Asianet Suvarna News Asianet Suvarna News

ಬಜೆಟ್‌ ಫೋನ್‌ಗೆ ಹೊಸ ಸೇರ್ಪಡೆ: ವಿವೋ ಸ್ಮಾರ್ಟ್‌ಫೋನ್‌ಗೆ ಫುಲ್‌ ಬೇಡಿಕೆ

ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನುಗಳದ್ದೇ ಕಾರುಬಾರು. ಹೊಸ ಹೊಸ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್ 10 ಸಾವಿರ ರೂ.ಗೆ ಸಿಗುತ್ತಿವೆ. ವಿವೋ ಈಗ ಹೊಸ ಫೋನ್‌ವೊಂದನ್ನು ಬಿಡುಗಡೆ ಮಾಡಿದೆ. 

Vivo U20 Smartphone Launched in India Price Features
Author
Bengaluru, First Published Dec 5, 2019, 4:42 PM IST

ಬೆಂಗಳೂರು (ಡಿ.05): ಜನಪ್ರಿಯ ಮೊಬೈಲ್ ತಯಾರಕ ಕಂಪನಿ ವಿವೋ, ಚೆಂದದ ಫೋಟೋ ಸೆರೆಹಿಡಿಯುವ ಎಐ ಟ್ರಿಪ್ಪಲ್‌ ಕ್ಯಾಮರದಂಥಾ ವಿಶೇಷತೆ ಇರುವ ಬಜೆಟ್‌ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿವೋನ U ಸೀರೀಸ್‌ಗೆ ಸೇರ್ಪಡೆಯಾಗಿರೋ ಈ ಮೊಬೈಲ್‌ ಮಾಡೆಲ್ ಹೆಸರು ವಿವೋ U20 ಯಾಗಿದೆ. ಇದು ಎರಡು ಮಾದರಿಗಳಲ್ಲಿ ಲಭ್ಯ. 4 GB RAM, 64 GB ಮೆಮೊರಿ ಹಾಗೂ 6 GB RAM, 64 GB ಮೆಮೊರಿ ಆವೃತ್ತಿಗಳು ಲಭ್ಯ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೆಜ್‌ನ್ನು 256 GBಗಳಿಗೆ ವಿಸ್ತರಿಸಬಹುದು.

ಇದನ್ನೂ ಓದಿ | ಏರ್‌ಟೆಲ್‌, ವೊಡಾಫೋನ್‌ ಬಳಿಕ ಜಿಯೋ ದರ ಏರಿಕೆ...

6.53 ಇಂಚಿನ ಸ್ಕ್ರೀನ್‌ ಹೊಂದಿರುವ ಈ ಫೋನ್, 18 ವ್ಯಾಟ್‌ನ ಡ್ಯುಯೆಲ್‌ ಚಾರ್ಜಿಂಗ್‌ ಆಯ್ಕೆ ಹೊಂದಿದ್ದು ಫಾಸ್ಟ್‌ ಆಗಿ ಚಾರ್ಜ್ ಆಗುತ್ತೆ. 

ಆಕ್ಟಾಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 675 ಚಿಪ್‌ಸೆಟ್ ಹೊಂದಿರುವ ಈ ಫೋನ್ ಆ್ಯಂಡ್ರಾಯಿಡ್ 9 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

5000 mAh ಸಾಮರ್ಥ್ಯದ ಬ್ಯಾಟರಿ ಇದೆ. 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ, 16ಎಂಪಿ ರೇರ್‌ ಕ್ಯಾಮೆರಾ, 8 ಎಂಪಿಯ ಸೂಪರ್‌ ವೈಡ್‌ ಆ್ಯಂಗಲ್‌ ಕ್ಯಾಮೆರಾ, 2 ಎಂಪಿಯ ಸೂಪರ್‌ ಮ್ಯಾಕ್ರೋ ಕ್ಯಾಮೆರಾವಿದೆ.

ಇದನ್ನೂ ಓದಿ | ಏರ್ಟೆಲ್ ನೂತನ ದರಗಳು ಪ್ರಕಟ: ಎಷ್ಟು ಎಕ್ಸ್‌ಟ್ರಾ ಕೊಡ್ಬೇಕು? ಇಲ್ಲಿದೆ ಚಾರ್ಟ್...

ಡ್ಯುಯಲ್ ಸಿಮ್ ಕಾರ್ಡ್ ಸೌಲಭ್ಯ ಹೊಂದಿರುವ ಈ ಫೋನ್ ತೂಕ ಬರೇ 193 ಗ್ರಾಂ ಮಾತ್ರ! ಬ್ಲೇಜ್ ಬ್ಲೂ, ರೇಸಿಂಗ್ ಬ್ಲಾಕ್ ಬಣ್ಣಗಳಲ್ಲಿ ಇದು ಲಭ್ಯವಿದೆ. ಫೇಸ್ ಅನ್ಲಾಕ್, ಫಿಂಗರ್‌ಪ್ರಿಂಟ್ ಸೆನ್ಸರ್ ಫೀಚರ್‌ಗಳನ್ನು ಕೂಡಾ ಈ ಫೋನ್ ಹೊಂದಿದೆ. 

ಇತರ ಕಂಪನಿಗಳ ಬಜೆಟ್ ಫೋನ್‌ಗಳಿಗೆ ಪೈಪೋಟಿಯೊಡ್ಡಲು ಕಳೆದ ಸೆಪ್ಟಂಬರ್‌ನಲ್ಲಿ ವಿವೋ U10 ಫೋನ್‌ನ್ನು ಬಿಡುಗಡೆ ಮಾಡಿತ್ತು. 

ಅಂದ ಹಾಗೆ ಈ ಹೊಸ ಫೋನ್ ಬೆಲೆ 10,990 ರು. ಆಗಿದೆ.

Follow Us:
Download App:
  • android
  • ios