಟ್ ನೊಂದಿಗೆ ನಮ್ಮ ಪೈಲಟ್ ಯೋಜನೆಗಳು ಮತ್ತು ಪ್ರಸಕ್ತ ವ್ಯವಹಾರಗಳು ಗಮನಹರಿಸುತ್ತಿವೆ ಎಂದು ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದರು.`

ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ನ ಮೊದಲ ಹೂಡಿಕೆಗಳಿಂದ ಆಹಾರವನ್ನು ಸುರಕ್ಷಿತಗೊಳಿಸುವುದು ಮತ್ತು ಕೋಟ್ಯಂತರ ಜನರನ್ನು ತಲುಪುವ ನಮ್ಮ ದೂರದೃಷ್ಟಿಗೆ ಒಂದು ಹೆಜ್ಜೆ ಹತ್ತಿರವಾದಂತಾಗಿತ್ತು. ನಮ್ಮ ಬೆಳವಣಿಗೆ ಮತ್ತು ಲಾಭದಾಯಕತೆಯ ಸಾಮರ್ಥ್ಯದ ಮೇಲೆ ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ವಿಶ್ವಾಸ ಇಟ್ಟಿರುವುದಕ್ಕೆ ನಮಗೆ ಅತ್ಯಂತ ಸಂತಸವೆನಿಸುತ್ತಿದೆ. ಗ್ರಾಹಕರು ಮತ್ತು ರೈತರ ಜೀವನದ ಮೇಲೆ ಧನಾತ್ಮಕವಾದ ರೀತಿಯಲ್ಲಿ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ ನಾವು ನಮ್ಮ ಬಂಡವಾಳ ಹೂಡಿಕೆಯನ್ನು ಮುಂದುವರಿಸುತ್ತೇವೆ  ನಿಂಜಾಕಾರ್ಟ್ ನ ಸಿಇಒ ಮತ್ತು ಸಹಸಂಸ್ಥಾಪಕ ತಿರುಕುಮಾರನ್ ನಾಗರಾಜನ್ ಹೇಳಿದರು.
 
ಮುಂಬರುವ ತಿಂಗಳುಗಳಲ್ಲಿ ನಿಂಜಾಕಾರ್ಟ್ ಈ ಹೂಡಿಕೆಯನ್ನು ಹೊಸ ಮಾರುಕಟ್ಟೆ, ಹೊಸ ಆಫರ್ ಗಳು ಮತ್ತು ಹೊಸ ಗ್ರಾಹಕರನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ಉಪಕ್ರಮಗಳಿಗೆ ಬಳಸಿಕೊಳ್ಳಲಿದೆ. ಇದೇ ವೇಳೆ, ಸಪ್ಲೈ ಚೇನ್ ಅನ್ನು ಮತ್ತಷ್ಟು ಸಮರ್ಥ, ವಿಶ್ವಾಸಾರ್ಹತೆ ಮತ್ತು ಲಾಭದಾಯಕಗೊಳಿಸುವುದನ್ನು ಮುಂದುವರಿಸಲಿದೆ. ಈ ಹೂಡಿಕೆ ಪ್ರಕ್ರಿಯೆಯು 2020 ರ ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Follow Us:
Download App:
  • android
  • ios