ಏರ್ಟೆಲ್ ನೂತನ ದರಗಳು ಪ್ರಕಟ: ಎಷ್ಟು ಎಕ್ಸ್‌ಟ್ರಾ ಕೊಡ್ಬೇಕು? ಇಲ್ಲಿದೆ ಚಾರ್ಟ್
ಡಿ.03ರಿಂದ ಟೆಲಿಕಾಂ ಸೇವೆಗಳ ದರದಲ್ಲಿ ಏರಿಕೆ; ಏರ್ಟೆಲ್ ನೂತನ ದರ ಪಟ್ಟಿ ಪ್ರಕಟ; ಯಾವ್ಯಾವ ಪ್ಲಾನ್‌ಗೆ ಇನ್ಮುಂದೆ ಎಷ್ಟೆಷ್ಟು? ಇಲ್ಲಿದೆ ವಿವರ....
ಬೆಂಗಳೂರು (ಡಿ.02): ವ್ಯವಹಾರದಲ್ಲಿ ನಷ್ಟವನ್ನು ಸರಿತೂಗಿಸಲು ಭಾರತೀಯ ಟೆಲಿಕಾಂ ಕಂಪನಿಗಳು ದರ ಏರಿಕೆಯ ಮೊರೆ ಹೋಗಿವೆ. ಏರ್ಟೆಲ್ ಕೂಡಾ ನಾಳೆ (ಡಿ.03) 2019 ರಿಂದ ದರಗಳನ್ನು ಹೆಚ್ಚಿಸುತ್ತಿದೆ. ಏರ್ಟೆಲ್ ತನ್ನ ವಿವಿಧ ಪ್ಲಾನ್‌ಗಳಿಗೆ ದಿನಕ್ಕೆ 50 ಪೈಸೆಯಿಂದ 2.85 ರೂ ವರೆಗೆ ದರವನ್ನು ಹೆಚ್ಚಿಸಿದೆ.
2 ದಿನಗಳ ವ್ಯಾಲಿಡಿಟಿ, 150MB ಡೇಟಾ ಹೊಂದಿರುವ ₹19 ಪ್ಲಾನ್‌ನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ, 100 ಹೆಚ್ಚುವರಿ SMSಗಳನ್ನು ಈ ಪ್ಲಾನ್‌ಗೆ ಸೇರಿಸಲಾಗಿದೆ.
28 ದಿನಗಳ ಅವಧಿಗೆ ₹26.66 ಟಾಕ್‌ಟೈಮ್, 100MB ಡೇಟಾವನ್ನು ಒಳಗೊಂಡಿದ್ದ ₹35ರ ಪ್ಲಾನ್ ದರ ಹೆಚ್ಚಾಗಿದೆ. ಇದರ ಬೆಲೆ ಇನ್ಮುಂದೆ ₹49 ಆಗಿದೆ. ₹38.52 ಟಾಕ್ ಟೈಮ್ ಸಿಗುತ್ತೆ.
28 ದಿನಗಳ ಅವಧಿಗೆ ₹130 ಮೌಲ್ಯದ ಟಾಕ್‌ಟೈಮ್, 200MB ಡೇಟಾ, 300 SMS ನೀಡುತ್ತಿದ್ದ ₹65 ಪ್ಲಾನ್ ದರ ನಾಳೆಯಿಂದ ₹79 ಆಗಲಿದೆ. ಇದರಲ್ಲಿ ₹63.95 ಟಾಕ್‌ಟೈಮ್ ಸಿಗಲಿದೆ.
ಅನಿಯಮಿತ ಕಾಲಿಂಗ್, 300SMS, 2GB ಡೇಟಾ ಒಳಗೊಂಡಿದ್ದ ಮಾಸಿಕ ₹129ರ ಪ್ಲಾನ್ ಬೆಲೆ ಇನ್ಮುಂದೆ ₹148 ಆಗಿರಲಿದೆ. ಇದರಲ್ಲಿ ಏರ್ಟೆಲ್ ಎಕ್ಸ್ಟ್ರೀಮ್, ವಿಂಕ್ ಮತ್ತು ಹಲೋ ಟ್ಯೂನ್ ಸೌಲಭ್ಯವನ್ನು ಸೇರಿಸಲಾಗಿದೆ.
