TikTok Kitchen ಟಿಕ್‌ಟಾಕ್ ವೈರಲ್ ಫುಡ್ ವಿಡಿಯೋ ಇದೀಗ ಆರ್ಡರ್ ಮಾಡಲು ಸಾಧ್ಯ!

  • ಭಾರತ ಸೇರಿದಂತೆ ಹಲವು ದೇಶಗಳಲ್ಲಿ  ಟಿಕ್‌ಟಾಕ್‌ಗೆ  ಎದುರಾಗಿತ್ತು ಭಾರಿ ವಿರೋಧ
  • ವಿರೋಧ, ನಿಷೇಧ ಭೀತಿಗಳ ನಡುವೆ ನಿಧಾನವಾಗಿ ಹೊಸ ಕ್ಷೇತ್ರದತ್ತ ಟಿಕ್‌ಟಾಕ್
  • ಫುಡ್ ಡೆಲಿವರಿ ಆರಂಭಿಸುತ್ತಿದೆ ಟಿಕ್‌ಟಾಕ್, ವೈರಲ್ ಫುಡ್ ವಿಡಿಯೋ ಆರ್ಡರ್‌ಗೆ ಸಿದ್ದ
Viral videos into actual dishes that users can order TikTok set to launch food delivery service in US ckm

ಸ್ಯಾನ್ ಫ್ರಾನ್ಸಿಸ್ಕೋ(ಡಿ.19):  ಟಿಕ್‌ಟಾಕ್(TikTok) ಯಾರಿಗೆ ತಾನೆ ಗೊತ್ತಿಲ್ಲ. ಶಾರ್ಟ್ ವಿಡಿಯೋ ಮೂಲಕ ಧೂಳೆಬ್ಬಿಸುತ್ತಿರುವ ಆ್ಯಪ್ ಭಾರತ(India) ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಟಿಕ್‌ಟಾಕ್ ಅತ್ಯಂತ ಜನಪ್ರಿಯವಾಗಿದೆ. ಇದೀಗ ಟಿಕ್‌ಟಾಕ್ ನಿಧಾನವಾಗಿ ಹೊಸ ಕ್ಷೇತ್ರದತ್ತ ಕಾಲಿಡುತ್ತಿದೆ. ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ ಫುಡ್ ವಿಡಿಯೋಗಳನ್ನು(Virat Video) ಇದೀಗ ಆರ್ಡರ್(Order0 ಮಾಡಲು ಸಾಧ್ಯವಿದೆ. ಹೌದು, ಟಿಕ್‌ಟಾಕ್ ಫುಡ್ ಡೆಲಿವರಿ(Food Deliver Service) ಆರಂಭಿಸುತ್ತಿದೆ.

ಮೊದಲ ಹಂತದಲ್ಲಿ ಈ ಫುಡ್ ಡೆಲಿವರಿ ಅಮೆರಿಕದಲ್ಲಿ ಆರಂಭಗೊಳ್ಳುತ್ತಿದೆ. ಶೀಘ್ರದಲ್ಲೇ ಟಿಕ್‌ಟಾಕ್ ಕಿಚನ್(TikTok Kitchen) ಆರಂಭಗೊಳ್ಳಲಿದೆ. ಈ ಟಿಕ್‌ಟಾಕ್ ಕಿಚನ್ ವಿಶೇಷತೆ ಎಂದರೆ , ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ ಫುಡ್(Food) ಐಟಮ್ ವಿಡಿಯೋಗಳನ್ನು ನೋಡಿ ಬಾಯಲ್ಲಿ ನೀರೂರಿಸುವ ಅಗತ್ಯವಿಲ್ಲ. ಅದೇ ಆಹಾರ, ತಿನಿಸನ್ನು ಆರ್ಡರ್ ಮಾಡಿ ಸವಿಯಬಹುದು. ಇಂತಹ ಅವಕಾಶವನ್ನು ಟಿಕ್‌ಟಾಕ್ ಕಿಚನ್ ನೀಡುತ್ತಿದೆ.

Social Media Law Violation: ಮೆಟಾ, ಟ್ವಿಟರ್, ಟಿಕ್‌ಟಾಕ್‌ಗೆ ಬಿತ್ತು ಭರ್ಜರಿ ದಂಡ!

ಹೊಸ ವರ್ಷದಿಂದ ಅಮೆರಿಕದಲ್ಲಿ(America) ಟಿಕ್‌ಟಾಕ್ ಕಿಚನ್ ಆರಂಭಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಅಮೆರಿಕದ 300 ಭಾಗಗಳಲ್ಲಿ ಈ ಫುಡ್ ಸರ್ವೀಸ್ ಸೇವೆ ಲಭ್ಯವಿದೆ. ವರ್ಷಾಂತ್ಯದಲ್ಲಿ ಈ ಸಂಖ್ಯೆಯನ್ನು 1,000ಕ್ಕೆ ಏರಿಸುವ ಗುರಿಯನ್ನು ಟಿಕ್‌ಟಾಕ್ ಕಿಚನ್ ಇಟ್ಟುಕೊಂಡಿದೆ. ಸದ್ಯ ಅಮೆರಿಕದಲ್ಲಿ ಟಿಕ್‌ಟಾಕ್ ಕಿಚನ್ ಆರಂಭಗೊಳ್ಳುತ್ತಿದೆ. ಫಲಿತಾಂಶ ನೋಡಿ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಯಾಗಲಿದೆ.

ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ ಫುಡ್ ವಿಡಿಯೋಗಳಾದ ಬರ್ಗರ್, ಪಾಸ್ತಾ, ಬೇಕಡ್ ಫೆಟಾ ಪಾಸ್ತಾ, ಕಾರ್ನ್ ರಿಬ್ಸ್ ಸೇರಿದಂತೆ ಹಲವು ಟಿಕ್‌ಟಾಕ್ ವಿಡಿಯೋಗಳು ಭಾರಿ ವೈರಲ್ ಆಗಿವೆ. ಹೀಗೆ ವೈರಲ್ ಆಗುವ ಫುಡ್ ವಿಡಿಯೋಗಳನ್ನು ಕೇವಲ ನೋಡಿ ಆನಂದಿಸುತ್ತಿದ್ದ ಮಂದಿಗೆ ಇದೀಗ ಇದೇ ಫುಡ್ ಐಟಮ್ ಆರ್ಡರ್ ಮಾಡಿ ಸವಿಯಲು ಸಾಧ್ಯವಿದೆ. ಇದರಲ್ಲಿ ಎರಡು ವಿಭಾಗಗಳು ಇರಲಿವೆ. ಒಂದು ಟಿಕ್‌ಟಾಕ್‌ ಕಿಚನ್ ಮೂಲಕ ಸವಿಯಬಹುದಾದ ಆಹಾರ ತಿನಿಸುಗಳು, ಮತ್ತೊಂದು  ವೈರಸ್ ವಿಡಿಯೋ ತಿನಿಸುಗಳು.

16ರ ಚೆಲುವೆಗೆ TikTokನಲ್ಲಿ 100 ಮಿಲಿಯನ್ ಫಾಲೋವರ್ಸ್, ಜಗತ್ತಿನಲ್ಲೇ ಈಕೆ ನಂ.1

ಟಿಕ್‌ಟಾಕ್ ಮೂಲಕ ಆಹಾರ ವಿಡಿಯೋ ಹಾಕುವವರ ಜೊತೆ ಟಿಕ್‌ಟಾಕ್ ಒಪ್ಪಂದ ಮಾಡಿಕೊಳ್ಳಲಿದೆ. ಇದರಿಂದ ಆಹಾರದಲ್ಲಿ ಆಸಕ್ತಿ ಇರವು ಅನೇಕರಿಗೆ ಇದೊಂದು ಸಣ್ಣ ಉದ್ಯಮವಾಗಲಿದೆ. ಇದರಿಂದ ಆದಾಯವನ್ನು ಪಡೆಯಲು ಸಾಧ್ಯವಿದೆ.  ಈ ಟಿಕ್‌ಟಾಕ್ ಕಿಚನ್‌ನಿಂದ ಆಹಾರ ತಯಾರಿಸುವವರಿಗೂ ಹಾಗೂ ಟಿಕ್‌ಟಾಕ್ ವಿಡಿಯೋ ಆನಂದಿಸುವ ಗ್ರಾಹಕರಿಗೂ ನೆರವಾಗಲಿದೆ. ಇಬ್ಬರು ಸಂತುಷ್ಠರಾಗಲಿದ್ದಾರೆ ಅನ್ನೋದು ಟಿಕ್‌ಟಾಕ್ ಕಿಚನ್ ಅಭಿಪ್ರಾಯ.

ಟಿಕ್‌ಟಾಕ್ ಬಳಕೆದಾರರಲ್ಲಿ ನಗುವಿನ ಹರ್ಷ ತುಂಬಲು, ಆನಂದಕ್ಕೆ ಮತ್ತಷ್ಟು ಸಿಹಿ ಸೇರಿಸಲು ಟಿಕ್‌ಟಾಕ್ ಈ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಟಿಕ್‌ಟಾಕ್ ಯಾವುದೇ ರೆಸ್ಟೋರೆಂಟ್ ಮಾಡುವ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಆದರೆ ಟಿಕ್‌ಟಾಕ್ ಕಿಚನ್ ವಿಭಿನ್ನವಾಗಿದೆ. ವೈರಲ್ ವಿಡಿಯೋಗಳನ್ನು ಆರ್ಡರ್ ಮಾಡುವ ಹಾಗೂ ಸವಿಯುವ ಹೊಸ ವಿಧಾನ ಭಾರಿ ಸಂಚಲನ ಮೂಡಿಸಲಿದೆ ಎಂದು ಮಾರ್ಕೆಂಟಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೇ ಅಲ್ಲ ಟಿಕ್‌ಟಾಕ್ ಕಿಚನ್ ಶೀಘ್ರದಲ್ಲೇ ಇತರ ರಾಷ್ಟ್ರಗಳಲ್ಲೂ ಆರಂಭಗೊಳ್ಳುವ ದಿನ ದೂರವಿಲ್ಲ ಎನ್ನುತ್ತಿದ್ದಾರೆ.

ಟಿಕ್‌ಟಾಕ್ ವಿಡಿಯೋಗಳು ಅದೆಷ್ಟು ಜನಪ್ರಿಯವಾಗಿದೆ ಅನ್ನೋದು ಬಿಡಿಸಿಹೇಳಬೇಕಾಗಿಲ್ಲ. ಇದೀಗ ಟಿಕ್‌ಟಾಕ್ ಕಿಚನ್ ಅದೇ ರೀತಿ ಪ್ರಸಿದ್ಧಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ನಿಷೇಧದ ಭೀತಿ, ಸತತ ವಾರ್ನಿಂಗ್‌ನಿಂದ ಇದೀಗ  ಟಿಕ್‌ಟಾಕ್ ಹೊಸ ಕ್ಷೇತ್ರದತ್ತ ವಾಲುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೊಸ ಉದ್ಯಮದ ಮೂಲಕ ಟಿಕ್‌ಟಾಕ್ ಅಗತ್ಯ ಸೇವೆಯಾಗಿ ಬದಲಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
 

Latest Videos
Follow Us:
Download App:
  • android
  • ios