ಇದನ್ನೂ ಓದಿ | ಗೂಗಲ್‌ನ ಸಣ್ಣ ಕೆಲಸವೊಂದು ಮಾಡಿಕೊಡಿ; ಬರೋಬ್ಬರಿ 10 ಕೋಟಿ ರೂ. ಪಡೆಯಿರಿ!..
ಅನಿಯಮಿತ ಕಾಲಿಂಗ್, 100SMS, 1GB ಡೇಟಾ ಸಿಗುತ್ತಿದ್ದ ₹169 ಪ್ಲಾನ್‌ಗೆ ಬಳಕೆದಾರರು ಇನ್ಮುಂದೆ ₹248 ತೆರಬೇಕು. ಇದರಲ್ಲಿ 1.5GB ಹೈಯರ್ ಡೇಟಾ, ಏರ್ಟೆಲ್ ಎಕ್ಸ್ಟ್ರೀಮ್, ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ ಮತ್ತು ಆ್ಯಂಟಿ ವೈರಸ್ ಪ್ರೊಟೆಕ್ಷನ್ ಸೌಲಭ್ಯಗಳನ್ನು ನೀಡಲಾಗಿದೆ.
ಅನಿಯಮಿತ ಕಾಲಿಂಗ್, 100SMS, 1.5GB ಡೇಟಾ ಒಳಗೊಂಡಿದ್ದ ₹199 ಪ್ಲಾನ್‌ಗೆ ಬಳಕೆದಾರರು ಇನ್ಮುಂದೆ ₹248 ಕೊಡಬೇಕು. ಮೇಲಿನಂತೆ ಇದರಲ್ಲೂ ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ ಮತ್ತು ಆ್ಯಂಟಿ ವೈರಸ್ ಪ್ರೊಟೆಕ್ಷನ್ ಫೀಚರ್‌ಗಳನ್ನು ನೀಡಲಾಗಿದೆ.
ಇದನ್ನೂ ಓದಿ | ರಿಲಯನ್ಸ್ ಜಿಯೋ ತಂದಿದೆ ಹೊಸ ಪ್ರಿಪೇಯ್ಡ್ ಪ್ಲಾನ್: ಅತೀ ಅಗ್ಗ, ಡೇಟಾ ಬೇಜಾನ್...
₹500ರ ಕೆಳಗಿನ ಪ್ಲಾನ್:
ಜನಪ್ರಿಯವಾಗಿರುವ ₹249 ಪ್ಲಾನ್‌ಗೆ ಗ್ರಾಹಕರು ಇನ್ಮುಂದೆ ₹298 ಪಾವತಿಸಬೇಕು. ಅನ್ಲಿಮಿಟೆಡ್ ಕಾಲಿಂಗ್, 100 SMS, ಪ್ರತಿದಿನ 2GB ಡೇಟಾ, ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಹಲೋ ಟ್ಯೂನ್ ಮತ್ತು ಆ್ಯಂಟಿ ವೈರಸ್ ಪ್ರೊಟೆಕ್ಷನ್ ಫೀಚರ್‌ಗಳು ಸಿಗಲಿದೆ.
ಅದೇ ರೀತಿಯಲ್ಲಿ, 82 ದಿನಗಳ ವ್ಯಾಲಿಡಿಟಿಯ ₹448 ಪ್ಲಾನ್ ದರ ₹698 ಆಗಿದೆ. ವ್ಯಾಲಿಡಿಟಿಯನ್ನು 84 ದಿನಗಳಿಗೆ ಏರಿಸಲಾಗಿದೆ. ₹449 ಪ್ಲಾನ್ ಬೆಲೆಯೂ ₹698 ಆಗಿದ್ದು, ವ್ಯಾಲಿಡಿಯನ್ನು 82ರಿಂದ 84ಕ್ಕೆ ಏರಿಸಲಾಗಿದೆ. ಇವುಗಳ ಜೊತೆಗೆ ಇತರ ಅನ್ಲಿಮಿಟೆಡ್ ಕರೆ, SMS, ಸೌಲಭ್ಯಗಳನ್ನು ಕೂಡಾ ನೀಡಲಾಗುತ್ತಿದೆ.